Janataa24 NEWS DESK
Mandya: ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಒಂದು ಕೋಟಿ ಹಣ ಜಪ್ತಿ.

ಮಂಡ್ಯ: ಚುನಾವಣೆ ಕಾವೇರಿದ ಬೆನ್ನಲ್ಲೇ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ, ಮದ್ದೂರು ತಾಲ್ಲೂಕಿನ ಕೊಂಗಬೋರನದೊಡ್ಡಿ ಬಳಿಯ ಚೆಕ್‌ಪೋಸ್ಟ್ ಮೂಲಕ ಕಾರಿನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ₹ 1ಕೋಟಿ (Crore) ಹಣವನ್ನು ಚುನಾವಣಾಧಿಕಾರಿಗಳು ಸೋಮವಾರ ಜಪ್ತಿ(Seize)ಮಾಡಿದ್ದಾರೆ.
ಗಿರೀಶ್ ಎಂಬುವವರು ಬೆಂಗಳೂರಿನಿಂದ ಹುಂಡೈ ಕ್ರೆಟಾ ಕಾರ್‌ನಲ್ಲಿ ಕೆ.ಆರ್.ಪೇಟೆ ಕಡೆಗೆ ಪ್ರಯಾಣ ಮಾಡುತ್ತಿದ್ದಾಗ ಕೊಂಗಬೋರನದೊಡ್ಡಿ ಗ್ರಾಮದ ಬಳಿ ಆರಂಭವಾಗಿರುವ ಚುನಾವಣಾ ಚೆಕ್‌ಪೋಸ್ಟ್ ಸಿಬ್ಬಂದಿ ತಡೆದು ತಪಾಸಣೆ ನಡೆಸಿದರು. ಈ ವೇಳೆ ಚೀಲದಲ್ಲಿ ತುಂಬಿಟ್ಟಿದ್ದ ನಗದು(Cash) ಪತ್ತೆಯಾಯಿತು.
ಈ ಬಗ್ಗೆ ಕಾರು ಮಾಲಿಕ ಗಿರೀಶ್ ಅವರನ್ನು ಚುನಾವಣಾಧಿಕಾರಿಗಳು ಪ್ರಶ್ನಿಸಿದಾಗ ಪೂರಕ ದಾಖಲೆಗಳನ್ನು ನೀಡದ ಪರಿಣಾಮ ಹಣವನ್ನು ಜಪ್ತಿ ಮಾಡಿದ್ದಾರೆ. ಈ ಕುರಿತು ಚುನಾವಣಾಧಿಕಾರಿಗಳು ಮದ್ದೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಳವಳ್ಳಿ ಡಿವೈಎಸ್‌ಪಿ ಕೃಷ್ಣಪ್ಪ, ತಹಶೀಲ್ದಾರ್ ಕೆ.ಎಸ್.ಸೋಮಶೇಖರ್, ಮದ್ದೂರು ಪೋಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಕೆ.ಆರ್.ಪ್ರಸಾದ್, ಚುನಾವಣಾಧಿಕಾರಿ ಲೋಕನಾಥ್ ಸ್ಥಳದಲ್ಲಿ ಹಾಜರಿದ್ದರು.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv