M T Krishnappa: ನೀತಿ ಸಂಹಿತೆಗೂ ಮೊದಲೇ ಒಂದು ಕೋಟಿ ವೆಚ್ಚದ ಕಾಮಗಾರಿಗಳಿಗೆ ಪೂಜೆ ಸಲ್ಲಿಸಿದ – ಶಾಸಕ ಎಂ ಟಿ ಕೃಷ್ಣಪ್ಪ.

Janataa24 NEWS DESK

M T Krishnappa :ನೀತಿ ಸಂಹಿತೆಗೂ ಮೊದಲೇ ಒಂದು ಕೋಟಿ ವೆಚ್ಚದ ಕಾಮಗಾರಿಗಳಿಗೆ ಪೂಜೆ ಸಲ್ಲಿಸಿದ – ಶಾಸಕ ಎಂ ಟಿ ಕೃಷ್ಣಪ್ಪ.

Turuvekere MLA MT krishnappa

ತುರುವೇಕೆರೆ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಶನಿವಾರದಂದು ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿ ಆಗುವ ಮೊದಲೇ ತುರುವೇಕೆರೆ ಶಾಸಕರಾದ ಎಂ ಟಿ ಕೃಷ್ಣಪ್ಪ (m t Krishnappa) ಅವರು ಸುಮಾರು 1 ಕೋಟಿ ರೂ ವೆಚ್ಚದ ಜಲಜೀವನ್ ಮಿಷನ್ (Jala jeevan mission) ಯೋಜನೆಯ ಮನೆ ಮನೆಗೆ ನಲ್ಲಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಇದೆ ವೇಳೆ ಚಿತ್ರದೇವರಹಟ್ಟಿಯಲ್ಲಿ 25 ಲಕ್ಷ ರೂ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಇಂದು ಮಧ್ಯಾಹ್ನದ ನಂತರ ಲೋಕಸಭಾ ಚುನಾವಣೆಯ (Lokasaba election)ನೀತಿ ಸಂಹಿತೆ ಜಾರಿ ಆಗಲಿದ್ದು,ನೀತಿ ಸಂಹಿತೆ ಜಾರಿಯಾದ ನಂತರ ಯಾವುದೇ ಕಾರ್ಯಕ್ರಮಗಳನ್ನು ಮಾಡಲಾಗುವುದಿಲ್ಲ ಹಾಗಾಗಿ ಅದಕ್ಕೂ ಮುಂಚೆ ಈ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ್ದೇನೆ, ಆದಷ್ಟು ಬೇಗ ಈ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಶಾಸಕರು ಜೆಜೆಎಂ (JJM)ಕಾಮಗಾರಿಗಳ ಗುದ್ದಲಿ ಪೂಜೆಯಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ, ತಾಲೂಕು ಮುಖಂಡರಾದ ವೆಂಕಟಪುರ ಯೋಗೀಶ್, ತಾಲೂಕು ಜೆಡಿಎಸ್ ಅಧ್ಯಕ್ಷರಾದ ದೊಡ್ಡೇಗೌಡ, ಇವರು ಶಾಸಕರಿಗೆ ಸಾತ್ ನೀಡಿದರು, ಜೊತೆಗೆ ಗ್ರಾಮ ಪಂಚಾಯತಿ ಸದಸ್ಯರಾದ ಭವ್ಯ ಸುರೇಶ್, ರಘು ಹರೀಶ್ ಗುತ್ತಿಗೆದಾರ ,ಇನ್ನೂ ಅನೇಕರು ಈ ಗುದ್ದಲಿ ಪೂಜೆಯಲ್ಲಿ ಪಾಲ್ಗೊಂಡಿದ್ದರು.

 

ವರದಿ : ಮಂಜು ತುರುವೇಕೆರೆ

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

Subscribe YouTube
https://youtube.com/@janataa24?si=XsFcych2GMH0O6Gv

WPL 24: 16 ವರ್ಷದ ಕನಸು ನನಸು- ಈ ಬಾರಿ RCB ಚಾಂಪಿಯನ್ಸ್

Leave a Reply

Your email address will not be published. Required fields are marked *