Pharma Company Blast: ಫಾರ್ಮ ಫ್ಯಾಕ್ಟರಿ ರಿಯಾಕ್ಟರ್ ಸ್ಫೋಟ–18ಮಂದಿ ಸಾವು.

Janataa24 NEWS DESK

Pharma Company Blast: ಫಾರ್ಮ ಫ್ಯಾಕ್ಟರಿ ರಿಯಾಕ್ಟರ್ ಸ್ಫೋಟ–18ಮಂದಿ ಸಾವು.

ನೆರೆಯ ರಾಜ್ಯ ಆಂಧ್ರ ಪ್ರದೇಶದಲ್ಲಿ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ರಿಯಾಕ್ಟರ್‌ ಸ್ಫೋಟ ಸಂಭವಿಸಿ 18 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದು, ಸುಮಾರು 40ಕ್ಕೂ ಹೆಚ್ಚು ಕಾರ್ಮಿಕರು ಗಾಯಗೊಂಡಿರುವ ಘಟನೆ ಆಂಧ್ರದ ಅನಕಪಲ್ಲಿಯಲ್ಲಿ ನಡೆದಿದೆ.

ಈ ಸ್ಥಾವರದಲ್ಲಿ ಸುಮಾರು 380 ಉದ್ಯೋಗಿಗಳು ಎರಡು ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಧ್ಯಾಹ್ನ 2.15ರ ಸುಮಾರಿಗೆ ಊಟದ ಹೊತ್ತಿಗೆ ಈ ಸ್ಫೋಟ ನಡೆದಿದೆ. ಈ ಸಂದರ್ಭದಲ್ಲಿ ಹೆಚ್ಚು ಮಂದಿ ಆವರಣದಲ್ಲಿ ಇರಲಿಲ್ಲ. ಇಲ್ಲದಿದ್ದಲ್ಲಿ ಸಾವು ನೋವುಗಳ ಸಂಖ್ಯೆ ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆಯಿತ್ತು. ಸ್ಫೋಟದಲ್ಲಿ ಉಂಟಾದ ಹೊಗೆ ಸುತ್ತಮುತ್ತಲ ಗ್ರಾಮಗಳಲ್ಲಿ ಆವರಿಸಿರೋ ದೃಶ್ಯ ಸ್ಫೋಟದ ತೀವ್ರತೆಗೆ ಸಾಕ್ಷಿಯಾಗಿವೆ.

ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಹಾಗೂ ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ನಡೆಸಿದೆ. ಸ್ಫೋಟದ ತೀವ್ರಗೆ ಹಲವು ಮೃತದೇಹಗಳು ಸುಟ್ಟು ಕರಕಲಾಗಿದೆ. ಗಾಯಗೊಂಡವನ್ನು ರಕ್ಷಣೆ ಮಾಡಿ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. 6 ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಅಗ್ನಿಶಾಮಕ ದಳ ಸಂಪೂರ್ಣವಾಗಿ ಆರಿಸಿದೆ.

ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಈ ದುರ್ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಜೊತೆಗೆ ಸಂತ್ರಸ್ತರಿಗೆ ಅಗತ್ಯ ನೆರವಿಗೆ ಸೂಚಿಸಿದ್ದಾರೆ. ಇಂದು ಚಂದ್ರಬಾಬು ನಾಯ್ದು ಘಟನಾ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.

ಕಾರ್ಖಾನೆ ಮುಂದೆ ಜಮಾಯಿಸಿದ ಕಾರ್ಮಿಕರು, ಮೃತ ಸಂತ್ರಸ್ತರ ಕುಟುಂಬಗಳಿಗೆ ಹಾಗೂ ಗಾಯಗೊಂಡವರಿಗೆ ಪರಿಹಾರ ನೀಡಬೇಕು. ಹಾಗೆ ರಿಯಾಕ್ಟರ್‌ ಸ್ಫೋಟಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹಗಳನ್ನ ವ್ಯಕ್ತ ಪಡಿಸಿದ್ದಾರೆ. ಒಟ್ನಲ್ಲಿ ಸರಿಯಾದ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದಿರೋದು ಈ ದುರ್ಘಟನೆಗೆ ಕಾರಣ ಎಂಬುದು ಮೇಲ್ನೋಟಕ್ಕೆ ಗೊತ್ತಾಗ್ತಿದೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Pavagada: ಬೆಸ್ಕಾಂ ಇಲಾಖೆಯಲ್ಲಿಯೇ TC ಕಳ್ಳರಿದ್ದಾರೆ..!

 

Leave a Reply

Your email address will not be published. Required fields are marked *