JANATAA24 NEWS DESK
Karnataka: ಸರ್ಕಾರಿ ವೈದ್ಯರು ಇನ್ನು ಮುಂದೆ ಖಾಸಗಿ ಆಸ್ಪತ್ರೆಯಲ್ಲಿ ಆಪರೇಷನ್ ಮಾಡುವಂತಿಲ್ಲ ಎಂದು ಆದೇಶಿಸಿದ ರಾಜ್ಯ ಸರ್ಕಾರ.

ಸರ್ಕಾರಿ ಆಸ್ಪತ್ರೆಗಳು ಬಡವರು, ಗ್ರಾಮೀಣ ಜನರು ಹಾಗೂ ತುರ್ತು ಪರಿಸ್ಥಿತಿಯಲ್ಲಿರುವವರ ಜೀವಾಳ. ಆದರೆ ಇತ್ತೀಚಿನ ವರ್ಷಗಳಲ್ಲಿ ಒಂದು ಗಂಭೀರ ಸಮಸ್ಯೆ ಸಾರ್ವಜನಿಕ ಚರ್ಚೆಗೆ ಬಂದಿದೆ. ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳ (IPD) ಚಿಕಿತ್ಸೆಯಲ್ಲಿ ತೊಡಗುವುದು. ಇದರ ಪರಿಣಾಮವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಬೇಕಾದ ಸಮಯಕ್ಕೆ ಚಿಕಿತ್ಸೆ ಸಿಗದೇ, ನಿರ್ಲಕ್ಷ್ಯ, ವಿಳಂಬ ಮತ್ತು ಕೆಲವೊಮ್ಮೆ ಸಾವುಗಳಿಗೂ ಕಾರಣವಾಗಿರುವ ಘಟನೆಗಳು ಬೆಳಕಿಗೆ ಬಂದಿವೆ.
ಈ ಹಿನ್ನಲೆಯಲ್ಲಿ, ಕರ್ನಾಟಕ ಸರ್ಕಾರವು 28-01-2026ರಂದು ಮಹತ್ವದ ಸ್ಪಷ್ಟೀಕರಣ ಹೊರಡಿಸಿದೆ.
ಹಾಗಾದರೆ ಸಮಸ್ಯೆ ಏನಿತ್ತು?
ಸರ್ಕಾರಿ ವೈದ್ಯರು ಸರ್ಕಾರಿ ಆಸ್ಪತ್ರೆಯ ಕರ್ತವ್ಯ ಸಮಯದಲ್ಲಿಯೇ ಖಾಸಗಿ ಆಸ್ಪತ್ರೆಗಳಿಗೆ ಹೋಗುವುದು,
ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳನ್ನು ಅಡ್ಮಿಟ್ ಮಾಡಿ ನಿರಂತರ ಚಿಕಿತ್ಸೆ ನೀಡುವುದು,ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಲಭ್ಯತೆ ಕಡಿಮೆಯಾಗುವುದು ಇವುಗಳೆಲ್ಲವೂ ಸಾರ್ವಜನಿಕ ಸೇವೆಗೆ ಧಕ್ಕೆ ತರುವಂತಹ ಪರಿಸ್ಥಿತಿಯನ್ನು ನಿರ್ಮಿಸಿದ್ದವು.
ಈ ಬಗ್ಗೆ ಮಾನ್ಯ ಲೋಕಾಯುಕ್ತ ಕರ್ನಾಟಕ ಆಡಳಿತ ಸುಧಾರಣಾ ಆಯೋಗ ಹಲವಾರು ಬಾರಿ ಸರ್ಕಾರದ ಗಮನ ಸೆಳೆದಿದ್ದವು.
ಸರ್ಕಾರ ಈ ಸಮಸ್ಯೆಗೆ ಏನೆಂದು ತೀರ್ಮಾನಿಸಿದೆ?
ಹೊಸ ಆದೇಶದ ಪ್ರಕಾರ ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳ ಚಿಕಿತ್ಸೆ (IPD) ನೀಡುವುದು ಸಂಪೂರ್ಣ ನಿಷೇಧ.
