Janataa24 NEWS DESK
Pavagada: ವೈ.ಎನ್.ಹೊಸಕೋಟೆಯಲ್ಲಿ ಕೋಟ್ಯಾಂತ ರೂ ಬೆಲೆಬಾಳುವ ಸಂತೆ ಮೈದಾನದ ಸರಕಾರಿ ಜಮೀನು ಪ್ರಭಾವಿ ಮುಖಂಡರಿಂದ ಭೂ ಕಬಳಿಕೆ ಕಂದಾಯ ಇಲಾಖೆಯಿಂದ ಸರ್ವೆ,ಅಕ್ರಮ ಒತ್ತುವರಿ ಜಾಗಕ್ಕೆ ಬ್ರೌಂಡ್ರಿ ಪಿಕ್ಸ್.
ಪಾವಗಡ: ಸರ್ಕಾರಿ ವ್ಯಾಪ್ತಿಗೆ ಒಳಪಟ್ಟಿದ್ದ ಕೋಟ್ಯಂತರ ರು ಬೆಲೆಬಾಳುವ ಎರಡು ಎಕರೆ ಜಮೀನು ಒತ್ತುವರಿ ವಿಚಾರಕ್ಕೆ ಸಂಬಂಧಪಟ್ಟಂತೆ ಜಿಪಂ,ಸಿಇಒ ಹಾಗೂ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದ ಹಿನ್ನಲೆಯಲ್ಲಿ ಶನಿವಾರ ಕಂದಾಯ ಹಾಗೂ ಸರ್ವೆ ಇಲಾಖೆಯ ಅಧಿಕಾರಿಗಳು ತಾಲೂಕಿನ ವೈ.ಎನ್.ಹೊಸಕೋಟೆಗೆ ಭೇಟಿ ನೀಡಿ ಸಂತೆ ಮೈದಾನಕ್ಕೆ ಮೀಸಲಿರಿಸಿದ್ದ ಸರ್ಕಾರಿ ಜಮೀನಿನ ಪರಿಶೀಲನೆ ಕಾರ್ಯ ನಡೆಸಿದರು.
ಪಾವಗಡ ತಾಲೂಕು ವೈ.ಎನ್.ಹೊಸಕೋಟೆ ಗ್ರಾಮದಲ್ಲಿ ಇದೇ ವೈ.ಎನ್.ಹೊಸಕೋಟೆ ಗ್ರಾಪಂ ವ್ಯಾಪ್ತಿಗೆ ಒಳಪಟ್ಟ ಮೂರು ಎಕರೆ ಜಮೀನಿದ್ದು ಈ ಜಮೀನನ್ನು ರೈತರು ಹಾಗೂ ಗ್ರಾಹಕರ ಉಪಯೋಗಕ್ಕಾಗಿ ಮೀಸಲಿರಿಸಲಾಗಿದೆ.ಪ್ರತಿ ಮಂಗಳವಾರ ಈ ಜಾಗದಲ್ಲಿ ತರಕಾರಿ ಹಾಗೂ ಹಣ್ಣು ಹೂವು ಇತರೆ ತರಕಾರಿ,ಇತರೆ ವ್ಯಾಪಾರ ವ್ಯವಹಾರಗಳ ಸಂತೆ ಮಾರುಕಟ್ಟೆ ನಡೆಸಲಾಗುತ್ತಿದೆ.ಗ್ರಾಪಂನಿಂದ ಸಂತೆ ಮೈದಾನಕ್ಕೆ ಮೀಸಲಿರಿಸಿದ್ದ ಮೂರು ಎಕರೆ ಸರ್ಕಾರಿ ಜಮೀನನ್ನು
ವೈ.ಎನ್.ಹೊಸಕೋಟೆಯ ಪ್ರಭಾವಿ ಮುಖಂಡರೊಬ್ಬರು ಮೂರು ಸರ್ಕಾರಿ ಜಮೀನಿನ ಪೈಕಿ ಕೋಟ್ಯಂತರು ರು,ಬೆಲೆಬಾಳುವ ಎರಡು ಎಕರೆ ಜಮೀನು ಅಕ್ರಮ ಒತ್ತುವರಿ ಮಾಡಿಕೊಳ್ಳುವ ಮೂಲಕ ನಿವೇಶನ ಹಂಚಿಕೆ ಮಾಡಿ ಸ್ಥಳೀಯರಿಗೆ ಮಾರಾಟ ಮಾಡಿದ್ದು,ಸ್ಥಳೀಯ ಸಾರ್ವಜನಿಕರು ಗಮನ ಸೆಳೆದ ಮೇರೆಗೆ ಸಂತೆ ಮಾರುಕಟ್ಟೆ ಮೈದಾನದ ಜಾಗಕ್ಕೆ ಸಂಬಂಧಪಟ್ಟ ಫಹಣಿ ಹಾಗೂ ಇತರೆ ಅಗತ್ಯ ದಾಖಲೆಯೊಂದಿಗೆ ಇಲ್ಲಿನ ಸಾಮಾಜಿಕ ಹೋರಾಟಗಾರರಾದ ಹಾಗೂ ಮುಖಂಡ ಎನ್.ರಾಮಾಂಜಿನಪ್ಪ ಹಾಗೂ ನಾಗೇಶ್ಬಾಬು ದಾಖಲೆ ಪರಿಶೀಲನೆ ನಡೆಸಿದಾಗ ಅಕ್ರಮ ಒತ್ತುವರಿ ಬೆಳಕಿಗೆ ಬಂದಿದೆ.ಈ ಸಂಬಂಧ ಸಂತೆ ಮೈದಾನಕ್ಕೆ ಮೀಸಲಿರಿಸಿದ್ದ ಮೂರು ಎಕರೆ ಪೈಕಿ ಎರಡು ಎಕರೆ ಒತ್ತುವರಿಯಾಗಿದೆ ಪರಿಶೀಲಿಸಿ ಕ್ರಮವಹಿಸುವಂತೆ ಕಳೆದ ಎರಡು ತಿಂಗಳ ಹಿಂದೆ ಜಿಪಂ ಸಿಇಒ ಹಾಗೂ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರು.
ಈ ಹಿನ್ನಲೆಯಲ್ಲಿ ಮೇ 2ಹಾಗೂ ಮೇ 3ರಂದು ವಿವಾದಿತ ಸ್ಥಳಕ್ಕೆ ಭೇಟಿ ನೀಡಿದ ಕಂದಾಯ,ತಾಪಂ ಗ್ರಾಪಂ ಹಾಗೂ ತಾಲೂಕು ಸರ್ವೆ ಇಲಾಖೆಯ ಅಧಿಕಾರಿಗಳು ಗ್ರಾಪಂನಿಂದ ಮೀಸಲಿರಿಸಿದ್ದ ಸಂತೆ ಮೈದಾನದ ಜಮೀನಿನ ಸರ್ವೆ ಕಾರ್ಯ ನಡೆಸಿ ಕಲ್ಲು ಹೂಳುವ ಮೂಲಕ ಬೌಂಡ್ರಿ ಪಿಕ್ಸ್ ಮಾಡಿದರು.
ಈ ಸಂಬಂಧ ಸಾಮಾಜಿಕ ಹೋರಾಟಗಾರ ಎನ್.ರಾಮಾಂಜಿನಪ್ಪ ಮಾತನಾಡಿ,ತಾಲೂಕಿನ ವೈ.ಎನ್.ಹೊಸಕೋಟೆ ಗ್ರಾಮದಲ್ಲಿ ಇದೇ ಗ್ರಾಮದ ಸರ್ವೆ ನಂ,240ರಲ್ಲಿ ಮೂರು ಎಕರೆ ಸರ್ಕಾರಿ ಜಮೀನಿನಿದ್ದು ಈ ಜಾಗವನ್ನು 1960-61ರಲ್ಲಿ ಗ್ರಾಪಂನಿಂದ ಸಂತೆ ಮಾರುಕಟ್ಟೆ ಮೀಸಲಿರಿಸಲಾಗಿದೆ.ಮೀಸಲಿರಿಸಿದ್ದ ಮೈದಾನದಲ್ಲಿ ಸುತ್ತಮುತ್ತಲ ಗ್ರಾಮಗಳ ರೈತರು ಹಾಗೂ ಗ್ರಾಹಕರು ಗ್ರಾಪಂಗೆ ಸುಂಕ ಕಟ್ಟುವ ಮೂಲಕ ತರಕಾರಿ ಹಾಗೂ ಇತರೆ ವ್ಯಾಪಾರ ವ್ಯವಹಾರ ನಡೆಸಿಕೊಂಡು ಜೀವನ ನಡೆಸುತ್ತಿದ್ದರು.
