JANATAA24 NEWS DESK
Pavagada: 400KV ಹೈಟೆನ್ಶನ್ ಟವರ್ ಮೇಲೇರಿ ಸಾಯಲು ಯತ್ನಿಸಿದ ವ್ಯಕ್ತಿ ರಕ್ಷಣೆ – ಅಗ್ನಿಶಾಮಕದಳದ ಸಾಹಸ.

ಪಾವಗಡ: ಸಾಲದ ಸಮಸ್ಯೆಯಿಂದ ಮನನೊಂದು 53 ವರ್ಷದ ವ್ಯಕ್ತಿಯೊಬ್ಬರು 120 ಅಡಿ ಎತ್ತರದ 400 ಕೇವಿ ಹೈಟೆನ್ಶನ್ ವಿದ್ಯುತ್ ಟವರ್ ಮೇಲೇರಿದ ಘಟನೆ ಪಾವಗಡ ತಾಲೂಕಿನ ಬಿಕೆ ಹಳ್ಳಿ–ದಳವೆಹಳ್ಳಿ ರಸ್ತೆಯಲ್ಲಿ ನಡೆದಿದೆ. ಅಗ್ನಿಶಾಮಕ ದಳದ ಸಮಯೋಚಿತ ಕಾರ್ಯಾಚರಣೆಯಿಂದ ವ್ಯಕ್ತಿಯನ್ನು ಜೀವಂತವಾಗಿ ರಕ್ಷಿಸಲಾಗಿದೆ.
ರಕ್ಷಿಸಲ್ಪಟ್ಟ ವ್ಯಕ್ತಿಯನ್ನು ಬಿಕೆ ಹಳ್ಳಿ ಗ್ರಾಮದ ಗೋಪಾಲ (53) ತಂದೆ ಪಾಲಯ್ಯ ಎಂದು ಗುರುತಿಸಲಾಗಿದೆ. ಮಧ್ಯ ಸೇವನೆ ಮಾಡಿದ ಸ್ಥಿತಿಯಲ್ಲಿ ಗೋಪಾಲ ಅವರು ಟವರ್ ಮೇಲೇರಿಕೊಂಡು ಕುಳಿತುಕೊಂಡಿದ್ದರು ಎಂದು ತಿಳಿದುಬಂದಿದೆ.
ಈ ವಿಷಯವನ್ನು ಗಮನಿಸಿದ ತಿರುಮನೆ ಪೊಲೀಸ್ ಠಾಣೆ ಸಿಬ್ಬಂದಿ ತಕ್ಷಣವೇ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು. ಮಾಹಿತಿ ದೊರಕಿದ ಕೂಡಲೇ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಪ್ರವೀಣ್ ಕುಮಾರ ಅವರ ನೇತೃತ್ವದಲ್ಲಿ ರಕ್ಷಣಾ ತಂಡ ಘಟನಾ ಸ್ಥಳಕ್ಕೆ ದೌಡಾಯಿಸಿತು.
ರಕ್ಷಣಾ ಕಾರ್ಯಾಚರಣೆಯಲ್ಲಿ ಪ್ರಮುಖ ಅಗ್ನಿಶಾಮಕರಾದ ವೆಂಕಟೇಶ ನಾಡಗೌಡ (2429), ನಾಗೇಶ ಎಂ.ಎನ್ (3056), ಚಾಲಕ ತಂತ್ರಜ್ಞ ಶೇಕ್ ಮನ್ಸೂರ್ ಅಹ್ಮದ್ (708), ಅಗ್ನಿಶಾಮಕ ಚಾಲಕ ನಂದನ್ ಎಚ್.ಎಸ್ (6476) ಹಾಗೂ ಅಗ್ನಿಶಾಮಕ ಹರೀಶ್ ಎನ್.ಎಂ (5916) ಭಾಗವಹಿಸಿದ್ದರು.
ತಂಡವು ಹಗ್ಗ, ಹಾರ್ನೆಸ್ ಬೆಲ್ಟ್, ಲ್ಯಾಡರ್ ಸೇರಿದಂತೆ ರಕ್ಷಣಾ ಉಪಕರಣಗಳ ನೆರವಿನಿಂದ 120 ಅಡಿ ಎತ್ತರದ ಟವರ್ ಮೇಲೇರಿತು. ಮೇಲೇರಿದ ನಂತರ ಗೋಪಾಲ ಅವರಿಗೆ ನೀರು ನೀಡಿ, ಸಮಾಧಾನಪಡಿಸಿ ಮನವೊಲಿಸಿದರು. ನಂತರ ಸುರಕ್ಷತಾ ಉಪಕರಣಗಳ ಸಹಾಯದಿಂದ ಅವರನ್ನು ಜೀವಂತವಾಗಿ ಕೆಳಗೆ ಇಳಿಸಿ ರಕ್ಷಿಸಲಾಯಿತು.
ಸಮಯೋಚಿತವಾಗಿ ಕಾರ್ಯನಿರ್ವಹಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಯ ಧೈರ್ಯ ಮತ್ತು ಕಾರ್ಯಕ್ಷಮತೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ವರದಿ: ಇಮ್ರಾನ್ ಉಲ್ಲಾ. ಪಾವಗಡ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.