JANATAA24 NEWS DESK
Gubbi: ಪದವೀಧರರು ತಮ್ಮ ಹೆಸರನ್ನು ಸೇರಿಸಲು ನ. 06 ಕೊನೇ ದಿನ.

ಗುಬ್ಬಿ : ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಮತದಾರರ ಪಟ್ಟಿಯಲ್ಲಿ ಪದವೀಧರರು ತಮ್ಮ ಹೆಸರು ನೊಂದಾಯಿಸಲು ನವಂಬರ್ 06 ಕೊನೆಯ ದಿನವಾಗಿದ್ದು ಹೆಸರು ನೋಂದಾಯಿಸುವಂತೆ ತಹಶೀಲ್ದಾರ್ ಆರತಿ ಬಿ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಮುಂಬರುವ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಮತದಾರರ ಪಟ್ಟಿಯಲ್ಲಿ ಸೇರಿಸಲು ನ.06 ಕೊನೆಯ ದಿನಾಂಕವಾಗಿದ್ದು, ನ.1 2022 ಕ್ಕೇ ಮುಂಚಿತವಾಗಿ ಪದವಿ ಪೂರೈಸಿರುವ ತಾಲೂಕಿನ ಸಾಮಾನ್ಯ ನಿವಾಸಿಯಾಗಿರುವ ಎಲ್ಲಾ ಅರ್ಹ ಪದವೀಧರರು ತಕ್ಷಣವೇ ತಾಲೂಕು ಕಚೇರಿಯ ಚುನಾವಣಾ ಶಾಖೆಯಲ್ಲಿ ನಮೂನೆ ಅರ್ಜಿ 18 ನ್ನು ಪಡೆದು ಅಗತ್ಯ ದಾಖಲೆಗಳೊಂದಿಗೆ ತಮ್ಮ ಹೆಸರು ನೋಂದಾಯಿಸಲು ಮನವಿ ಮಾಡಿದ್ದಾರೆ.
ಗುಬ್ಬಿ ತಾಲೂಕು/ಜೆಲ್ಲೆಯ ವಿಳಾಸ ಹೊಂದಿರುವ ಪದವೀಧರ ನೌಕರರು ನಮೂನೆ ಅರ್ಜಿ 18 ರ ಜೊತೆಗೆ ಪದವಿಯ ಪ್ರಮಾಣ ಪತ್ರ ಇಲ್ಲವೇ ಪದವಿಯ ಮೂರು ವರ್ಷದ ಅಂಕ ಪಟ್ಟಿ ಹಾಗೂ ಮತದಾರರ ಗುರುತಿನ ಚೀಟಿಯೊಂದಿಗೆ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ :ಶ್ರೀಕಾಂತ್ ಗುಬ್ಬಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.