Janataa24 NEWS DESK
ಗೃಹ ಇಲಾಖೆ ಮಂತ್ರಿಯ ತವರು ಜಿಲ್ಲೆಯಲ್ಲಿ ದಲಿತರಿಗೆ ಅನ್ಯಾಯ.
ದಲಿತರಿಗೆ ನ್ಯಾಯ ಕೊಡಿಸುವಲ್ಲಿ ತುರುವೇಕೆರೆ ಪೊಲೀಸ್ ಇಲಾಖೆ ವಿಫಲ.
ದಲಿತ ಮುಖಂಡ ಹೊನ್ನೇನಹಳ್ಳಿ ಕೃಷ್ಣಮೂರ್ತಿ ನೇರ ಆರೋಪ.

ತುರುವೇಕೆರೆ: ತಾಲೂಕಿನ ಅಮ್ಮಸಂದ್ರ ಸಿಮೆಂಟ್ ಕಾರ್ಖಾನೆಯಲ್ಲಿ ಸ್ವಿಪರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ದಲಿತ ಕಾರ್ಮಿಕ ಹೊನ್ನಪ್ಪ ಎಂಬ ವ್ಯಕ್ತಿಗೆ ಕಾರ್ಖಾನೆಯ ವ್ಯವಸ್ಥಾಪಕ ಮಂಜುನಾಥ್ ಎಂಬುವರು ಬರಿಗೈನಲ್ಲೇ ಮಲದ ಗುಂಡಿ ಸ್ವಚ್ಛಗೊಳಿಸುವಂತೆ ಕಾರ್ಮಿಕನಿಗೆ ತಾಕಿತು ಮಾಡಲಾಗಿದೆ ಎನ್ನಲಾದ ಪ್ರಕರಣ ಈಗಾಗಲೇ
ಕಾರ್ಮಿಕ ಹೊನ್ನಪ್ಪ ಅವರು ಕಾರ್ಖಾನೆಯ ಅಧಿಕಾರಿಗಳ ಬೆದರಿಕೆಗೆ ಭಯದಿಂದ ಈ ವಿಷಯ ಯಾರಿಗೂ ತಿಳಿಸದೆ ಕೆಲಕಾಲ ಸುಮ್ಮನೆ ಇದ್ದು,
ಕಾರ್ಮಿಕ ಹೊನ್ನಪ್ಪ ಎಂಬುವವರು ಮಲದಗುಂಡಿಯಲ್ಲಿ ಬರಿಗೈನಲ್ಲಿ ಸ್ವಚ್ಛ ಮಾಡುತ್ತಿರುವ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣಕ್ಕೆ ಫೋಟೋ ಮತ್ತು ವಿಡಿಯೋವನ್ನು ಹರಿ ಬಿಡಲಾಗಿತ್ತು.
ಇದರ ಸಂಬಂಧ ಮಂಜುನಾಥ್ ಮತ್ತು ಮೂರ್ತಿ ಎಂಬುವರ ಮೇಲೆ ದಂಡಿನ ಶಿವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರು ಸಹ ಅವರನ್ನು ಬಂಧಿಸದೆ ತುರುವೇಕೆರೆ ತಾಲೂಕ್ ಪೊಲೀಸ್ ಇಲಾಖೆ ಸಿಮೆಂಟ್ ಕಾರ್ಖಾನೆಯ ಮಾಲೀಕತ್ವಕ್ಕೆ ಶರಣಾಗಿ ಅವರನ್ನು ಬಂಧಿಸದೆ ಕರ್ತವ್ಯ ಲೋಪ ಎಸಗಿದ್ದಾರೆ.
ಜೊತೆಗೆ ಅವರಿಗೆ ಜಾಮೀನು ಸಿಗುವಂತೆ ಪರೋಕ್ಷವಾಗಿ ಪೋಲಿಸ್ ಇಲಾಖೆ ಕೂಡ ಸಹಕರಿಸಿದ ಎಂದು ದಲಿತ ಮುಖಂಡ ಹೊನ್ನೇನಳ್ಳಿ ಕೃಷ್ಣಮೂರ್ತಿ ನೇರ ಆರೋಪ ಮಾಡಿದ್ದಾರೆ. ಈಗಲೂ ಸಹ ದಂಡಿನಶಿವರ ಪೊಲೀಸರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಲಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ದಲಿತ ಮುಖಂಡರುಗಳಾದ ಕೃಷ್ಣಮೂರ್ತಿ, ನರಸಿಂಹಮೂರ್ತಿ, ಬಿಗಿನೇನಹಳ್ಳಿ ಪುಟ್ಟರಾಜು, ಡೊಂಕಿಹಳ್ಳಿ ರಾಮಕೃಷ್ಣ, ಆಕಾಶ್, ಮಂಜು, ರಾಯಸಂದ್ರ ವಸಂತ್, ಉಪಸ್ಥಿತರಿದ್ದರು.
ವರದಿ: ಮಂಜುನಾಥ್ ತುರುವೇಕೆರೆ