Janataa24 NEWS DESK
M T Krishnappa : ಹೇಮಾವತಿ ಕಚೇರಿ ಮುಂದೆ ಧರಣಿಗೆ ಕಾರ್ಯಕರ್ತರಿಗೆ ಶಾಸಕ ಎಂ ಟಿ ಕೃಷ್ಣಪ್ಪ ಕರೆ.
ತುರುವೇಕೆರೆ : ಪಟ್ಟಣದಲ್ಲಿರುವ ಶಾಸಕ ಎಂ ಟಿ ಕೃಷ್ಣಪ್ಪ ಅವರ ನಿವಾಸದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಲಾಯಿತು. ಸುದ್ದಿಗೋಷ್ಠಿ ನಡೆಸಿದ ತುರುವೇಕೆರೆ ಶಾಸಕರಾದ ಎಂ ಟಿ ಕೃಷ್ಣಪ್ಪ ಅವರು ಮಾತನಾಡಿ.
ನಮ್ಮ ತಾಲೂಕಿನಲ್ಲಿರುವ ಮಾಯಸಂದ್ರ ಹೋಬಳಿ ಮತ್ತು ದಬ್ಬೇಘಟ್ಟ ಹೋಬಳಿಯಲ್ಲಿ ಕೆರೆಗಳಲ್ಲಿ ನೀರಿಲ್ಲದೆ ಜನರು ತತ್ತರಿಸಿ ಹೋಗುತ್ತಿದ್ದಾರೆ, ನಮ್ಮ ತಾಲೂಕಿನ ಕೆರೆಗಳನ್ನು ತುಂಬಿಸಲು ಈಗಾಗಲೇ ಇದಕ್ಕೆ ಸಂಬಂಧಪಟ್ಟ ಜಿಲ್ಲಾಧಿಕಾರಿಗೆ ಮತ್ತು ಸಚಿವರಾದ ಕೆ ಎನ್ (KN Rajanna) ನೀರಿನ ಸಮಸ್ಯೆಯ ಬಗ್ಗೆ ತಿಳಿಸಿದರು ಕೂಡ ಏನು ಪ್ರಯೋಜನವಾಗಿಲ್ಲ, ನೀರಿಲ್ಲದೆ ದನ ಕರುಗಳು ಮತ್ತು ಹಲವಾರು ರಾಸುಗಳಿಗೆ ನೀರಿಲ್ಲದೆ ರೈತರು ಕುಡಿಯಲು ನೀರಿಲ್ಲದೆ ಕಂಗೆಟ್ಟು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಜೊತೆಗೆ ಇದೆ ಸೋಮವಾರದಂದು ಪಟ್ಟಣದಲ್ಲಿರುವ ಶ್ರೀ ಶಿವ ಯೋಗೇಶ್ವರ ಕಲ್ಯಾಣ ಮಂದಿರದಲ್ಲಿ (ವಿರಕ್ತ ಮಠ) ಕಾರ್ಯಕರ್ತರ ಸಭೆಯನ್ನು ಆಯೋಜಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜೆ ಡಿ ಎಸ್ ಮತ್ತು ಬಿಜೆಪಿ ಮೈತ್ರಿ ಪಕ್ಷದ ಎಲ್ಲಾ ಕಾರ್ಯಕರ್ತರು ಆಗಮಿಸಬೇಕೆಂದು ಜೊತೆಗೆ ಕಾರ್ಯಕರ್ತರ ಸಮನ್ವಯ ಸಭೆ ಮುಗಿಸಿ ಎರಡು ಪಕ್ಷಗಳ ಕಾರ್ಯಕರ್ತರು ಕಾಲ್ನಡಿಗೆಯಲ್ಲಿ ತಾಲೂಕಿನ ದಬ್ಬೇಘಟ್ಟ ರಸ್ತೆಯಲ್ಲಿರುವ ಹೇಮಾವತಿ ಕಚೇರಿ ಆವರಣಕ್ಕೆ ಸೋಮವಾರ ಆಗಮಿಸಿ ಧರಣಿಯನ್ನು ಪ್ರಾರಂಭಿಸಿ .ಈ ಕೂಡಲೇ ನೀರಿನ ಸಮಸ್ಯೆ ಬಗೆಹರಿಸಬೇಕು ನಮ್ಮ ತಾಲೂಕಿಗೆ ಹೇಮವತಿ ನೀರನ್ನು ಹರಿಸಬೇಕೂ, ಇಲ್ಲವಾದರೆ ಹಗಲು ರಾತ್ರಿ ಎನ್ನದೆ ಧರಣಿಯನ್ನು ಕೈ ಬಿಡದೆ ಮುಂದುವರಿಸಲಾಗುವುದು ಎಂದರು.
ಇದೆ ವೇಳೆ ಕಾರ್ಯಕರ್ತರಿಗೆ ಕರೆ ನೀಡಿ ಈ ಧರಣಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೈತ್ರಿ ಪಕ್ಷದ ಜೆಡಿಎಸ್ ಮತ್ತು ಬಿ ಜೆ ಪಿ ಕಾರ್ಯಕರ್ತರು ಪಾಲ್ಗೊಳ್ಳಬೇಕು ಎಂದು ನಮ್ಮ ಮಾಧ್ಯಮದ ಮುಖೇನ ಕಾರ್ಯಕರ್ತರಿಗೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ವೆಂಕಟಪುರ ಯೋಗೀಶ್. ಮುನಿಯೂರು ರಂಗಸ್ವಾಮಿ. ಹೊನ್ನೇನಹಳ್ಳಿ ಕೃಷ್ಣಮೂರ್ತಿ. ಹೆಡಿಗೆಹಳ್ಳಿ ವಿಶ್ವನಾಥ್. ಇನ್ನು ಹಲವು ಮುಖಂಡರು ಉಪಸ್ಥಿತರಿದ್ದರು.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv
Tumkur: ಮಸಾಲ ಜಯರಾಮ್ ತೋಟದ ಮನೆಯಲ್ಲಿ BSY ಹೈ-ಟೆನ್ಶನ್ ಸಭೆಗೆ,ಮಧುಸ್ವಾಮಿ ಹಾಜರ್