Janata24 NEWS DESK
Kolara: ಸಚಿವ ಮುನಿಯಪ್ಪ ಮಾಜಿ ಸ್ವೀಕರ್ ರಮೇಶ್ ಕುಮಾರ್ ಬಣಗಳ ನಡುವೆ ಕೋಲಾರ ಎಂಪಿ ಟಿಕೆಟ್ ಫೈಟ್

ಕೋಲಾರ: ಚುನಾವಣೆ ದಿನದಿಂದ ದಿನಕ್ಕೆ ಸ್ವರೂಪ ಪಡೆಯುತ್ತಿದ್ದು ಟಿಕೆಟ್ ಘೋಷಣೆಯಾಗದೇ ಬಾಕಿ ಉಳಿದಿರುವ ಕ್ಷೇತ್ರಗಳಲ್ಲಿ ಟಿಕೆಟ್ ನೀಡುವ ಸಲುವಾಗಿ ಕಸರತ್ತು ನಡೆಸುತ್ತಿವೆ. ಯಾವ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಗೆಲವು ಸುಲಭವಾಗುತ್ತದೆ. ಯಾವ ಅಭ್ಯರ್ಥಿ ಆ ಕ್ಷೇತ್ರಕ್ಕೆ ಸೂಕ್ತ ಎನ್ನುವ ತಲೆ ಬಿಸಿಯಲ್ಲಿ ಹೈಕಮಾಂಡ್ ಮುಳುಗಿದೆ.
ಚುನಾವಣೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಲೋಕಸಭೆ ಚುನಾವಣೆಗೆ ಕರ್ನಾಟಕದ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಿದ್ದು, ಇನ್ನು ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದು ಮಾತ್ರ ಬಾಕಿ ಉಳಿದಿದೆ
ಕೋಲಾರದಲ್ಲಿನ ರಾಜಕೀಯ ಒಬ್ಬರಿಗೊಬ್ಬರು ನಡುವೆ ಬಣ ರಾಜಕೀಯ ತಾರಕಕ್ಕೇರಿದೆ. ಸಚಿವ ಕೆಎಚ್ ಮುನಿಯಪ್(KH Muniyappa) ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣಗಳ ನಡುವಣ ತಿಕ್ಕಾಟ ಹೆಚ್ಚಾಗಿದೆ. ಸಚಿವ ಮುನಿಯಪ್ಪನ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ನೀಡುವಂತೆ ಮುನಿಯಪ್ಪ ಪಟ್ಟು ಹಿಡಿದಿದ್ದರೆ, ಅವರಿಗೆ ಟಿಕೆಟ್ ನೀಡಿದರೆ ಕೆಲಸವೇ ಮಾಡುವುದಿಲ್ಲ ಎಂದು ರಮೇಶ್ ಕುಮಾರ್ ಬಣ್ಣಪಟ್ಟು ಬಿಡದೇ ಹಠವಾಗಿ ಕೂತಿದೆ.
ಕೈ ಟಿಕೆಟ್ ಬಾಕಿ ಉಳಿದಿರುವ ನಾಲ್ಕು ಕ್ಷೇತ್ರದಲ್ಲಿ ಒಂದಾದ ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್ ಅಳಿಯ ಚಿಕ್ಕಪೆದ್ದಣ್ಣಗೆ ನೀಡುವಂತೆ ಸಚಿವ ಕೆಹೆಚ್ ಮುನಿಯಪ್ಪ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಒತ್ತಡ ಹೇರಿದ್ದಾರೆ. ಜೊತೆಗೆ ಹೈಕಮಾಂಡ್ ವರಿಷ್ಠರಿಗೂ ಈಗಾಗಲೇ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಮ್ಮತಿಸಿದರೆ ಕೋಲಾರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಚಿಕ್ಕಪೆದ್ದಣ್ಣ ಕಣಕ್ಕಿಳಿಯುವುದು ಬಹುತೇಕ ಖಚಿತ ಎಂದು ಕಾಂಗ್ರೆಸ್ ವಲಯದಲ್ಲಿ ದಟ್ಟವಾಳಿ ಕೇಳಿ ಬರುತ್ತಿದೆ.
