IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

Janataa24 NEWS DESK 

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

ತುರುವೇಕೆರೆ: ತಾಲೂಕಿನಲ್ಲಿರುವ ಆದಿ ಜಾಂಬವ ಕ್ಷೇಮಾಭಿವೃದ್ಧಿ ಸೇವಾ ಸಮಿತಿ ವತಿಯಿಂದ ಹುಲಿಕಲ್ ಗ್ರಾಮದ ದಲಿತ ಕುಟುಂಬದ ಮಂಜಮ್ಮ ಚಂದ್ರಣ್ಣ ಎಂಬ ದಂಪತಿಯ ಮಗಳಾದ ವರ್ಷಿತ ಎಂಬ ವಿದ್ಯಾರ್ಥಿನಿ ಕಳೆದ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಈ ವಿದ್ಯಾರ್ಥಿನಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ,ನಂತರ ಮುಂದಿನ ವಿದ್ಯಾಭ್ಯಾಸವಾದ ಪಿಯುಸಿಯಲ್ಲಿ ತಾಲೂಕಿಗೆ ಸೈನ್ಸ್ ವಿಭಾಗದಲ್ಲಿ 80% ಪಲಿತಾಂಶ ಪಡೆದು ಉನ್ನತಮಟ್ಟದ ವಿದ್ಯಾಭ್ಯಾಸವಾದ ಐಎಎಸ್ ಕನಸನ್ನ ಇಟ್ಟುಕೊಂಡಿದ್ದ ವಿದ್ಯಾರ್ಥಿ ನಿಗೆ ಕಡು ಬಡತನ ಎಂಬ ಘೋರ ಕಷ್ಟದಿಂದ ಉನ್ನತ ಮಟ್ಟದ ವಿದ್ಯಾಭ್ಯಾಸಕ್ಕಾಗಿ ತುಂಬಾ ಪರಿತಪಿಸುವ ಹಾಗೆ ಹಾಗಿತ್ತು.

 

ಆದರೆ ಅದೇಗೋ ಕಡು ಬಡತನದಲ್ಲಿ ಇಂತಹ ಉನ್ನತ ಮಟ್ಟದ ವಿದ್ಯಾಭ್ಯಾಸದ ಕನಸನ್ನು ಹೊತ್ತ, ಎಲೆಮರೆಕಾಯಿಯ ರೀತಿ ತನ್ನ ಉನ್ನತ ಮಟ್ಟದ ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಕನಸನ್ನು ಇಟ್ಟುಕೊಂಡಿದ್ದ ಈ ವಿದ್ಯಾರ್ಥಿನಿಗೆ, ಕೊನೆಗೂ ಒಬ್ಬ ಗಾಡ್ ಫಾದರ್ ಸಿಕ್ಕಿದಂತಾಗಿದೆ, ಅವರೇ ತುರುವೇಕೆರೆ ಪಟ್ಟಣದಲ್ಲಿರುವ ಆದಿ ಜಾಂಬವ ಕ್ಷೇಮಾಭಿವೃದ್ಧಿ ಸೇವಾ ಸಮಿತಿಯ ಸಂಸ್ಥಾಪಕರಾದ ಮೂರ್ತಿ ಸಿ ಎಸ್ ಅವರು.

 

ಶಿಕ್ಷಣಕ್ಕೆ ಹೆಚ್ಚು ಹೊತ್ತು ಕೊಡುವ ಮೂರ್ತಿ ಸಿ ಎಸ್ ಅವರು, ತಮ್ಮ ಸಮಿತಿಯ ಎಲ್ಲಾ ಪದಾಧಿಕಾರಿಗಳೊಂದಿಗೆ ಚರ್ಚಿಸಿ, ಹುಲಿಕಲ್ ಗ್ರಾಮದ ವಾಸಿ ವಿದ್ಯಾರ್ಥಿನಿ ವರ್ಷಿತ ಅವರ ಐಎಎಸ್ ವಿದ್ಯಾಭ್ಯಾಸಕ್ಕೆ ಯಾವುದೆಲ್ಲ ಅನುಕೂಲಗಳು ಆಗಬೇಕು ಎಲ್ಲಾ ಅನುಕೂಲಗಳನ್ನು ಮಾಡಲು ಸಿದ್ಧವಾಗಿ, ಬಿಮೋತ್ಸವ ಸಮಿತಿಯ ಎಲ್ಲಾ ಪದಾಧಿಕಾರಿಗಳ ತಂಡದೊಂದಿಗೆ ಭಾನುವಾರದಂದು ಗ್ರಾಮಕ್ಕೆ ಭೇಟಿಕೊಟ್ಟು, ವಿದ್ಯಾರ್ಥಿನಿಗೆ ಬೇಕಾದ ಪಠ್ಯಪುಸ್ತಕಗಳ ಸಾಮಗ್ರಿಗಳು, ಜೊತೆಗೆ ಆರ್ಥಿಕ ಸಹಾಯ ಮಾಡಿ,

