Janataa24 NEWS DESK
Pavagada: ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಾಣಕ್ಕಾಗಿ ನಿವೇಶನ ಒದಗಿಸಿ ಶಿಕ್ಷಣ ಪ್ರೇಮ ಮೆರೆದ ಅಂಗನವಾಡಿ ಕಾರ್ಯಕರ್ತೆ ಶಾಂತಮ್ಮ.


ತಮ್ಮ ಹಿರಿಯರು ಶಾಲೆ , ಗ್ರಂಥಾಲಯ ಇತರೆ ಸರ್ಕಾರಿ ಕಟ್ಟಡಗಳಿಗೆ ನೀಡಿರುವ ಜಾಗವನ್ನು ಒತ್ತುವರಿ ಮಾಡಿಕೊಳ್ಳುವ ಈ ಕಾಲದಲ್ಲಿ ಪಾವಗಡ ಶಿಶು ಅಭಿವೃದ್ಧಿ ಯೋಜನೆಯ ಕನ್ನ ಮೇಡಿ ಪಂಚಾಯತಿಗೆ ಒಳಪಡುವ ಓಬೇನಹಳ್ಳಿ ಅಂಗನವಾಡಿ ಕೇಂದ್ರ ನಿರ್ಮಾಣಕ್ಕಾಗಿ ಸ್ವಂತ ಹಣದಲ್ಲಿ ನಿವೇಶನವನ್ನು ಖರೀದಿಸಿ ಇಲಾಖೆಯ ಹೆಸರಿಗೆ ಈ ಖಾತೆ ಮಾಡಿಸಿ ಓಬೇನಹಳ್ಳಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಇವರು ತಮ್ಮ ಶಿಕ್ಷಣ ಪ್ರೇಮವನ್ನು ಮೆರೆದಿದ್ದಾರೆ.
ಶ್ರೀಮತಿ ಶಾಂತಮ್ಮ ಆರ್ ಗಂಡ ನಾಗೇಂದ್ರ ಎಸ್ ಓಬೇನಹಳ್ಳಿ ಅಂಗನವಾಡಿ ಕಾರ್ಯಕರ್ತೆ ಇವರೇ ಅಂಗನವಾಡಿ ಕೇಂದ್ರಕ್ಕೆ ನಿವೇಶನ ಒದಗಿಸಿರುವುದು 574ನೇ ಸ್ವತ್ತು ನಂಬರ್ ನಲ್ಲಿ 30 * 40 ಅಳತೆಯ ಜಾಗವನ್ನು ಅಂಗನವಾಡಿ ಕೇಂದ್ರ ನಿರ್ಮಾಣಕ್ಕಾಗಿ ದಾನವಾಗಿ ನೀಡಿರುತ್ತಾರೆ ಅಂಗನವಾಡಿ ಕೇಂದ್ರದಲ್ಲಿ ಒಟ್ಟು 16 ಮಕ್ಕಳು ದಾಖಲಾಗಿದ್ದು 4 ಗರ್ಭಿಣಿ ಒಂದು ಬಾಣಂತಿ ಅಂಗನವಾಡಿ ಕೇಂದ್ರದಿಂದ ಸರ್ಕಾರಿ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ ಇಲ್ಲಿಯವರೆಗೆ ಕೇಂದ್ರವು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು ನಿವೇಶನ ಒದಗಿಸಿರುವುದರಿಂದ ಹೊಸ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅನುಕೂಲಕರವಾಗಿದೆ ಕಾರ್ಯಕರ್ತೆಯ ಹಾಗೂ ಕುಟುಂಬದವರ ಸೇವಾ ಮನೋಭಾವಕ್ಕೆ ಅಧಿಕಾರಿಗಳು ಪ್ರಶಂಸೆಯನ್ನು ವ್ಯಕ್ತಪಡಿಸಿರುತ್ತಾರೆ.
ವರದಿ: ಇಮ್ರಾನ್ ಉಲ್ಲಾ. ಪಾವಗಡ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.