ಖಾಸಗಿ ಅಭ್ಯಾಸಕ್ಕೆ ಅವಕಾಶ ಇದೆ, ಆದರೆ ಅದು ಕೇವಲ ಹೊರರೋಗಿ ವಿಭಾಗ (OPD)ಕ್ಕೆ ಮಾತ್ರ. ಅಂದರೆ,ಕೇವಲ ಸಲಹೆ, ಪರೀಕ್ಷೆ, ಕನ್ಸಲ್ಟೇಶನ್ ರೋಗಿಯನ್ನು ಅಡ್ಮಿಟ್ ಮಾಡುವುದು, ಶಸ್ತ್ರಚಿಕಿತ್ಸೆ ನಡೆಸುವುದು, ವಾರ್ಡ್ ರೌಂಡ್ ಹೋಗುವುದಕ್ಕೆ ಅನುಮತಿ ಇಲ್ಲ. ಇನ್ನಷ್ಟು ಕಟ್ಟುನಿಟ್ಟಾದ ನಿಯಮಗಳು ಖಾಸಗಿ ಅಭ್ಯಾಸವನ್ನು ಸರ್ಕಾರಿ ಕೆಲಸದ ಸಮಯದ ಹೊರಗೆ ಮಾತ್ರ ಮಾಡಬೇಕು. ಒಂದೇ ಒಂದು ಖಾಸಗಿ ಕ್ಲಿನಿಕ್ ಅಥವಾ ಆಸ್ಪತ್ರೆಯಲ್ಲಿ ಮಾತ್ರ OPD ಅಭ್ಯಾಸ ಅದರ ಸಂಪೂರ್ಣ ವಿವರಗಳನ್ನು ಸರ್ಕಾರಕ್ಕೆ ಘೋಷಿಸಬೇಕು ಈ ನಿಯಮಗಳನ್ನು ಉಲ್ಲಂಘಿಸಿದರೆ ಅದನ್ನು ದುರ್ನಡತೆ (misconduct) ಎಂದು ಪರಿಗಣಿಸಲಾಗುತ್ತದೆ
ಸರ್ಕಾರಿ ಸೇವಾ ನಿಯಮಗಳ ಅಡಿಯಲ್ಲಿ ಶಿಸ್ತು ಕ್ರಮ ಜರುಗುತ್ತದೆ.
ಸರ್ಕಾರದ ಈ ನಿರ್ಧಾರದ ಮಹತ್ವ ಏನು?
ಈ ಆದೇಶವು, ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಲಭ್ಯತೆಯನ್ನು ಹೆಚ್ಚಿಸುತ್ತದೆ. ಬಡ ಮತ್ತು ಸಾಮಾನ್ಯ ಜನರಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗುವಂತೆ ಮಾಡುತ್ತದೆ. ಸಾರ್ವಜನಿಕ ಸೇವೆಗೆ ಮೊದಲ ಆದ್ಯತೆ ನೀಡುತ್ತದೆ. ಆರೋಗ್ಯ ವ್ಯವಸ್ಥೆಯ ಮೇಲಿನ ಜನರ ನಂಬಿಕೆಯನ್ನು ಬಲಪಡಿಸುತ್ತದೆ. ಇದು ವೈದ್ಯರ ವಿರುದ್ಧದ ಕ್ರಮವಲ್ಲ,ಸಾರ್ವಜನಿಕ ಆರೋಗ್ಯದ ಪರವಾದ ಜವಾಬ್ದಾರಿಯುತ ನಿರ್ಧಾರ.
ಸಾರ್ವಜನಿಕರ ಪಾತ್ರವೂ ಮುಖ್ಯ.!
ಸಾಮಾನ್ಯ ನಾಗರಿಕರು,ಸರ್ಕಾರಿ ವೈದ್ಯರು ಸರ್ಕಾರಿ ಸಮಯದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಪ್ರಶ್ನಿಸಬೇಕು.
ಅಕ್ರಮ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಬೇಕು.
ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ರಕ್ಷಿಸುವ ಹೋರಾಟದಲ್ಲಿ ಭಾಗಿಯಾಗಬೇಕು.
ಸರ್ಕಾರಿ ವೈದ್ಯರು ಮೊದಲು ಸರ್ಕಾರಿ ಸೇವಕರು. ಜನರ ತೆರಿಗೆ ಹಣದಿಂದ ಸಂಬಳ ಪಡೆಯುವ ಅವರು, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸಂಪೂರ್ಣ ಸೇವೆ ನೀಡುವುದು ಅವರ ನೈತಿಕ ಹಾಗೂ ಕಾನೂನುಬದ್ಧ ಕರ್ತವ್ಯ.
ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ವೈದ್ಯರಿಗೆ ಹೀಗೆ ಆದೇಶಿಸಿರುವ ಕರ್ನಾಟಕ ರಾಜ್ಯ ಸರ್ಕಾರ ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಮತ್ತು ಸಂಶೋಧನಾ ಕಾಲೇಜನ್ನು ನಿರ್ಮಿಸಿದರೆ ಇಂತಹ ಎಡಬಿಡಂಗಿ ಡಾಕ್ಟರ್ ಗಳಿಗೆ ಸಲಾಂ ಹೊಡೆಯುವ ಅವಶ್ಯಕತೆ ಇರುವುದಿಲ್ಲ.
ಸೇವೆ ಎಂಬ ವೈದ್ಯ ವೃತ್ತಿಯನ್ನು ಮರೆತು ಹಣಕ್ಕಾಗಿ ಖಾಸಿಗಿ ಆಸ್ಪತ್ರೆಗಳ ಕದ ತಟ್ಟುವ ವೈದ್ಯರ ಸಂಖ್ಯೆ ಇತ್ತೀಚೆಗೆ ಹೆಚ್ಚುತ್ತಲೇ ಬಂದಿದೆ. ಇಂತಹ ದೀರ್ಘ ಕಾಲದ ಸಮಸ್ಯೆಯನ್ನು ರಾಜ್ಯ ಸರ್ಕಾರ ಬದಲಾಯಿಸುತ್ತಾ.? ಪರಿಹಾರ ಒದಗಿಸುತ್ತಾ.❓️ ಕಾದು ನೋಡಬೇಕಿದೆ.
ವರದಿ: ದೇವರಾಜ್ ಆರ್.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.