Janataa24 NEWS DESK
Pavagada: ಕಳ್ಳರು ಮನೆ ಬೀಗ ಹೊಡೆದು ನಗದು ಬಂಗಾರದ ಆಭರಣಗಳು ದೋಚಿ ಪರಾರಿಯಾದ ಘಟನೆ ಪಾವಗಡ ಪಟ್ಟಣದಲ್ಲಿ ನಡೆದಿದೆ.
ಪಾವಗಡ ಪಟ್ಟಣದ ಜ್ಞಾನಭೂಧಿನಿ ಶಾಲೆ ಮುಂಭಾಗ ದಲ್ಲಿ ವಾಸವಿರುವ ಜಿಲಾನಿ ಎಂಬುವರ ಮನೆಯಲ್ಲಿ ಮನೆ ಬೀಗ ಹೊಡೆದು ಸುಮಾರು ಒಂದು ಲಕ್ಷ ನಗದು. 13 ಉಂಗುರಗಳು. ಕಿವಿ ಓಲೆ ಒಂದು ಜೊತೆ, ಬೆಳ್ಳಿ ಚೈನ್ ಮೂರು ಜೊತೆ, ವಸ್ತುಗಳು ಕದ್ದು ಪರಾರಿಯಾಗಿದ್ದಾರೆ. ಒಟ್ಟು ಸುಮಾರು ನಾಲ್ಕು ಲಕ್ಷ ದಷ್ಟು ಮೌಲ್ಯದ ಚಿನ್ನಾಭರಣ ದೋಚಿ ಕಳ್ಳರ ಕೈಚಳಕ ತೋರಿಸಿರುವ ಘಟನೆ ಪಾವಗಡದ ಶ್ರೀನಿವಾಸ್ ನಗರದಲ್ಲಿ ನಡೆದಿದೆ.
ಜಿಲಾನಿ ಕುಟುಂಬದವರು ಬೆಂಗಳೂರಿಗೆ ಹೋಗಿ ಹಿಂತುರುಗಿ ಶುಕ್ರವಾರ ಮಧ್ಯಾಹ್ನ ಮನೆ ಬೀಗ ತೆಗೆಯಲು ಹೋದಂತಹ ಸಂದರ್ಭದಲ್ಲಿ ಮನೆಯ ಬಾಗಿಲು ತೆರೆದಂತ ಕಂಡು ಗಾಬರಿ ಇಂದ ಒಳಗೆ ನೋಡಿದಾಗ ಮನೆಯಲ್ಲಿ ವಸ್ತುಗಳು ಛಲಪಿಲಿಯಾಗಿ ಬಿದ್ದಿದ್ದ ಕಂಡು ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ ನಂತರ ಪೊಲೀಸರು ಸ್ಥಳಕ್ಕೆ ಬಂದು ಮನೆಯಲ್ಲಿ ಪರಿಶೀಲನೆ ಮಾಡಿ ಕಳ್ಳತನವಾಗಿದೆ ಎಂಬುದಾಗಿ ಖಚಿತ ಮಾಹಿತಿ ಪಡೆದು ಕಳವು ವಸ್ತುಗಳು ಏನೇನಿದ್ದವೆಂಬುದಾಗಿ ಮಾಹಿತಿ ಪಡೆದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಿಪಿಐ ಸುರೇಶ್ ಮಾತನಾಡಿ ಹಲವು ಬಾರಿ ಪೊಲೀಸರ ಸಾರ್ವಜನಿಕರ ಗಮನಕ್ಕೆ ತರುವಂತಹ ವಿಚಾರಗಳು ಯಾವುದೇ ವೇಳೆಯಲ್ಲಿ ಊರುಗಳಿಗೆ ಹೋದಂತ ಸಮಯದಲ್ಲಿ ತಕ್ಷಣವೇ ಪೊಲೀಸರು ಗಮನಕ್ಕೆ ತನ್ನಿ ಎಂಬುದಾಗಿ ಹಲವು ಬಾರಿ ಹೇಳಿದರು ಪ್ರತಿಯೊಬ್ಬರು ಪದೇ ಪದೇ ಅದೇ ತಪ್ಪುಗಳನ್ನು ಮಾಡುತ್ತಿದ್ದಾರೆ.
ಸ್ಥಳಕ್ಕೆ ಸಿಪಿಐ ಸುರೇಶ್ ಕ್ರೈಂ ಇನ್ಸ್ಪೆಕ್ಟರ್ ವಿಜಯ್ ಕುಮಾರ್ ಹಾಗೂ ಸಿಬ್ಬಂದಿಗಳು ಪರಿಶೀಲನೆ ಮಾಡಿ ಪ್ರಕರಣದ ಕಲಿಸಿಕೊಂಡಿದ್ದಾರೆ.
ವರದಿ: ಇಮ್ರಾನ್ ಉಲ್ಲಾ ಪಾವಗಡ
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/bengaluru-action-to-solve-parking-parameshwar/