JANATAA24 NEWS DESK
Lokayukta: ಲೋಕಾಯುಕ್ತ ದಾಳಿ- ಪುರುಷೋತ್ತಮ ಮತ್ತು ಜನಾರ್ದನನ ಧನ ಕಂಡು ದಂಗಾದ ಲೋಕಾ.!

ಬೆಂಗಳೂರು: ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ನಿನ್ನೆ ಬೆಳ್ಳಂಬೆಳ್ಳಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಆದಾಯಕ್ಕೂ ಅಧಿಕ ಆಸ್ತಿಗಳಿಗೆ ಮಾಡಿಕೊಂಡಿರುವ ಭ್ರಷ್ಟ ಅಧಿಕಾರಿಗಳಿಗೆ ಬಿಸಿಮುಟ್ಟಿಸುವ ಕೆಲಸವನ್ನ ಲೋಕಾಯುಕ್ತ (Lokayukta) ಪೊಲೀಸರು ಮಾಡುತ್ತಿದ್ದಾರೆ.
ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜ್ ನೇತೃತ್ವದ ಅಧಿಕಾರಿಗಳ ಮೇಲೆ ದಾಳಿ ಮಾಡಿದ್ದಾರೆ. ಪಿಡಬ್ಲ್ಯೂಡಿ ಚೀಫ್ ಇಂಜಿನಿಯರ್ ಪುರುಷೋತ್ತಮ್, ಬೆಂಗಳೂರು ಗ್ರಾಮಾಂತರ ಕರ್ನಾಟಕ ರೆಸಿಡೆನ್ಸಿಯಲ್ ಎಜುಕೇಶನ್ ಇನ್ಸ್ಟಿಟ್ಯೂಷನ್ ಸೊಸೈಟಿ ಎಂಜಿನಿಯರ್ ಜನಾರ್ದನ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ಮಾಡಲಾಗಿದೆ.
ಪರಷೋತ್ತಮ್‌ಗೆ ಸೇರಿದ 11 ಕಡೆ ದಾಳಿ ಮಾಡಿದ್ದಾರೆ ಜನಾರ್ದನನಿಗೆ ಸೇರಿದ 8 ಸ್ಥಳಗಳಲ್ಲಿ ದಾಳಿ ಮಾಡಿ ಲೋಕಾಯುಕ್ತ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ. ಪುರುಷೋತ್ತಮ್ ದಾಸ್ ನಿವಾಸದಲ್ಲಿ ಚಿನ್ನಾಭರಣ, ನಗದು ಪತ್ತೆ ಆಗಿದೆ.
ಜನಾರ್ದನ ಮನೆಯಲ್ಲಿ 1.70 ಕೋಟಿ ಲಕ್ಷ ನಗದು ಪತ್ತೆಯಾಗಿದೆ. ಆದಾಯಕ್ಕಿಂತ 216% ಅಧಿಕ ಆಸ್ತಿ ಹೊಂದಿರುವ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಸ್ಥಿರಾಸ್ತಿ 3.20 ಕೋಟಿ, ಒಂದು ನಿವೇಶನ, ಮೂರು ಮನೆ, 34 ಎಕರೆ ಕೃಷಿ ಜಮೀನು, ಚರಾಸ್ತಿ 1.70 ಪತ್ತೆಯಾಗಿದೆ. ಚಿನ್ನಾಭರಣ 7.8 ಲಕ್ಷ ಮೌಲ್ಯ, 20 ಲಕ್ಷ ಮೌಲ್ಯದ ವಾಹನಗಳು ಸಹ ಇವೆ. ಇತರೆ 60 ಲಕ್ಷ ಪತ್ತೆಯಾಗಿದೆ. ಜನಾರ್ದನನದ್ದು ಒಟ್ಟು 4.42 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ಲೋಕಾಯುಕ್ತ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.