PPavagada: ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಮತಿ ಪದ್ಮಾವತಿ. ಜಿ ಪಾವಗಡಕ್ಕೆ ಭೇಟಿ.


ಪಾವಗಡ ತಾಲೂಕಿನ ಪಳವಳ್ಳಿ ಗ್ರಾಮದ ಶ್ರೀಮತಿ ಲಕ್ಷ್ಮೀ ನರಸಿಂಹ ರವರು ನಮ್ಮ ನಿಗಮದ ಉದ್ಯೋಗಿನಿ ಯೋಜನೆ ಅಡಿಯಲ್ಲಿ 3 ಲಕ್ಷ ಸಾಲ ಪಡೆದು ಬಟ್ಟೆ ಯಲ್ಲಿ ತಯಾರಿಸುವ ಹೂವಿನ ಹರದ ಘಟಕಕ್ಕೆ ಭೇಟಿ ನೀಡಿ ಕೈಯಲ್ಲಿ ತಯಾರಿಸಿದ ಹರಗಳನ್ನು ವೀಕ್ಷಿಸಿ ತಪಾಸಣೆ ಮಾಡಿದೆ.
ಸ್ವಾವಲಂಬನೆ ಕೆಲಸ ಮಾಡಿಕೊಂಡು ಉತ್ತಮ ಆದಾಯ ಪಡೆಯುತ್ತಿದ್ದಾರೆ. ಸರ್ಕಾರದಿಂದ ನೀಡಿದಂತಹ ಸಾಲ ಪಡೆದು ವಿವಿಧ ರೀತಿಯಲ್ಲಿ ಕೈ ಕಸುಬಿನ ಮೂಲಕ ಶ್ರಮಿಸುತ್ತಿರುವುದು ಉತ್ತಮ ಉದಾಹರಣೆಯಾಗಿದೆ.
ಇದೇ ರೀತಿಯಲ್ಲಿ ಮಹಿಳೆಯರು ಸರ್ಕಾರದ ವಿವಿಧ ಸವಲತ್ತುಗಳನ್ನು ಪಡೆದು ಸ್ವಾವಲಂಬಿ ಯೋಜನೆಗಳನ್ನು ಬಳಸಿಕೊಂಡು ಉತ್ತಮ ಜೀವನ ನಡೆಸಬಹುದು ಎಂದರು.
ಇದೇ ವೇಳೆ ಜಿಲ್ಲಾ ಅಭಿವೃದ್ಧಿ ನಿಯೋಜಕರಾದ ಜಾನ್ವಿ. ಪಾವಗಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಸುನಿತಾ. ಇತರರು ಇದ್ದರು.
ವರದಿ: ಇಮ್ರಾನ್ ಉಲ್ಲಾ ಪಾವಗಡ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.instagram.com/janataa24?igsh=aXM0Ym9zb2Y2YTRn
https://www.janataa24.com/pavagada-nss-students-can-learn-rural-values/