ಸಂತೆ ಮಾರುಕಟ್ಟೆ ಇಕ್ಕಟ್ಟಾಗಿ ಜಾಗಕ್ಕೆ ವ್ಯಾಪಾರಕ್ಕೆ ಗೊಂದಲ ಸೃಷ್ಟಿಯಾದ ಹಿನ್ನಲೆಯಲ್ಲಿ ಗ್ರಾಹಕರ ದೂರುಗಳ ಮೇರೆಗೆ ಕಂದಾಯ ದಾಖಲೆ ಪರಿಶೀಲಿಸಿದ್ದ ವೇಳೆ ಪ್ರಭಾವಿ ವ್ಯಕ್ತಿ ಹೊಸಕೋಟೆಯ ಟಿ.ವಿ.ವೆಂಕಟೇಶ್ ಎನ್ನುವರು ಎರಡು ಎಕರೆ ಸಂಜೆ ಮೈದಾನದ ಜಾಗ ಒತ್ತುವರಿ ಮಾಡಿಕೊಂಡ ಬಗ್ಗೆ ಮಾಹಿತಿ ಲಭ್ಯವಾಗಿದೆ.ಈ ಹಿನ್ನಲೆಯಲ್ಲಿ ಡಿಸಿ ಹಾಗೂ ಎಸಿ ಮತ್ತು ಸ್ಥಳೀಯ ತಾಪಂ ಹಾಗೂ ಕಂದಾಯ ಇಲಾಖೆಗೆ ದಾಖಲೆ ಸಮೇತ ದೂರು ಸಲ್ಲಿಸಲಾಗಿತ್ತು.
ಇದನ್ನು ಪ್ರಶ್ನಿಸಿ ಒತ್ತುವರಿ ದಾರ ಟಿ.ವಿ.ವೆಂಕಟೇಶ್ ಸರ್ವೆ ತಡೆಯುವಂತೆ ನ್ಯಾಯಾಲಯಕ್ಕೆ ದಾವೆ ವೊಡಿದ್ದರು.ಬ್ಯಾಡನೂರು ತಿಪ್ಪೇಸ್ವಾಮಿ,ಸರೋಜಮ್ಮ,ರಾಜಶೇಖರ್ ಹಾಗೂ ಕೆ.ರಾಮಪುರ ರಾಮಾಂಜಿನೇಯ ಈ ನಾಲ್ಕು ಮಂದಿ ವಕೀಲರಿಂದ ದಾಖಲೆ ಸಮೇತ ನ್ಯಾಯಾಲಯದ ಮೊರೆ ಹೋದ ಹಿನ್ನಲೆಯಲ್ಲಿ ವೈ.ಎನ್.ಹೊಸಕೋಟೆ ಸಂತೆ ಮೈದಾನ ವಿವಾದಿತ ಜಮೀನಿನ ಸ್ಥಳ ಪರಿಶೀಲನೆಗೆ ನ್ಯಾಯಾಲಯ ಕ್ರಮವಹಿಸಿ ಸಂಬಂಧಪಟ್ಟ ಇಲಾಖೆಯ ಮೇಲಾಧಿಕಾರಿಗಳಿಗೆ ಅದೇಶಿಸಿದೆ.
ಈ ಹಿನ್ನಲೆಯಲ್ಲಿ ಕಂದಾಯ ಹಾಗೂ ಸರ್ವೆ ಇಲಾಖೆ ಅಧಿಕಾರಿಗಳಿಂದ ಸರ್ವೆ ಕಾರ್ಯ ನಡೆದಿದ್ದು ಮೂರು ಎಕರೆ ಸರ್ಕಾರಿ ಜಮೀನಿಗೆ ಸಂಬಂಧಪಟ್ಟಂತೆ ಒತ್ತುವರಿಯಾದ ಎರಡು ಎಕರೆ ಜಮೀನಿಗೆ ಕಲ್ಲುಗಳಿಂದ ಬೌಂಡ್ರಿ ಪಿಕ್ತ್ ಮಾಡಿ ಮುಂದಿನ ಕ್ರಮಕ್ಕೆ ತಹಸೀಲ್ದಾರ್ರಿಗೆ ವರದಿ ಸಲ್ಲಿಸಿದ್ದಾರೆ.ಸಂತೆ ಮೈದಾನಕ್ಕೆ ಮೀಸಲಿರಿಸಿದ್ದ ಸರಕಾರಿ ಜಮೀನಿನ ಅಕ್ರಮ ಒತ್ತುವರಿ ತೆರವುಗೊಳಿಸಬೇಕು.ರೈತರು ಮತ್ತು ಗ್ರಾಹಕರ ತರಕಾರಿ ಇತರೆ ಸಂತೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕೆಂದು ಅವರು ಮನವಿ ಮಾಡಿದರು.
ವರದಿ: ಇಮ್ರಾನ್ ಉಲ್ಲಾ ಪಾವಗಡ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.