Janataa24 NEWS DESK
Lokasabha: ಆಂಧ್ರ ಸಿಎಂ ಜಗನ್ ಮೇಲೆ ಕಲ್ಲಿನಿಂದ ದಾಳಿ.

ವಿಜಯವಾಡ: ಆಂಧ್ರಪ್ರದೇಶದಲ್ಲಿ ಲೋಕಸಭಾ ಚುನಾವಣೆಯ ಕಣ ರಂಗೇರಿದ್ದು, ಜಗನ್ ತಂತ್ರಗಾರಿಕೆಯನ್ನು ಮಣಿಸಲು ತೆಲುಗು ದೇಶಂ ಪಾರ್ಟಿ ಮತ್ತು ಜನಸೇನಾ ಪಕ್ಷಗಳು ಒಂದಾಗಿ ಜಗನ್ ವಿರುದ್ಧ ಯುದ್ಧ ಸಾರಿದ್ದಾಗಿದೆ.
ಇದೀಗ ಆಂಧ್ರಪ್ರದೇಶದ ಮುಖ್ಯಮಂತ್ರಿಗಳಾದ ವೈ ಎಸ್ ಜಗನ್ ಮೋಹನ್ ರೆಡ್ಡಿ(Jagan Mohan Reddy) ಅವರು
ಶನಿವಾರ ರಾತ್ರಿ ಚುನಾವಣಾ ಬಸ್ ನ ಮೇಲೆ ರೋಡ್ ಶೋ ನಡೆಸುತ್ತಿದ್ದ ಸಂದರ್ಭದಲ್ಲಿ, ಜಗನ್ ಮೋಹನ್ ರೆಡ್ಡಿ ಅವರಿಗೆ ದೊಡ್ಡ ಹಾರವನ್ನು ಹಾಕಲಾಗಿತ್ತು, ಇಂತಹದ್ದೇ ಸಮಯಕ್ಕೆ ಹೊಂಚು ಹಾಕಿ ಕುಳಿತಿದ್ದ ಕೆಲವು ದುಷ್ಕರ್ಮಿಗಳಿಂದ ಸಿಎಂ ಜಗನ್ ಮೇಲೆ ಕಲ್ಲು ತೂರಲಾಗಿದ್ದು ಜಗನ್ ಕಣ್ಣಿಗೆ ಪೆಟ್ಟಾಗಿ ಸಣ್ಣದಾದ ಗಾಯವಾಗಿರುತ್ತದೆ.
ತಕ್ಷಣವೇ ಎಚ್ಚೆತ್ತ ಬೆಂಗಾವಲು ಪಡೆ ಮತ್ತು ಕಾರ್ಯಕರ್ತರು ಜಗನ್ ಅವರಿಗೆ ಚುನಾವಣಾ ಪ್ರಚಾರದ ಬಸ್ಸಿನಲ್ಲಿಯೇ ಪ್ರಥಮ ಚಿಕಿತ್ಸೆಯನ್ನು ನೀಡಿರುತ್ತಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ದುಷ್ಕರ್ಮಿಗಳೆಡೆಗೆ ಬಲೆ ಬೀಸಿರುತ್ತಾರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv