Tumkur: ಸಚಿವ ಜಮೀರ್ ಅಹ್ಮದ್ ಗೆ ಕೃತಜ್ಞತೆ ಸಲ್ಲಿಸಿದ ಜೆಡಿಎಸ್ ಶಾಸಕ.

Janataa24 NEWS DESK

Tumkur: ವಸತಿ ಸಚಿವರಿಗೆ ಕೃತಜ್ಞತೆ ಸಲ್ಲಿಸಿದ ತುರುವೇಕೆರೆ ಶಾಸಕ ಎಂ ಟಿ ಕೃಷ್ಣಪ್ಪ.

20240314 1454591468534407463848146



ತುರುವೇಕೆರೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಶಾಸಕ ಎಂ ಟಿ ಕೃಷ್ಣಪ್ಪ ಅವರು ಮಾತನಾಡಿ, ವಸತಿ ಸಚಿವರಾದ ಜಮೀರ್ ಅಹಮದ್(Zameer Ahmed) ಅವರಿಗೆ ನಮ್ಮ ತುರುವೇಕೆರೆ ತಾಲೂಕಿಗೆ, ವಿವಿಧ ವಸತಿ ಯೋಜನೆಗಳಾದ, ಬಸವ ವಸತಿ ಯೋಜನೆ ಅಡಿ, 1000 ಮನೆಗಳು, ಅಂಬೇಡ್ಕರ್ ವಸತಿ ಯೋಜನೆ ಅಡಿಯಲ್ಲಿ 1000 ಮನೆಗಳು, ಮತ್ತು ರಾಜೀವ್ ಗಾಂಧಿ ವಸತಿ ಯೋಜನೆ ಅಡಿ 1000 ಮನೆಗಳು, ಒಟ್ಟಾರೆ ಮೂರು ಸಾವಿರ ಮನೆಗಳನ್ನು ನಮ್ಮ ತಾಲೂಕಿಗೆ ನೀಡಿದ್ದು ವಸತಿ ಸಚಿವರಿಗೆ, ಶಾಸಕ ಎಂ ಟಿ  ಕೃಷ್ಣಪ್ಪ(MT Krishnappa) ಅವರು ಅಭಿನಂದನೆಯನ್ನು ಸಲ್ಲಿಸಿದರು.

 



ಇನ್ನು ಇದೇ ವೇಳೆ ಬರುವ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಜಿಲ್ಲೆಗೆ ಜೆ ಡಿ ಎಸ್ ನಿಂದ ಅಥವಾ ಬಿಜೆಪಿ ಇಂದ ಯಾವ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಾರೆ  ಎಂಬ ಮಾಧ್ಯಮದವರ ಪ್ರಶ್ನೆಗೆ, ಶಾಸಕರಾದ ಎಂ ಟಿ ಕೃಷ್ಣಪ್ಪ ಅವರು ಈಗಾಗಲೇ ಬಿಜೆಪಿ ಮತ್ತು ಜೆಡಿಎಸ್ ಎರಡು ಪಕ್ಷಗಳು ಮೈತ್ರಿ ಆಗಿರುವುದರಿಂದ ಯಾವುದೇ ಅಭ್ಯರ್ಥಿ ಕಣಕ್ಕಿಳಿಯಲಿ ಒಟ್ಟಾರೆ ಮೋದಿಯ ಕೈ ಬಲಪಡಿಸುವ ಕೆಲಸವನ್ನು ನಾವು ಮಾಡಲಿದ್ದೇವೆ ಎಂದರು.

 



ಮುಂದುವರೆದು ಮಾತನಾಡಿದ ಅವರು ಈಗಾಗಲೇ ನಮ್ಮ ತಾಲೂಕಿನ ಮುಖೇನ ಹಾದುಹೋಗುವ ನಂಜನಗೂಡು–ಜೀವರ್ಗಿ 150 ಎ ರಾಷ್ಟ್ರೀಯ ಹೆದ್ದಾರಿ ನಮ್ಮ ತಾಲೂಕಿನ ಗಡಿಭಾಗವಾದ ಜೋಡುಗಟ್ಟೆ ಹಾಗೂ ಬಾಣಸಂದ್ರ ಗ್ರಾಮದ ಮಾರ್ಗವಾಗಿ ಬೈಪಾಸ್ ರಸ್ತೆ ಹಾದು ಹೋಗಲಿದ್ದು ಇದಕ್ಕಾಗಿ ಕೇಂದ್ರ ಸರ್ಕಾರ ಈಗಾಗಲೇ 617 ಕೋಟಿಗೊ ಹೆಚ್ಚು ಹಣವನ್ನ ಈಗಾಗಲೇ ಬಿಡುಗಡೆ ಮಾಡಿದೆ, ಈ ಕಾಮಗಾರಿಗೆ ಸಂಬಂಧಪಟ್ಟಂತೆ ಕಳೆದ ಭಾನುವಾರ ನಿತಿನ್ ಗಡ್ಕರಿ ಅವರು ಭೂಮಿ ಪೂಜೆಯನ್ನು ಕೂಡ ನೆರವೇರಿಸಿದ್ದು ಆ ಕಾರ್ಯಕ್ರಮದಲ್ಲಿ ನಾನು ಕೂಡ ಭಾಗವಹಿಸಿದ್ದೆ ಎಂದರು.

 



ಇದೆ ವೇಳೆ ಜೆಡಿಎಸ್ ಮುಖಂಡರುಗಳಾದ ವೆಂಕಟಪುರ ಯೋಗೀಶ್, ಮಂಗಿಕುಪ್ಪೆ ಬಸವರಾಜ್, ಮುನಿಯೂರು ರಂಗಸ್ವಾಮಿ, ಆನಂದ್ ಮರಿಯ, ದಂಡಿನ ಶಿವರ ಗಂಗಾಧರ್, ಇನ್ನು ಹಲವಾರು ಮುಖಂಡರು ಉಪಸ್ಥಿತರಿದ್ದರು.

 

ವರದಿ: ಮಂಜುನಾಥ್ ತುರುವೇಕೆರೆ.

https://www.janataa24.com/swami-japananda-swami-is-saving-life-by-giving-water-to-the-dumb-creatures/



ಕೆಳಗಿನ #ಲಿಂಕ್ ಬಳಸಿ #ಜನತಾ24   #ವಾಟ್ಸಾಪ್_ಗ್ರೂಪ್ ಸೇರಿರಿ

https://chat.whatsapp.com/Jf6jZ0gyQAEA5GBRpHnkrv

Subscribe YouTube
https://youtube.com/@janataa24?si=XsFcych2GMH0O6Gv

Leave a Reply

Your email address will not be published. Required fields are marked *