Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

Janataa24 NEWS DESK 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ‘ಆಪರೇಷನ್ ಸಿಂಧೂರ್’ ಆರಂಭಿಸಿದೆ. ಪಾಕಿಸ್ತಾನದಲ್ಲಿರುವ ಒಟ್ಟು 9 ಭಯೋತ್ಪಾದಕ ಅಡಗುತಾಣಗಳ ಮೇಲೆ ಅಟ್ಯಾಕ್ ಮಾಡಲಾಗಿದೆ. ಭಾರತದ ಮಾಸ್ಟರ್​ ಸ್ಟ್ರೋಕ್​ಗೆ 80ಕ್ಕೂ ಹೆಚ್ಚು ಉಗ್ರರು ಹತರಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

 

ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ 9 ಅಡಗುತಾಣಗಳ ಮೇಲೆ ಈ ದಾಳಿ ಆಗಿದೆ. ಮುರೀದ್ಕೆ, ಮುಜಾಫರ್​ಬಾದ್, ಬಹಾವಲ್​ಪುರ್, ಕೋಟ್ಲಿ, ಚಾಕ್​ಅಮ್ರು, ಗುಲ್​ಪುರ್, ಭಿಂಬರ್​ನಲ್ಲಿ ದಾಳಿ ಆಗಿದೆ. ಇನ್ನೂ, ಭಾರತೀಯ ಸೇನೆ, ಭಾರತೀಯ ವಾಯುಪಡೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಕೇವಲ 23 ನಿಮಿಷದಲ್ಲಿ ಪಾಕ್​ನ 9 ನೆಲೆಯನ್ನು ಉಡೀಸ್​ ಮಾಡಿದೆ. 23 ನಿಮಿಷದಲ್ಲೇ 80 ಕ್ಕೂ ಹೆಚ್ಚು ಉಗ್ರರು ಮೃತಪಟ್ಟಿದ್ದಾರೆ. ಭಾರತವು ಪಾಕ್ ಆಕ್ರಮಿತ ಕಾಶ್ಮೀರದ 5 ಸ್ಥಳ ಮತ್ತು ಪಾಕ್​ನ ನಾಲ್ಕು ಸ್ಥಳ ಸೇರಿ ಉಗ್ರರ ನೆಲೆ, ಟ್ರೆನಿಂಗ್ ಕ್ಯಾಂಪ್​ಗಳ ಮೇಲೆ ಏಕಕಾಲದಲ್ಲಿ 9 ಕಡೆಯಲ್ಲಿ ದಾಳಿ ಮಾಡಿ ಹೊಡೆದುರುಳಿಸಿದೆ. ಇದರಲ್ಲಿ‌ ಈ ಮೂಲಕ ಭಾರತ ತನ್ನ ಪ್ರತೀಕಾರವನ್ನು ತೀರಿಸಿಕೊಂಡಿದೆ.

 

Operation Sindor: 23 ನಿಮಿಷಗಳ ಆಪರೇಷನ್ ಸಿಂಧೂರ ಹೇಗಿತ್ತು..?

 

01:28-01:51AM – ಭಾರತದಿಂದ ಪಾಕಿಸ್ತಾನದ ಮೇಲೆ ದಾಳಿ

02:05 AM – 9 ಕಡೆ ದಾಳಿ ಮಾಡಿರೋ ಬಗ್ಗೆ ಅಧಿಕೃತ ಮಾಹಿತಿ

02:17AM – ಭಾರತಕ್ಕೆ ಪಾಕಿಸ್ತಾನ ಎಚ್ಚರಿಕೆ ಸಂದೇಶ ರವಾನೆ

02:21AM – ಭಾರತ POKಯಲ್ಲಿ 3 ಕಡೆ ದಾಳಿ ಮಾಡಿದ ಬಗ್ಗೆ ದೃಢಪಡಿಸಿದ ಪಾಕ್

02:28 AM – ದಾಳಿಯ ಬಗ್ಗೆ ಅಮೆರಿಕಕ್ಕೆ ಮಾಹಿತಿ ನೀಡಿದ ಭಾರತ

02:46 AM – ರಕ್ಷಣಾ ಸಚಿವ ರಾಜನಾಥ್​ಸಿಂಗ್​​ರಿಂದ ಭಾರತ್ ಮಾತಾ ಕೀ ಜೈ ಎಂದು ಟ್ವೀಟ್

02:50 AM – ರಷ್ಯಾ, ಇಂಗ್ಲೆಂಡ್​ಗೆ ಭಾರತದಿಂದ ದಾಳಿಯ ಬಗ್ಗೆ ಮಾಹಿತಿ

02:51 AM – ಪಾಕಿಸ್ತಾನದ ಸೇನಾ ವಕ್ತಾರ, ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿಯಿಂದ ಸ್ಪಷ್ಟನೆ

03:00 AM – ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಗುಂಡಿನ ಚಕಮಕಿ

03:05 AM – ಪಾಕಿಸ್ತಾನ ನಡೆಸಿದ ಗುಂಡಿನ ದಾಳಿಯಲ್ಲಿ ಭಾರತದ ಮೂವರು ನಾಗರಿಕರು ಸಾವು.

 

ಮಧ್ಯರಾತ್ರಿ 1.44ಕ್ಕೆ ಭಾರತೀಯ ವಾಯುಪಡೆಯಿಂದ ಏರ್ ಸ್ಟ್ರೈಕ್ ಮಾಡಲಾಗಿದೆ. ಪಾಕಿಸ್ತಾನದ 9 ಸ್ಥಳಗಳ ಮೇಲೆ ಏರ್ ಸ್ಟ್ರೈಕ್ ಮಾಡಿ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ದಾಳಿ ಬೆನ್ನಲ್ಲೇ ಭಾರತ 3.10ಕ್ಕೆ ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮಾಹಿತಿ ನೀಡಿದೆ. ಇದಾದ ಬಳಿಕ 3.20ಕ್ಕೆ ಲಾಹೋರ್, ಸಿಯಾಲ್ ಕೋಟ್ ಏರ್ ಪೋರ್ಟ್ ಬಂದ್ ಮಾಡಲಾಗಿದೆ. ಭಾರತದ ಏರ್ ಸ್ಟ್ರೈಕ್​ನಲ್ಲಿ 80- 90ಕ್ಕೂ ಹೆಚ್ಚು ಉಗ್ರರ ಸಾವನ್ನಪ್ಪಿದ್ದಾರೆ. ಭವಾಲ್​ಪುರ ಒಂದೇ ಸ್ಥಳದಲ್ಲಿ 25-30 ಮಂದಿ ಉಗ್ರರ ಮೃತಪಟ್ಟಿದ್ದಾರೆ. ಮತ್ತೆ ಮುರ್ದಿಕ್​ನಲ್ಲಿ 25-30 ಮಂದಿ ಉಗ್ರರು ಸಾವನ್ನಪ್ಪಿದ್ದು, ಮುಜಾಫರಬಾದ್​ನಲ್ಲಿ ಜೆಇಎಂ ಉಗ್ರರ ಟ್ರೇನಿಂಗ್ ಕ್ಯಾಂಪ್ ಸಂಪೂರ್ಣ ನಾಶವಾಗಿದೆ.

 

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.

Leave a Reply

Your email address will not be published. Required fields are marked *