ಕೋಲಾರದಲ್ಲಿ ಸಚಿವ ಮುನಿಯಪ್ಪ ಅವರ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ಕೊಡುವ ತೀರ್ಮಾನವನ್ನು ಮಾಜಿ ಸ್ಪೀಕರ್ ಕೆಆರ್ ರಮೇಶ್ ಕುಮಾರ್ ಬಣ ತೀವ್ರವಾಗ ಕಟುವಾಗಿ ವಿರೋಧಿಸಿದೆ. ರಮೇಶ್ ಕುಮಾರ್ ಬಣ ಎಲ್ ಹನುಮಂತಯ್ಯ ಅವರಿಗೆ ಟಿಕೆಟ್ ಕೊಡಿಸುವ ಪ್ರಯತ್ನ ನಡೆಸುತ್ತಿದೆ. ಆದರೆ ಇದಕ್ಕೆ ಮುನಿಯಪ್ಪ ಬಣದ ವಿರೋಧ ಇದೆ.
ಈ ಎರಡು ಬಣಗಳ ತಿಕ್ಕಾಟದ ನಡುವೆ ಯಾರಿಗೆ ಹೈಕಮಾಂಡ್ ಮಣೆಯಾಕುತ್ತದೆ ಎಂದು ಕಾದು ನೋಡಬೇಕಿದೆ. ಈ ಇಬ್ಬರ ಜಗಳ ಮೂರನೆಯವನಿಗೆ ಲಾಭ ಎನ್ನುವಂತೆ ಸಿಟಿ ರವಿ ಶೋಭ ಕರಂದ್ಲಾಜೆ ನಡುವೆ ಟಿಕೆಟ್ ಫೈಟ್ ನಲ್ಲಿ ಕೋಟ ಶ್ರೀನಿವಾಸ್ ಪೂಜಾರಿ ಪಾಲಾಯಿತು ಆಗೆ ಇಲ್ಲಿ ಮತ್ಯಾರಿಗಾದರೂ ಇಲ್ಲಿ ಟಿಕೆಟ್ ಅದೃಷ್ಟ ಇದೆಯೇ ಎಂಬುದು ಅದೃಷ್ಟದ ಪ್ರಶ್ನೆ.
35-40 ವರ್ಷದಿಂದ ಪಕ್ಷ ಕಟ್ಟಿದ್ದೇನೆ. ಎಲ್ಲರ ಮಕ್ಕಳಿಗೆ ಟಿಕೆಟ್ ಸಿಕ್ಕಿದೆ, ಹಾಗಾಗಿ ನಾನೂ ಕೇಳುತ್ತಿದ್ದೇನೆ. ಆಕಸ್ಮಾತ್ ಆಗಿ ಕಳೆದ ಬಾರಿ ನನಗೆ ಸೋಲಾಗಿದೆ. ನಾನು ಪಕ್ಷ ಕಟ್ಟಿದ್ದು, ಒಂದು ತಾಲೂಕಿಗೆ, ಜಿಲ್ಲೆಗೆ ಸೀಮಿತವಾಗಿರುವ ವ್ಯಕ್ತಿಯಲ್ಲ. ರಾಜ್ಯದಲ್ಲಿ ನನ್ನದೇ ಆದ ಶಕ್ತಿ ಇದೆ ಎಂದರು. ತನ್ನದೇ ಆದ ಅಭಿಮಾನಿ ಪಡೆಯಿದೆ ತನ್ನದೆಯಾದ ಪ್ರಬುದ್ಧರು ಇದ್ದಾರೆ.
ನಮ್ದು ದೊಡ್ಡ ಪಕ್ಷ ನಮ್ಮಲ್ಲಿ ಲೋಪ ದೋಷಗಳು ಇರುತ್ತವೆ ಅವುಗಳ ಬಗ್ಗೆ ನಾವು ತೆಲೆಕೆಡಿಸಿಕೊಳ್ಳುವುದಿಲ್ಲ. ತನ್ನ ಸೋಲಿನ ಬಗ್ಗೆ ತಾನು ಯಾವತ್ತೂ ಯಾರ ವಿರುದ್ದ ಆರೋಪಿಸಿ ಮಾತನಾಡಿಲ್ಲ. ರಮೇಶ್ ಕುಮಾರ್(Ramesh Kumar) ಕೂಡ ಯಾರ ವಿರುದ್ದ ಕೂಡ ಮಾತನಾಡಿಲ್ಲ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv
Munirathna : 40 ಶಾಸಕರೊಂದಿಗೆ ಡಿಕೆಶಿ ಬಿಜೆಪಿ ಸೇರಲು ತುದಿಗಾಲಿ ನಿಂತಿದ್ದಾರೆ ಶಾಸಕ ಮುನಿರತ್ನ