Janataa24 NEWS DESK
Pavagada: ಸಿದ್ದರಾಮಯ್ಯನವರ ಅವಧಿಯ ಜನಪರ ಕೆಲಸಗಳನ್ನು ಬಿಜೆಪಿ ಜೆಡಿಎಸ್ ರವರಿಗೆ ಸಹಿಸಿಕೊಳ್ಳದೆ ಈ ಕುತಂತ್ರಗಳು ಮಾಡಲು ಮುಂದಾಗಿದ್ದಾರೆ– ಶಾಸಕ ಹೆಚ್. ವಿ. ವೆಂಕಟೇಶ್.
ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರ ಪುತ್ತಳಿಗೆ ಪ್ರತಿಭಟಕಾರರು ಪೆಟ್ರೋಲ್ ಸುರಿದು ಬೆಂಕಿ ಇಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಪಾವಗಡ: ಸಿಎಂ ವಿರುದ್ದ ಪ್ರೊಸುಕ್ಯೂಷನಗೆ ಅನುಮತಿ ನೀಡಿದ ರಾಜ್ಯಪಾಲರ ನಡೆ ಖಂಡಿಸಿ ಶನಿಮಹಾತ್ಮ ವೃತ್ತದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆ ನಡೆಸಿ ನಂತರ ಬಳ್ಳಾರಿ ರಸ್ತೆಯಲ್ಲಿರುವ ಡಾ. ಬಿಆರ್ ಅಂಬೇಡ್ಕರ್ ಪುತಳಿಗೆ ತಹಸಿಲ್ದಾರ್ ವರದರಾಜ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಶಾಸಕ ಹೆಚ್. ವಿ. ವೆಂಕಟೇಶ್ ಮಾತನಾಡಿ ಸಿದ್ದರಾಮಯ್ಯನವರು ತಮ್ಮ 40 ವರ್ಷಗಳ ರಾಜಕೀಯ ಜೀವನದಲ್ಲಿ ಯಾವುದೆ ಕಪ್ಪು ಚುಕ್ಕೆ ಹೊಂದಿಲ್ಲ, ಆದರೆ ಒಂದು ವರ್ಷದಿಂದ ಅನುಮತಿ ಕೇಳಿದ್ದ ಪ್ರಕರಣಗಳು ಬಾಕಿ ಇದ್ದಾಗ ಕೇಂದ್ರ ಸರಕಾರದ ಕೈಗೊಂಬೆಯಾಗಿ ರಾಜ್ಯಪಾಲರು ತರಾತುರಿಯಲ್ಲಿ ಸಿದ್ದರಾಮಯ್ಯನವರ ವಿರುದ್ದ ಪ್ರೋಶುಕ್ಯೂಶನಗೆ ಅನುಮತಿ ನೀಡಿದ್ದು ಸರಿಯಲ್ಲ, ಇದು ಉದ್ದೇಶ ಪೂರ್ವಕವಾಗಿ ಮಾಡಲಾಗಿದೆಯೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ವೆಂಕಟರಮಣಪ್ಪ ಮಾತನಾಡಿ ಮೋದಿ ಹೇಳುವುದನ್ನೇ ಕೇಳಿದರೆ ಮಾತ್ರ ಬಿಜೆಪಿ ಸರ್ಕಾರ ಹಿಂದಿನ ಬಾಗಿಲಿನಲ್ಲಿ ಬಂದವರು. ಕುಮಾರಸ್ವಾಮಿಯವರಿಗೆ ಮಾನ ಮರ್ಯಾದೆ ಇದ್ದಾರೆ ಅವರಿಗೆ ಯಾವುದೇ ಕಾರಣಕ್ಕೂ ಅವರಿಗೆ ಸಪೋರ್ಟ್ ಮಾಡಬಾರದು.
ದೇವೇಗೌಡರಿಗೆ ಯಾವುದೋ ರೀತಿಯಲ್ಲಿ ಅಧಿಕಾರ ಇರಬೇಕು ಅಷ್ಟೇ ಅವರಿಗೆ. ಹಾಗೂ ಕುಮಾರಸ್ವಾಮಿ ಅವರು ಪದೇಪದೇ ಮೋದಿ ಅವರನ್ನು ಬೈಯುತ್ತಿದ್ದವರು ಇವತ್ತು ಹೊಗಳುತ್ತಿದ್ದಾರೆ ಅಲ್ಲೇ ಗೊತ್ತಾಗುತ್ತೆ ಇವರ ಹಣೆಬರಹ.
ನಂತರ ಪಾದಯತ್ರೆ ಮುಖಾಂತರ ತಹಸಿಲ್ದಾರ ಕಚೇರಿಗೆ ತೆರಳಿ ರಾಜ್ಯಪಾಲರ ನಡೆ ವಿರುದ್ದ ರಾಷ್ಟ್ರಪತಿಗೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಮನವಿ ನೀಡಿದರು ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಸೇರಿದಂತೆ ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಬಾಗಿಯಾಗಿದ್ದರು.
ವರದಿ: ಇಮ್ರಾನ್ ಉಲ್ಲಾ ಪಾವಗಡ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/