Janataa24 NEWS DESK
Pavagada: ಉತ್ತಮ ಕಾಮಗಾರಿಗಳಿಂದ ತಾಲೂಕಿನ ಚಿತ್ರಣವೇ ಬದಲಾಗುತ್ತಿದೆ ಎಂದಾಗ ಅದರ ಹಿಂದೆ ಸರ್ಕಾರ ಹಾಗೂ ಅಧಿಕಾರಿಗಳು ಮತ್ತು ಈಗಿನ ಟೆಕ್ನಾಲಜಿಗಳ ಮುಖ್ಯವಾದದ್ದು– ಗೃಹ ಸಚಿವರು ಡಾ. ಜಿ ಪರಮೇಶ್ವರ್.
ಪಾವಗಡ: ಇದೇ ತಿಂಗಳು 21ರಂದು ಪಾವಗಡ ಭೇಟಿ ನೀಡಲಿರುವ ರಾಜ್ಯ ಮುಖ್ಯಮಂತ್ರಿಗಳಾದಂತಹ ಸಿದ್ದರಾಮಯ್ಯನವರ ಭೇಟಿಯ ವಿಚಾರವಾಗಿ ತಾಲೂಕಿನ ಅಧಿಕಾರಿಗಳ ಜಿಲ್ಲಾಧಿಕಾರಿಗಳ ನಡುವೆ ಸಭೆ ನಡೆಸಿ.
ಈ ಭಾಗಕ್ಕೆ ಭೇಟಿ ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅತಿ ಮುಖ್ಯ ಯೋಜನೆ ಆದಂತಹ ತುಂಗಭದ್ರ ಕುಡಿಯೋ ನೀರಿನ ಯೋಜನೆ ಉದ್ಘಾಟನೆ. ಮುಖ್ಯವಾದುದ್ದು
ಹಾಗೂ ಇತರೆ ಪಾರಿಗಳ ಶಂಕುಸ್ಥಾಪನೆ ಹಾಗೂ ಗುದ್ದಲಿ ಪೂಜೆ ನೆರವೇರಿಸಲಿರುವ ಸ್ಥಳಗಳಿಗೆ ಗೃಹ ಸಚಿವರು ಆಗಧಿಕಾರಿಗಳು ಸ್ಥಳ ಪರಿಶೀಲನೆ ಮಾಡಲಾಯಿತು.
ಮೊದಲಿಗೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಹಾಗು ತಾಲೂಕು ಮಟ್ಟದ ಅಧಿಕಾರಿಗಳೊಡನೆ ಸಭೆ ನಡೆಸಿ ವರದಿ ಪಡೆದು ಕೊಂಡು ಇಲಾಖೆವಾರು ಕಾಮಗಾರಿಗಳ ಶಂಕುಸ್ಥಾಪನೆ ಉದ್ಘಾಟನೆ ಕೊಳ್ಳುತ್ತಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು.
ಗೃಹ ಸಚಿವರು ಮಾತನಾಡಿ ಇತ್ತೀಚೆಗೆ ಏಷ್ಯಾದಲ್ಲಿ ಮನೆ ಸ್ಥಾನದಲ್ಲಿದ್ದ ಪಾವಡ ಸೋಲಾರ್ ಘಟಕ ಇನ್ನು ಮತ್ತೊಮ್ಮೆ ರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸುವಂಥ ವಿಷಯವಾಗಿದೆ ಈಗ ಉದ್ಘಾಟನೆ ಹಾಗೂ ಹೊಸದಾಗಿ ಸೋಲಾರ್ ಘಟಕಕ್ಕೆ ಶಂಕು ಸ್ಥಾಪನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೋಲಾರ್ ಘಟಕ ಒಂದನೇ ಸ್ಥಾನದಲ್ಲಿ ಬರಲಿದೆ ಎಂದರು.
ತುಂಗಭದ್ರ ಯೋಜನೆಯ ಸಂಪೂರ್ಣ ಕಾಮಗಾರಿ ಮುಗಿದಿದ್ದು ಈಗಾಗಲೇ ಗ್ರಾಮೀಣ ಭಾಗದಲ್ಲಿ ಟ್ರಯಲ್ ಮೂಲಕ ಕೊಳವೆ ನಲ್ಲಿಗಳಲ್ಲಿ ನಿರ್ಹರಿಸಲಾಗುತ್ತಿದೆ ಎಂಬುದಾಗಿ ಅಧಿಕಾರಿಗಳು ಹೇಳಿದ ಹಿನ್ನೆಲೆಯಲ್ಲಿ ಗೃಹ ಸಚಿವರು ಮತ್ತೊಮ್ಮೆ ಅಧಿಕಾರಿಗಳು ಗ್ರಾಮೀಣ ಭಾಗದಲ್ಲಿ ಬರುತ್ತಿರುವ ನೀರನ್ನು ಪರಿಶೀಲನೆ ಮಾಡಿ ಉತ್ತಮ ನೀರು ಕೊಡುವಂತಹ ಕೆಲಸ ಮಾಡಬೇಕು ಇವುಗಳಲ್ಲಿ ಲೋಪ ಕಂಡು ಬಂದಲ್ಲಿ ನೇರವಾಗಿ ಅಧಿಕಾರಿಗಳೇ ಹೊಣೆ ಹೊತ್ತಬೇಕಾಗುತ್ತದೆ ಎಂಬುದಾಗಿ ತಿಳಿಸಿದರು.
ಮುಖ್ಯಮಂತ್ರಿಗಳು ಉದ್ಘಾಟನೆ ಹಾಗೂ ಶಂಕರ್ ಸ್ಥಾಪನೆ ಮಾಡುತ್ತಿರುವ ಒಟ್ಟು ಸುಮಾರು 5729 ಕಾಮಗಾರಿಗಳು ಒಟ್ಟು ಅನುದಾನ 717.21.
ಉದ್ಘಾಟನೆ 40 ಕಾಮಗಾರಿಗಳು 496. 89 ಕೋಟಿ.
ಶಂಕು ಸ್ಥಾಪನೆ ಕಾಮಗಾರಿ 4,162 ಹಣ 193.43 ಕೋಟಿ.
ಸವಲತ್ತುಗಳು ವಿತರಣೆ 22.28ಕೋಟಿ.
ವಿವಿಧ ಸವಲತ್ತುಗಳ ಅನುದಾನ 1027 ಕಾಮಗಾರಿ 4.61 ಕೋಟಿ.
ಸೋಲಾರ್ ಘಟಕದ ಅನುದಾನ ಹೊರೆತುಪಡಿಸಿದೆ. ಘಟಕದ ಅನುದಾನವು ಸಹ ಸೇರಿಸಿದರೆ ಸುಮಾರು ಸಾವಿರ ಮೇಲ್ಪಟ್ಟು ಅನುದಾನ ಆಗುತ್ತದೆ ಎಂಬುದಾಗಿ ತಿಳಿಸಿದರು.
21ನೇ ತಾರೀಕು ಮುಖ್ಯಮಂತ್ರಿ ತಾಲೂಕಿಗೆ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಇಲಾಖೆ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕಾರ್ಯಕ್ರಮ ಕೈಗೊಳ್ಳಬೇಕು ಯಾವುದೇ ಲೋಪಗಳು ಬಾರದಂತೆ ನೋಡಿಕೊಳ್ಳಬೇಕು.
ಸರ್ಕಾರದ 5 ಗ್ಯಾರಂಟಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವಂತಹ ಕಾರ್ಯಕ್ರಮಗಳು ಸಹ ಆಗಬೇಕು.
ಸಾವಿರಾರು ಕೋಟಿಗಳ ಕಾಮಗಾರಿಗಳು ಉತ್ತಮ ಗುಣಮಟ್ಟದ ಆಗಬೇಕು ಕಂಡು ಬಂದಲ್ಲಿ ಅಧಿಕಾರಿಗಳೆ ಯ ನೇರ ಹೊಣೆ.
ವೇದಿಕೆ ಕಾರ್ಯಕ್ರಮ ನಡೆದ ಸ್ಥಳ ಹಾಗೂ ತುಂಗಭದ್ರ ಯೋಜನೆಯ ನೀರು ಶೇಖರಣೆ ಘಟಕ ಪರಿಶೀಲನೆ ಮಾಡಿದರು.
ಇವಳೆ ಸ್ಥಳೀಯ ಶಾಸಕ ಹೆಚ್ಚು ವೆಂಕಟೇಶ್ ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಜಿಲ್ಲಾ ಸಿಇಒ ಪ್ರಭು. ಎಸ್ ಪಿ ಅಶೋಕ್. ಜಿಲ್ಲಾ ಹಾಗೂ ತಾಲೂಕ ಅಧಿಕಾರಿಗಳು ಭಾಗವಹಿಸಿದ್ದರು.
ವರದಿ: ಇಮ್ರಾನ್ ಉಲ್ಲಾ. ಪಾವಗಡ
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.