Pavagada: ಆರ್ಯ ಈಡಿಗರ ಸಮುದಾಯ ರಾಜ್ಯಕ್ಕೆ ಉತ್ತಮ ವ್ಯಕ್ತಿಗಳನ್ನು ಪರಿಚಯಿಸಿದೆ.

Janataa24 NEWS DESK 

 

 

Pavagada: ಆರ್ಯ ಈಡಿಗರ ಸಮುದಾಯ ರಾಜ್ಯಕ್ಕೆ ಉತ್ತಮ ವ್ಯಕ್ತಿಗಳನ್ನು ಪರಿಚಯಿಸಿದೆ– ಶಾಸಕ ಹೆಚ್ ವಿ ವೆಂಕಟೇಶ್.

Pavagada: ಆರ್ಯ ಈಡಿಗರ ಸಮುದಾಯ ರಾಜ್ಯಕ್ಕೆ ಉತ್ತಮ ವ್ಯಕ್ತಿಗಳನ್ನು ಪರಿಚಯಿಸಿದೆ.

ಪಾವಗಡ: ಪಟ್ಟಣದ ಚಳ್ಳಕೆರೆ ಕ್ರಾಸ್ ಬಳಿ ಇರುವ ಈಡಿಗರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ನಾರಾಯಣ ಗುರೂಜಿ ರವರ 170ನೆಯ ಜಯಂತಿಯಲ್ಲಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಇಡಿಗ ಸಮುದಾಯ ಉತ್ತಮ ವ್ಯಕ್ತಿಗಳನ್ನು ಪರಿಚಯಿಸಿಕೊಂಡಿದೆ ಅದರಲ್ಲಿ ಉತ್ತಮ ವ್ಯಕ್ತಿಗಳಾದ ಡಾಕ್ಟರ್ ರಾಜಕುಮಾರ್.ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರು. ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ. ಇತರ ಅನೇಕ ಮಂದಿ ರಾಜ್ಯದ ವಿವಿಧ ಕ್ಷೇತ್ರಗಳಿಗೆ ಗುರುತಿಸಿಕೊಂಡಂತಹ ಸಮುದಾಯ.

ಪಾವಗಡ ತಾಲೂಕಿನಲ್ಲಿ ಇರುವಂತಹ ಈಡಿಗ ಸಮುದಾಯದ ಬಳಗದಲ್ಲಿ ನನ್ನ ಉತ್ತಮ ಒಡನಾಟ ನನ್ನದು. ಅದರಲ್ಲೂ ಈ ಬಾರಿ ನಾನು ಶಾಸಕನಾಗಲು ಸಣ್ಣ ಸಣ್ಣ ಸಮುದಾಯಗಳೇ ಹೆಚ್ಚಾಗಿ ಕೈಹಿಡಿದಿದ್ದು ಎಂಬುದಾಗಿ ಈ ಮೂಲಕ ಹೇಳುತ್ತಿದ್ದೇನೆ. ಈ ಒಂದು ಸಮುದಾಯ ಭವನ ನಿರ್ಮಾಣದ ವೇಳೆಯಲ್ಲಿ ನಮ್ಮ ತಂದೆಯವರಾದಂತಹ ಮಾಜಿ ಸಚಿವರು ಅನುದಾನ ಕಲ್ಪಿಸಿದ್ದು.ಮುಂದಿನ ಹಂತ ಹಂತವಾಗಿ ನನ್ನ ಅನುದಾನ ನೀಡುತ್ತೇನೆ ಎಂದರು. ಈ ಭಾಗದ ಈಡಿಗ ಸಮುದಾಯದ ಹಲವು ಬೇಡಿಕೆಗಳು ನನ್ನ ಬಳಿ ಇಟ್ಟಿದ್ದಾರೆ ಅದರಲ್ಲಿ ಪ್ರಮುಖವಾದದ್ದು ಚಳ್ಳಕೆರೆ ಕ್ರಾಸ್ ವೃತ್ತಕ್ಕೆ ಪುನೀತ್ ರಾಜಕುಮಾರ್ ಅವರ ಹೆಸರು ಇಡಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ. ಒಬ್ಬ ಮಹಾನ್ ಕಲಾವಿದ ಪುನೀತ್ ರಾಜಕುಮಾರ್ ಅವರ ದೊಡ್ಡ ಅಭಿಮಾನಿ ನಾನು ಸಹ ಮುಂದಿನ ಪುರಸಭೆ ಸಭೆ ಇದರ ಬಗ್ಗೆ ಚರ್ಚೆ ಮಾಡಿ ಇದನ್ನು ವ್ಯವಸ್ಥೆ ಕಲ್ಪಿಸಲು ಸುರ್ಚಿಸುತ್ತೇನೆ ಎಂದರು.

