Janataa24 NEWS DESK
Gubbi: ಹೇಮಾವತಿ ಲಿಂಕ್ ಕೆನಾಲ್ ಪುನರಾರಂಭಿಸಿದರೆ ಉಗ್ರ ಹೋರಾಟ– ನೀರಾವರಿ ಹೋರಾಟ ಸಮಿತಿವತಿಯಿಂದ ಸರ್ಕಾರಕ್ಕೆ ಎಚ್ಚರಿಕೆ.
ಗುಬ್ಬಿ: ತುಮಕೂರು ಜಿಲ್ಲೆಗೆ ಮರಣ ಶಾಸನವಾಗಿರುವ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಡಿ,ಸಿ,ಎಂ ಕಾಮಗಾರಿ ಮುಂದುವರೆಸುವ ಹೇಳಿಕೆ ನೀಡಿದ ಬೆನ್ನಲ್ಲೇ ಆಕ್ರೋಶ ವ್ಯಕ್ತಪಡಿಸಿದ ಕೆನಾಲ್ ವಿರೋಧಿ ಹೋರಾಟ ಸಮಿತಿಯ ಎಲ್ಲಾ ಮುಖಂಡರು ಸಭೆ ನಡೆಸಿ ಕಾಮಗಾರಿ ಪುನರಾರಂಭಿಸಿದರೆ ಸರ್ಕಾರದ ವಿರುದ್ಧ ಜಿಲ್ಲೆಯ ರೈತರು ಉಗ್ರ ಹೋರಾಟ ಆರಂಭಿಸುತ್ತೇವೆಂದು ಒಕ್ಕೂರಿನಿಂದ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ಮಾತನಾಡಿದವರು
ಕೇಂದ್ರ ಸಚಿವ ಸೋಮಣ್ಣ ಅವರ ಮೌನ ಬಗ್ಗೆ ತೀವ್ರ ಆಕ್ಷೇಪ ಸಭೆಯಲ್ಲಿ ಕಂಡು ಬಂತು. ಅತೀ ಹೆಚ್ಚು ಮತ ನೀಡಿದ ಜಿಲ್ಲೆಯ ಜನತೆ ಬಗ್ಗೆ ಕಿಂಚಿತ್ತೂ ಕಾಳಜಿ ತೋರದೆ ಕೆನಾಲ್ ಕಾಮಗಾರಿ ಮುಂದುವರೆಸಲು ತೆರೆಮರೆಯ ಒಪ್ಪಿಗೆ ನೀಡಿದ್ದಾರೆ ಎಂದು ಕೆಲ ಹೋರಾಟಗಾರರು ನೇರ ಆರೋಪ ಮಾಡಿದರು. ಶಿವಕುಮಾರ್ ಹೇಳಿಕೆಗೆ ಮೊದಲು ಸೋಮಣ್ಣ ಅವರು ಹಾಗೂ ಬಿಜೆಪಿ ಜೆಡಿಎಸ್ ಶಾಸಕರು ಪ್ರತ್ಯುತ್ತರ ನೀಡಬೇಕಿತ್ತು ಎಂದು ನೀರಾವರಿ ಹೋರಾಟ ಸಮಿತಿಯ ರೈತರು ತೀವ್ರ ಕಿಡಿಕಾರಿದರು.
ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ಕೇಂದ್ರ ಸಚಿವರಿಗೆ ಲೋಕಸಭಾ ಸದಸ್ಯರಾಗಿ ಹೋರಾಟಕ್ಕೆ ಬರಲು ಆಹ್ವಾನ ನೀಡೋಣ. ಯಾರು ಬರಲಿ ಬಿಡಲಿ ನಾನಂತೂ ದಿಟ್ಟ ಹೋರಾಟಕ್ಕೆ ರೈತರ ಜೊತೆ ಸದಾ ಇರುತ್ತೇನೆ ಶಿವಕುಮಾರ್ ಏನೂ ಮಾಡಲು ಸಾಧ್ಯವಿಲ್ಲ. ಕೆನಾಲ್ ಕಾಮಗಾರಿ ಮಾಡಲು ಎಂದಿಗೂ ಬಿಡಲ್ಲ. ಅಬ್ಬಬ್ಬಾ ಅಂದರೆ ಲಾಠಿಚಾರ್ಜ್ ಮಾಡಬಹುದು ಅಷ್ಟೇ. ಇದಕ್ಕೆ ಜಿಲ್ಲೆಯ ರೈತರು ಜಗ್ಗುವುದಿಲ್ಲ ಎಂದ ಅವರು ಜಿಲ್ಲೆಯ ಕಾಂಗ್ರೆಸ್ ಶಾಸಕರು ನರಸತ್ತ ಶಾಸಕರಾಗಿದ್ದಾರೆ. ಹಿರಿಯ ಜಯಚಂದ್ರ ಅವರು ಮಾತನಾಡಿಲ್ಲ. ಜೊತೆಗಿದ್ದ ಶಾಸಕರು ಕಾಂಗ್ರೆಸ್ ಟಿಕೆಟ್ ಸಿಗಲ್ಲ ಎಂತ ಭಯ ಇದ್ರೆ ನಮ್ಮ ಪಕ್ಷಕ್ಕೆ ಬನ್ನಿ ಟಿಕೆಟ್ ಕೊಡಿಸ್ತೀನಿ. ನಮ್ಮ ಎನ್ ಡಿಎ ಸರ್ಕಾರ ರಾಜ್ಯದಲ್ಲಿ ಬರುತ್ತದೆ. ಈ ನಡುವೆ ಕುಣಿಗಲ್ ತಾಲ್ಲೂಕಿಗೆ ನಿಗದಿಗಿಂತ ಹೆಚ್ಚು ನೀರು ಹರಿದಿದೆ. ಒಟ್ಟು 6.50 ಟಿಎಂಸಿ ನೀರು ಅಲ್ಲಿಗೆ ಹೋಗುತ್ತಿದೆ. ಮೂರು ಭಾಗದಲ್ಲಿ ಹರಿಯುವ ನೀರು ಲೆಕ್ಕ ಕೊಡದ ಇಂಜಿನಿಯರ್ ಜಯಪ್ರಕಾಶ್ ಉಪ ಮುಖ್ಯಮಂತ್ರಿಗಳಿಗೆ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಗುಡುಗಿದರು.
ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ ಕಾನೂನಾತ್ಮಕ ಹಾಗೂ ರೈತರ ದಂಗೆ ಎರಡೂ ಹೋರಾಟ ನಡೆಸಲಿದ್ದೇವೆ. ಜನರ ದಂಗೆ ಎದ್ದರೆ ಸರ್ಕಾರ ಏನೂ ಮಾಡಲು ಸಾಧ್ಯವಿಲ್ಲ. ನೀರಿಗಾಗಿ ರಾಜಕಾರಣ ಮಾಡದೆ ರೈತರು ಒಗ್ಗೂಡಿ ಬರಲಿದ್ದಾರೆ. ಲಕ್ಷಾಂತರ ಸಂಖ್ಯೆಯಲ್ಲಿ ದಂಗೆ ಏಳುತ್ತಾರೆ. ಕಾಮಗಾರಿ ಮಾಡಲು ಬಿಡುವುದಿಲ್ಲ. ಡಿಕೆಶಿ ಅವರ ಗೂಂಡಾ ವರ್ತನೆಗೆ ಯಾರು ಜಗ್ಗಲ್ಲ-ಬಗ್ಗಲ್ಲ ಆದರೆ ಡಿಸಿಎಂ ಪಕ್ಕ ತುಟಿ ಬಿಚ್ಚದೆ ಕುಳಿತ ನಮ್ಮ ಶಾಸಕರು ನಾಮರ್ಧ ಕೆಲಸ ಮಾಡಿದ್ದಾರೆ. ತಾಲ್ಲೂಕಿನ ರೈತರನ್ನು ಅಡವಿಟ್ಟು ಬಾಯಿಗೆ ಬೆಲ್ಲ ಹಾಕಿಕೊಂಡು ತೆಪ್ಪಗೆ ಕುಳಿತಿದ್ದಾರೆ ಎಂದು ವ್ಯಂಗ್ಯ ಮಾಡಿದರು.
ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ ರೈತರ ನೀರಾವರಿ ಹೋರಾಟಕ್ಕೆ ಶಾಸಕ ಸ್ಥಾನ ಬಿಟ್ಟು ಹೋರಾಟಕ್ಕೆ ದುಮುಕಬೇಕಿದೆ. ಆದರೆ ಮಾಧ್ಯಮ ಮುಂದೆ ವಿರೋಧ ಇದೆ ಎಂದು ಹೇಳುತ್ತಲೇ ಡಿಸಿಎಂ ಜೊತೆ ಸೈಲೆಂಟ್ ಆಗಿ ಸ್ಥಳಕ್ಕೆ ಬಂದು ಚೂರು ಮಾತನಾಡದೆ ಹೋದರೆ ರೈತರಿಗೆ ತಿಳಿಯುವುದಿಲ್ಲವೇ ಎಂದು ಪ್ರಶ್ನಿಸಿದ ಅವರು ರೈತರು ಒಗ್ಗೂಡಿ ಯಾವ ರಾಜಕಾರಣಿಯನ್ನು ಕಾಯದೆ ದೊಡ್ಡ ಹೋರಾಟಕ್ಕೆ ಸಜ್ಜಾಗಬೇಕು. ಯಾವುದೇ ಕಾರಣಕ್ಕೂ ಕೆನಾಲ್ ಮಾಡಲು ಬಿಡದಂತೆ ದಿಟ್ಟ ನಿಲುವು ವ್ಯಕ್ತಪಡಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ವೆಂಕಟೇಗೌಡ, ಕಾರ್ಯದರ್ಶಿ ಲೋಕೇಶ್, ಎಚ್.ಟಿ.ಭೈರಪ್ಪ, ಬ್ಯಾಟರಂಗೇಗೌಡ, ಬಲರಾಮಯ್ಯ, ಪಪಂ ಸದಸ್ಯರಾದ ಜಿ.ಎನ್.ಅಣ್ಣಪ್ಪಸ್ವಾಮಿ, ಜಿ.ಸಿ.ಕೃಷ್ಣಮೂರ್ತಿ, ಎಸ್.ನಂಜೇಗೌಡ, ಬೀರಮಾರನಹಳ್ಳಿ ನರಸೇಗೌಡ, ಜಗದೀಶ್, ವಿದ್ಯಾಸಾಗರ್,ತಿರುಮಲೇಶ್ ಸೇರಿದಂತೆ ರೈತಸಂಘ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಹೋರಾಟಗಾರರು ಭಾಗವಹಿಸಿದ್ದರು.
ಐಐಟಿ ಮೂಲಕ ಈ ಯೋಜನೆ ಬಗ್ಗೆ ಪರಿಶೀಲಿಸಲು ಶಾಸಕರ ಸಭೆಯಲ್ಲಿ ತಿಳಿಸಿದ ಉಪ ಮುಖ್ಯಮಂತ್ರಿಗಳು ಸ್ಥಳಕ್ಕೆ ಬಂದು ಕೆಲಸ ಈಗಾಗಲೇ 400 ಕೋಟಿ ಬಿಡುಗಡೆಯಾಗಿದೆ. ಕೆಲಸ ಮಾಡುತ್ತೇವೆ ಎಂದು ಉದ್ಧಟತನ ಮಾತುಗಳಾಡಿರುವುದು ತರವಲ್ಲ.ಜಿಲ್ಲೆಯ ಇಬ್ಬರು ಶಾಸಕರು ಮೌನ ಸಮ್ಮತಿ ನೀಡಿದ ನಡೆಗೆ ರೈತರಲ್ಲಿ ಆಕ್ರೋಶ ಮೂಡಿದೆ. ಮತ್ತೂಮ್ಮೆ ಜಿಲ್ಲೆಯ ರೈತರು ದೊಡ್ಡ ಹೋರಾಟಕ್ಕೆ ಸಜ್ಜಾಗಿದ್ದಾರೆ.
Gubbi: ರೈತ ಸಂಘದ ಜಿಲ್ಲಾಧ್ಯಕ್ಷ ಎ,ಗೋವಿಂದರಾಜು.
ಗುಬ್ಬಿ ಶಾಸಕರು ಡಿಸಿಎಂ ಪಕ್ಕದಲ್ಲಿ ದಂತದ ಗೊಂಬೆಯಂತೆ ಕುಳಿತು ಮೌನ ಸಮ್ಮತಿ ನೀಡಿದ್ದು ರೈತರಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಸತತ ಐದು ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಿದ ರೈತರನ್ನು ಕಡೆಗಣಿಸದೆ ಮುಂದಿನ ಹೋರಾಟಕ್ಕೆ ಬಂದರೆ ಗೌರವ.
ವರದಿ :ಶ್ರೀಕಾಂತ್ ಗುಬ್ಬಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.