Janataa24 NEWS DESK
Mandya:ನಕಲಿ ಮದ್ಯ ತಯಾರಿಸುತ್ತಿದ್ದ ಮನೆ ಮೇಲೆ ಅಬಕಾರಿ ದಾಳಿ.


ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಪ್ರತಿಷ್ಠಿತ ಬ್ರ್ಯಾಂಡ್‌ಗಳ ನಕಲಿ ಮದ್ಯ ತಯಾರಾಗುತ್ತಿದೆ. ಹೌದು, ಇಲ್ಲಿ ನಕಲಿ ಯಂತ್ರ, ಸ್ಪಿರಿಟ್ ಬಳಸಿ ಡೂಪ್ಲಿಕೇಟ್ ಮದ್ಯ ತಯಾರು ಮಾಡ್ತಾರೆ.
ಮಂಡ್ಯ ನಗರದ ಹೊರ ವಲಯದ ಬಿ.ಟಿ.ಲಲಿತ ನಾಯಕ್ ಬಡಾವಣೆಯಲ್ಲಿ ಬಾಡಿಗೆಗೆ ಮನೆ ಪಡೆದು ನಕಲಿ ಮದ್ಯ ತಯಾರಿಸುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಬ್ಲಾಕ್ ಅಂಡ್ ವೈಟ್, ಟೀಚರ್ಸ್ ಸ್ಕಾಚ್, 100 ಪೈಪರ್ಸ್, ಮ್ಯಾಕ್ ಡ್ಯುವಲ್ ವಿಸ್ಕಿ, ಇಂಪೀರಿಯಲ್ ಬ್ಲೂ, ಸಿಲ್ವರ್ ಕಪ್ ಸ್ಯಾಚೆಟ್ ಗಳು ಪತ್ತೆಯಾಗಿವೆ.
ಕರ್ನಾಟಕ ಸರ್ಕಾರದ ಲೋಗೋ, ಅಬಕಾರಿ ಇಲಾಖೆಯ ಚಿಹ್ನೆ, ಸಂಖ್ಯೆಯನನ್ನ ಖದೀಮರು ದುರ್ಬಳಕೆ ಮಾಡಿಕೊಂಡಿದ್ದಾರೆ. ನಕಲಿ ಮದ್ಯ ತಯಾರಿಸುತ್ತಿದ್ದ ಮನೆ ಮೇಲೆ ಅಬಕಾರಿ ಅಧಿಕಾರಿಗಳ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಸುಮಾರು 20 ಲಕ್ಷ ಮೌಲ್ಯದ ನಕಲಿ ಮದ್ಯ ಮತ್ತು ಇತರೆ ಸಾಮಗ್ರಿಗಳು ವಶಕ್ಕೆ ಪಡೆಯಲಾಗಿದೆ.
ದಾಳಿ ವೇಳೆ 40 ಸಾವಿರ ಮೌಲ್ಯದ 590 ಲೀಟರ್ ಸ್ಪಿರಿಟ್, 30 ಲೀಟರ್ ನಕಲಿ ಮದ್ಯ, 15 ಲಕ್ಷ ಮೌಲ್ಯದ ವಿವಿಧ ಮಾದರಿಯ ಮದ್ಯದ ಸ್ಯಾಚೆಟ್ ತಯಾರಿಸುವ ಯಂತ್ರ ಹಾಗೂ ತಯಾರಿಕೆಗೆ ಬೇಕಾದ ಕಚ್ಚಾ ಸಾಮಗ್ರಿ, ಸ್ಟಿಕ್ಕರ್‌ಗಳು ಪತ್ತೆಯಾಗಿವೆ.
ಪ್ರಕರಣ ಸಂಬಂಧ ಆರೋಪಿಯೊಬ್ಬನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಖಚಿತ ಮಾಹಿತಿ ಮೇರೆಗೆ ಬಾರ್‌ವೊಂದರ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು.
ನಗರದ ಕಾಮಧೇನು ಕಂಫರ್ಟ್ಸ್ ಮೇಲೆ ಅಬಕಾರಿ ಅಧಿಕಾರಿಗಳ ದಾಳಿ ನಡೆಸಿದ್ದರು. ದಾಳಿ ವೇಳೆ 35 ಲೀಟರ್ ನಕಲಿ ಮದ್ಯದ ಸ್ಯಾಚೆಟ್‌ಗಳು ಪತ್ತೆಯಾಗಿದ್ದವು. ಆ ಪ್ರಕರಣ ಬೆನ್ನೇರಿದಾಗ ಬೃಹತ್ ದಂಧೆ ಬಯಲಿಗೆ ಬಂದಿದೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.