Pavagada: ಹಾಡಹಗಲೇ ಕೆರೆ ಮಣ್ಣಿಗೆ ಕನ್ನಾ– ಬಲಾಡ್ಯರ ದರೋಡೆಗೆ ಗ್ರಾಮದ ಯುವಕರಿಂದ ತಡೆ.

JANATAA24 NEWS DESK 

 

Pavagada: ಹಾಡಹಗಲೇ ಕೆರೆ ಮಣ್ಣಿಗೆ ಕನ್ನಾ– ಬಲಾಡ್ಯರ ದರೋಡೆಗೆ ಗ್ರಾಮದ ಯುವಕರಿಂದ ತಡೆ.

Pavagada: ಹಾಡಹಗಲೇ ಕೆರೆ ಮಣ್ಣಿಗೆ ಕನ್ನಾ– ಬಲಾಡ್ಯರ ದರೋಡೆಗೆ ಗ್ರಾಮದ ಯುವಕರಿಂದ ತಡೆ.

ಪಾವಗಡ: ತಾಲ್ಲೂಕಿನ ಮರಿದಾಸನಹಳ್ಳಿ ಗ್ರಾಮ ಪಂಚಾಯಿತಿ ತಿಪ್ಪಯ್ಯನದುರ್ಗ ಎಂಬ ಗ್ರಾಮದಲ್ಲಿ ರಸ್ತೆಗೆ ಮಣ್ಣು ಹಾಕುವ ಟೆಂಡರ್ ಅನ್ನು ಪಾವಗಡದ ಶಂಕರ್ ರೆಡ್ಡಿ ಅನ್ನುವ ಕಂಟ್ರಾಕ್ಟರ್ ಗೆ ನೀಡಲಾಗಿದೆ.

ಇದಕ್ಕೆ ಸಂಭಂದಿಸಿದಂತೆ ತಿಪ್ಪಯ್ಯನದುರ್ಗದ ಕೆರೆಯ ಮಣ್ಣನ್ನು ಅಕ್ರಮವಾಗಿ ಈ ರಸ್ತೆ ಬಳಸಲು ಮುಂದಾಗಿದ್ದರು. ಇದನ್ನು ಸ್ಥಳೀಯ ಯುವಕರು ಪ್ರಶ್ನೆ ಮಾಡಿದ್ದಕ್ಕೆ. ರಾಮನ್ನ (ರಾಮು), ಸಣ್ಣೀರಪ್ಪ (SM) ಹಾಗೂ ಸಣ್ಣಿಂಗಪ ಎನ್ನುವ ಕೆಲ ಕಿಡಿಗೇಡಿಗಳು ಕಂಟ್ರಾಕ್ಟರ್ ಪರವಾಗಿ ನಿಂತು ಮಣ್ಣು ಅಕ್ರಮಕ್ಕೆ ಸಹಕಾರ ನೀಡಿ ಯುವಕರ ಮೇಲೆ ದಬ್ಬಾಳಿಕೆ ಮಾಡಲಾಯಿತು.

 

ಇದರ ನಂತರ ಇವರು ಸಾಯಂಕಾಲ ಮಧ್ಯಪಾನ ಸೇವಿಸಿ 7 ಗಂಟೆಯಿಂದ 9,30 ರವರಿಗೆ ಯುವಕರ ಮನೆಯವರನ್ನು, ಸಂವಿಧಾನವನ್ನು, ಹಿರಿಯ ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಲು ಪ್ರಯತ್ನಿಸಿದ್ದಾರೆ.

