Janataa24 NEWS DESK
Pavagada: ಮನುಷ್ಯನಿಗೆ ವಿದ್ಯೆಯೆಂಬುದು ಇದ್ದರೆ ಪ್ರಪಂಚದಲ್ಲಿ ಎಲ್ಲಿ ಬೇಕಾದರೂ ಜೀವಿಸಬಹುದು–ಶಾಸಕ ಹೆಚ್.ವಿ. ವೆಂಕಟೇಶ್.
ಪಾವಗಡ ಪಟ್ಟಣದಲ್ಲಿ ಎಸ್‌ಎಸ್‌ಕೆ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಶ್ರೀ ಶಿವ ಕುಮಾರ ಸ್ವಾಮೀಜಿಗಳು ಹಾಗೂ ಎಪಿಜೆ ಅಬ್ದುಲ್ ಕಲಾಂ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಹಾನ್ ವ್ಯಕ್ತಿಗಳ ಹೆಸರಿನಲ್ಲಿ ಸತತ ಹತ್ತನೇ ವರ್ಷದ ಈ ಪ್ರತಿಭಾ ಪುರಸ್ಕಾರ ನಡೆಸಿಕೊಂಡು ಬರುತ್ತಿರುವುದು ಉತ್ತಮ ಕೆಲಸ. ವಿದ್ಯೆ ಇದ್ದಲ್ಲಿ ಎಲ್ಲಿ ಬೇಕಾದರೂ ಜೀವನ ನಡೆಸಲು ಏಕೈಕ ಮಾರ್ಗ ಅದು ವಿದ್ಯಾಭ್ಯಾಸ.
ಏಕೆಂದರೆ ಇತ್ತೀಚೆ ದಿನಗಳಲ್ಲಿ ವಿದ್ಯಾಭ್ಯಾಸ ಮಾಡಿದಂತಹ ಪ್ರತಿಯೊಬ್ಬರು ಮನೆಯಲ್ಲಿ ಇದ್ದು ಲಕ್ಷಾಂತರ ರು ಹಣ ಗಳಿಸುತ್ತಿರುವುದು ನಾವೆಲ್ಲ ಗಮನ ಹರಿಸಿದ್ದೇವೆ. ಮಕ್ಕಳು ಕಷ್ಟಪಟ್ಟು ಓದುವ ಬದಲು ಇಷ್ಟಪಟ್ಟು ಓದಬೇಕು. ಈ ಭಾಗದ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಡಿಪ್ಲೋಮಾ ಐಟಿಐ ಕಾಲೇಜುಗಳು ತರಲು ಹೆಚ್ಚು ಶ್ರಮಿಸುತ್ತಿದ್ದೇನೆ ಈಗಾಗಲೇ ಸಂಬಂಧಪಟ್ಟ ಸಚಿವರ ಬರಿ ಚರ್ಚೆ ಮಾಡಿದ್ದೇನೆ.
ಭಾಗಕ್ಕೆ ತುಂಗಭದ್ರ ನೀರು. ರೈಲ್ವೆ ಯೋಜನೆ ಇತರ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದೇನೆ. ಈಗಾಗಲೇ 8.5 ಕೋಟಿ ವೆಚ್ಚದಲ್ಲಿ ಮಹಿಳಾ ಕಾಲೇಜಿನಲ್ಲಿ ಕೊಠಡಿಗಳ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಪರಿಶಿಷ್ಟ ಪಂಗಡ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ 22 ಕೋಟಿ ವೆಚ್ಚದಲ್ಲಿ ವಸತಿ ನಿಲಯಗಳು ಈಗಾಗಲೇ ಸಿದ್ಧಗೊಂಡಿದ್ದು ಮುಖ್ಯಮಂತ್ರಿಯ ಅವರ ಕೈಯಲ್ಲಿ ಉದ್ಘಾಟನೆ ಮಾಡಲು ಮುಂದಾಗಿದ್ದೇನೆ.
ನನ್ನ ಅವಧಿಯಲ್ಲಿ ವಿದ್ಯೆಗೆ ಹೆಚ್ಚು ಆದ್ಯತೆ ನೀಡಿ. ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಯಾವುದೇ ತರದ ಸಮಸ್ಯೆಗಳು ಆಗದ ರೀತಿಯಲ್ಲಿ ಕೆಲಸ ಮಾಡುತ್ತೇನೆ ಹಾಗೂ ವಿದ್ಯಾಭ್ಯಾಸಕ್ಕೆ ಹೆಚ್ಚು ಹೊತ್ತು ನೀಡುತ್ತೇನೆ ಎಂದರು.
ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಶ್ರೀಮತಿ ಪದ್ಮಾವತಿ ಮಾತನಾಡಿ ತಾಲೂಕಿನ ಅಭಿವೃದ್ಧಿಗಾಗಿ ಈ ಭಾಗದ ಶಾಸಕರು ಹಾಗೂ ಅವರ ತಂದೆ ಮಾಜಿ ಸಚಿವರು ಹೆಚ್ಚು ಶ್ರಮ ಪಟ್ಟಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಹಾಗೂ ಶಾಸಕರು ಹಾಗೂ ಸಚಿವರ ಉತ್ತಮ ಬಾಂಧವ್ಯ ರೂಡಿಸಿ ಕೊಂಡಿರುವ ವೆಂಕಟೇಶ್ ಅವರಲ್ಲಿ ಈ ಭಾಗದ ಅಭಿವೃದ್ಧಿ ಪಡಿಸುವ ಛಲ ಅವರಲ್ಲಿದೆ.
ಬೆಂಗಳೂರಿನ ಸ್ವಚ್ಛತೆಯಲ್ಲಿ ಮಹಿಳೆಯ ಪಾತ್ರ ವಿಭನ್ಯವಾಗಿದೆ ಬೃಹತ್ ಸ್ವಚ್ಛತೆಯಲ್ಲಿ 18000 ಹೆಣ್ಣು ಮಕ್ಕಳು ಸ್ವಚ್ಛತೆ ಕೆಲಸದಲ್ಲಿ ದಿನನಿತ್ಯ ದುಡಿಯುತ್ತಿದ್ದಾರೆ.
ಮಕ್ಕಳನ್ನು ಆಸ್ತಿಯಾಗಿ ಮಾಡಿ ಹೊರೆತು ಹಣದ ರೂಪದಲ್ಲಿ ಆಸ್ತಿ ಮಾಡಲು ಹೋಗಬೇಡಿ.
ಡಾ. ಕೆ.ಹೆಚ್. ಅನಿಲ್ ಕುಮಾರ್ ಪ್ರಾಧ್ಯಾಪಕರು ವಿದ್ಯಾಶಿಲ್ಪ ವಿಶ್ವವಿದ್ಯಾಲಯ ಬೆಂಗಳೂರು ಮಾತನಾಡಿದರು.
ಮಾಜಿ ವಾಕ್ ಬೋರ್ಡ್ ಅಧ್ಯಕ್ಷರಾದ ಇಕ್ಬಾಲ್ ಅಹಮದ್.. ಪುರಸಭೆ ಸದಸ್ಯರಾದಂತ ಜಿ ಸುರೇಶ್ ಬಾಬು. ಇವಳೆ ಕಾರ್ಯಕ್ರಮದಲ್ಲಿ ಸಮಾಜ ಸೇವಕರು ಯುವ ಮುಖಂಡರಾದ ನಾಗೇಂದ್ರರಾವ್ ನಾನಿ. ವೆಂಕಟಮ್ನಹಳ್ಳಿ. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದಂತಹ ಮೊಹಮದ್ ಫಜ್ಲೂ ಸಾಬ್. ಮಾಜಿ ಪುರಸಭೆ ಅಧ್ಯಕ್ಷ ಎ ಶಂಕರ್ ರೆಡ್ಡಿ. ರಾಜೇಶ್. ರವಿ. ಮಣಿ. ಮಾಲಿನ್ ತಾಜ್.ಮೊಹಮದ್ ಇಮ್ರಾನ್. ಎಂ ಎ.ಆರ್ ರಿಯಾಜ್. ಆಯೋಜಕರಾದ ರಿಜ್ವಾನಲ್ಲ. ನಿರೂಪಣೆ ಕೇಸು ಚಂದ್ರು ದಾಸ್ ನವೀನ್ ಕಿಲಾರದಳ್ಳಿ. ಸುಶೀಲಮ್ಮ.
2023 :24ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ವರದಿ: ಇಮ್ರಾನ್ ಉಲ್ಲಾ. ಪಾವಗಡ
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.instagram.com/janataa24?igsh=aXM0Ym9zb2Y2YTRn
https://www.janataa24.com/pavagada-nss-students-can-learn-rural-values/