ಆ ವಿದ್ಯಾರ್ಥಿನಿ ಐಎಎಸ್ ಓದುವ ಸಮಯದವರೆಗೆ ಎಲ್ಲಾ ಅನುಕೂಲಗಳನ್ನು ಒದಗಿಸುತ್ತೇವೆ ಎಂದು ಭರವಸೆ ನೀಡಿ ಪಠ್ಯಪುಸ್ತಕದ ಸಾಮಗ್ರಿಗಳನ್ನು ಸಮಿತಿಯ ಪದಾಧಿಕಾರಿಗಳೊಂದಿಗೆ ವಿದ್ಯಾರ್ಥಿ ನಿಗೆ ವಿತರಿಸಿದ್ದಾರೆ.

 

ಇದೆ ವೇಳೆ ಮಾತನಾಡಿದ ಮೂರ್ತಿ ಸಿ,ಎಸ್ ಅವರು, ಕೇವಲ ದಲಿತ ಕುಟುಂಬದ ವಿದ್ಯಾರ್ಥಿಗಳಿಗೆ ಮಾತ್ರ ಉನ್ನತ ಮಟ್ಟದ ವಿದ್ಯಾಭ್ಯಾಸಕ್ಕಾಗಿ ಒತ್ತು ಕೊಡುವುದಿಲ್ಲ ಪ್ರತಿಯೊಂದು ಸಮುದಾಯದ ಯಾವುದೇ ವಿದ್ಯಾರ್ಥಿಗಳಾಗಲಿ ಉನ್ನತ ಮಟ್ಟದ ವಿದ್ಯಾಭ್ಯಾಸಕ್ಕೆ ಯಾವುದೇ ಅಡಚಣೆಯಾದರೂ ಅಂತಹ ವಿದ್ಯಾರ್ಥಿಗಳನ್ನು ತಾಲೂಕಿನಲ್ಲಿ ಗುರುತಿಸಿ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಅವರ ಐಎಎಸ್, ಕೆಎಎಸ್, ಐಪಿಎಸ್, ಇಂತಹ ಉನ್ನತ ಮಟ್ಟದ ವಿದ್ಯಾಭ್ಯಾಸಕ್ಕಾಗಿ ಸಹಾಯ ಮಾಡಲು ನಾನು ಸದಾ ಸಿದ್ಧನಿದ್ದೇನೆ ಎಂದರು.

 

ಇದೇ ಸಂದರ್ಭದಲ್ಲಿ ತಾಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕ, ಪದಾಧಿಕಾರಿಗಳು, ಹಾಗೂ ಭೀಮೋತ್ಸವ ಸಮಿತಿಯ ಎಲ್ಲಾ ಹಿರಿಯ ಕಿರಿಯ ಮುಖಂಡರು ಪದಾಧಿಕಾರಿಗಳು, ಹಾಗೂ ವಿದ್ಯಾರ್ಥಿ ನಿಗೆ ಇಲ್ಲಿಯವರೆಗೂ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ಕೊಟ್ಟ ಶಿಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.instagram.com/janataa24?igsh=aXM0Ym9zb2Y2YTRn

https://www.janataa24.com/pavagada-nss-students-can-learn-rural-values/

DATAMER AI ಎಂಬ ಆನ್ಲೈನ್ ಆಪ್ ನಿಂದ ಕೋಟಿ ಕೋಟಿ ಹಣ ವಂಚನೆ.

Leave a Reply

Your email address will not be published. Required fields are marked *