ಪೊಲೀಸ್ ಇಲಾಖೆಗೆ ದೂರು ನೀಡುತ್ತೇವೆ ಎಂದು ಹೇಳಿದರು ನಾವು ಯಾವ DC ಗೂ ಹೆದುರುವುದಿಲ್ಲ, ಯಾವ SP ಗೂ ಹೆದುರುವುದಿಲ್ಲಾ. ಎಂದು ನಮ್ಮ ತಾಯಂದಿರನ್ನು, ಅಕ್ಕಂದಿರನ್ನು, ಮನೆಯ ಹೆಣ್ಣುಮಕ್ಕಳನ್ನು ಕೆಟ್ಟ ಪದಗಳಿಂದ ನಿಂದಿಸಿ ಅವಮಾನಿಸಿದ್ದಾರೆ. ನಾವು ನ್ಯಾಯ ಕೇಳಲು ಹೋದರೆ ಈ ಸಮಾಜದಲ್ಲಿ ಇಂತಹ ವ್ಯಕ್ತಿಗಳಿಂದ ಇಡೀ ನಮ್ಮ ಗ್ರಾಮಗಳೇ ಹಾಳಾಗುತ್ತಿದ್ದವೇ. ಇವರ ಜೊತೆ ಪಿಡಿಓ ಮುದ್ದಣ್ಣ ಎಂಬುವರು ಸಹ ಕೈ ಜೋಡಿಸಿ ಇವರಿಗೆ ಬೆಂಬಲವಾಗಿ ನಿಂತು ಅವರ ಪರವಾಗಿ ಇದ್ದಾರೆ. ಅವರಿಗೆ ಕರೆ ಮಾಡಿದರೆ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ.

 

ಈ ಗ್ರೂಪಿನ ಹಿರಿಯ ಸದಸ್ಯರು ನಮ್ಮ ಪರವಾಗಿ ಧ್ವನಿ ಎತ್ತಿ ಮಾನ್ಯ ಜಿಲ್ಲಾಧಿಕಾರಿ ಕಚೇರಿಯಿಂದ ಕರೆ ಮಾಡಿಸಿ ಮಣ್ಣು ಅಕ್ರಮದ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕ ಜಾಲತಾಣದಲ್ಲಿ ಮನವಿ ಮಾಡಿದ ಗ್ರಾಮದ ಯುವಕರು.

 

ಈ ವಿಚಾರ ತಿಳಿಸಿದರು ಸಹ ಆ ಊರಿನ ರಾಮನ್ನ (ರಾಮು) , ಸಣ್ಣಿಂಗಪ್ಪ, ಸಣ್ಣಿರಪ್ಪ ಎಂಬುವರು ಇಂದು ಯಾವ DC ಬಂದ್ರು, ಯಾವ ತಹಶೀಲ್ದಾರ್ ಬಂದ್ರು, ಯಾವ ಪೊಲೀಸ್ ಅಧಿಕಾರಿ ಬಂದ್ರು ನಾವು ಮಣ್ಣು ಮಾರುತ್ತೇವೆ. ಅದೇನ್ ಮಾಡ್ತಿರೋ ಮಾಡಿ. ನಿಮಗೇ ತಾಕತ್ತು ಇದ್ದರೆ ನಮ್ಮ ಮೂರು ಜನರನ್ನು ತಡೀರಿ ನೋಡೋಣ ಎಂದು ಸವಾಲು ಎಸೆದಿದ್ದಾರೆ.

ಅಣ್ಣಂದಿರೇ, ನಾಯಕರೇ ದಯವಿಟ್ಟು ನಮ್ಮ ಊರು ಕೆರೆಯನ್ನು ರಕ್ಷಿಸಿ, ಇಂತಹ ಕಿಡಿಗೇಡಿಗಳಿಗೆ ಬುದ್ಧಿ ಕಲಿಸಿ ಕಾನೂನಿನ ಅರಿವನ್ನು ಮೂಡಿಸುವ ಕೆಲಸವನ್ನು ಮಾಡಿಕೊಡಿ ಎಂದು ತಮ್ಮಲ್ಲಿ ಕಳಕಳಿ ಮನವಿ ಮಾಡಿಕೊಳ್ಳುತ್ತಿದ್ದೇನೆ.

 

ಮರಿದಾಸನಹಳ್ಳಿ ಪಿಡಿಒ ಮುದ್ದಣ್ಣ ರವರ ಗಮನಕ್ಕೆ ಅಕ್ರಮ ಮಣ್ಣು ಮಾಫಿಯಾ ವಿಷಯವನ್ನು ಮುಂದಿಟ್ಟ ಯುವಕರಿಗೆ ಇದು ನನ್ನ ವ್ಯಾಪ್ತಿಗೆ ಬರುವುದಿಲ್ಲ ಎಂಬುದಾಗಿ ಹೇಳಿ ಎಸ್ಕೇಪ್ ಆದ ಪಿಡಿಓ ಮುದ್ದಣ್ಣ.

 

ವರದಿ: ಇಮ್ರಾನ್ ಉಲ್ಲಾ. ಪಾವಗಡ

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.


Leave a Reply

Your email address will not be published. Required fields are marked *