ಇದೇ ವೇಳೆ ಮಾಜಿ ಸಚಿವ ವೆಂಕಟರವಣಪ್ಪ ಮಾತನಾಡಿ ಆಸ್ತಿ ಮಾಡವ ಬದಲು ಮಕ್ಕಳನ್ನ ಆಸ್ತಿಯಾಗಿ ಮಾಡಿ. ತಾಲೂಕಿನಲ್ಲಿ ಈಡಿಗ ಸಮುದಾಯ ಕಡಿಮೆ ಇದ್ದರೂ ಸಹ ಅವರಲ್ಲಿ ಒಗ್ಗಟ್ಟು ಕಾಣಬಹುದಾಗಿದೆ.

ಒಗ್ಗಟ್ಟಿದ್ದಲ್ಲಿ ಸಮುದಾಯದ ಉತ್ತಮ ಕಾರ್ಯಕ್ರಮಗಳು ಮಾಡಬಹುದು ಎಂಬುದಾಗಿ ತಿಳಿಸಿಕೊಟ್ಟಿದ್ದೀರಿ. ಇದೀಗ ಸಮುದಾಯ ದಲ್ಲಿ ಶ್ರೀಮಂತುರು ಇದ್ದಾರೆ ಬಡವರು ಇದ್ದಾರೆ. ಈಡಿಗರ ಸಮುದಯದಲ್ಲಿ ಯಾವುದೇ ರಾಜಕೀಯ ತೆಗೆದುಕೊಂಡರೆ ಒಬ್ಬ ಮಂತ್ರಿ ಒಬ್ಬ ಸಚಿವ ಇದ್ದೇ ಇರುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಈಡಿಗ ಸಮುದಾಯದ ತಾಲೂಕು ಅಧ್ಯಕ್ಷರಾದಂತಹ ಬೂದಿಬೆಟ್ಟ ವೀರಾಂಜನೇಯ. ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಸುರೇಶ್ ಬಾಬು. ನಿವೃತ್ತ ಹಿರಿಯ ಶಿಕ್ಷಕರಾದ ರಾಮಪ್ಪ.ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೇಶ್ ಬಾಬು,ಜಿಲ್ಲಾ ಕಾರ್ಯದರ್ಶಿ ಶಿವಣ್ಣ,ತಾಲೂಕ ಅಧ್ಯಕ್ಷರಾದ ಕೆಪಿಎಸ್ಸಿ ಮಾಜಿ ಸದಸ್ಯರು ಲಕ್ಷ್ಮಿನಾರಸಿಂಹಯ್ಯವೀರಾಂಜನೇಯ ದಿಲ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆಂಜನೇಯಲು, ರವಿಕುಮಾರ್, ಡಿವೈಎಸ್ಪಿ ರಾಮಕೃಷ್ಣಪ್ಪ,ಗುತ್ತಿಗೆದಾರರಾದ ರಾಮಕೃಷ್ಣಪ್ಪ, ಹನುಮೇಶ್, ಅಂಜಿ ಗೌಡ,ಸೋಮು, ಮಾರುತಿ,ಮಹೇಶ,ರಾಘವೇಂದ್ರ,ಪಾಂಡು ಮುಂತಾದವರು ಹಾಜರಿದ್ದರು. ಸಮುದಾಯದವರಾದಂತಹ ಡಾಬ ಮಹೇಶ್. ತಾಳೆಮರದ ಹಳ್ಳಿ ಆಂಜನೇಯಲು. ವೆಟನರಿ ರಾಮಾಂಜಿ. ತಾಲೂಕ್ ಆಫೀಸ್ ರವಿ.
ಸಂಜೀವಮ್ಮ ನಿರ್ದೇಶಕರು
ರಾಮಕೃಷ್ಣಪ್ಪ ಹಿಂದುಪುರ್ ಮಾಜಿ ಅಧ್ಯಕ್ಷರು
ಲಕ್ಷ್ಮೀನಾರಾಯಣ ಕೆಪಿಎಸ್ಸಿ ಖಜಾಂಜಿ
ಸೋಮು ಜಂಟಿ ಕಾರ್ಯದರ್ಶಿ ಅಂಜಿಗೌಡ.
ಉಪಾಧ್ಯಕ್ಷರು ಹನುಮೇಶ್.
ತಾಳೆಮರದಲ್ಲಿ ಅಂಜಿ . ಮಾರುತಿ ಥಿಯೇಟರ್ ಗಂಗಾ.ವೆಟನರಿ ರಾಮಾಂಜನೇಯಲು.
ಗೌರವಾಧ್ಯಕ್ಷರು ರಾಮಪ್ಪ ಮತ್ತು ಸಮಾಜದ ಮುಖಂಡರು ಸಮುದಾಯ ಭಾಗವಹಿಸಿದ್ದರು.

ವರದಿ: ಇಮ್ರಾನ್ ಉಲ್ಲಾ ಪಾವಗಡ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Pavagada: ಬೆಸ್ಕಾಂ ಇಲಾಖೆಯಲ್ಲಿಯೇ TC ಕಳ್ಳರಿದ್ದಾರೆ..!

 

Leave a Reply

Your email address will not be published. Required fields are marked *