Document

Gubbi: ಅದ್ದೂರಿಯಾಗಿ ಜರುಗಿದ ಶ್ರೀ ಗೋಸಲ ಚನ್ನಬಸವೇಶ್ವರಸ್ವಾಮಿಯ ಬ್ರಹ್ಮರಥೋತ್ಸವ

JANATAA24 NEWS DESK 

 

 

Gubbi: ಅದ್ದೂರಿಯಾಗಿ ಜರುಗಿದ ಶ್ರೀ ಗೋಸಲ ಚನ್ನಬಸವೇಶ್ವರಸ್ವಾಮಿಯ ಬ್ರಹ್ಮರಥೋತ್ಸವ.
Gubbi

ಗುಬ್ಬಿ : ತಾಲೋಕಿನ ಇತಿಹಾಸ ಪ್ರಸಿದ್ದ ಗೋಸಲ ಶ್ರೀ ಚನ್ನಬಸವೇಶ್ವರ ಸ್ವಾಮಿಯ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ಜರುಗಿತು.

 

ರಾಜ್ಯದ ನಾನಾ ಮೂಲೆ ಗಳಿಂದ ಭಕ್ತಾದಿಗಳು ಜಾತ್ರೆಗೆ ಆಗಮಿಸಿ ತಮ್ಮ ಇಷ್ಟಾರ್ಥಗಳಿಗಾಗಿ ಪ್ರಾರ್ಥಿಸಿ ರಥಕ್ಕೆ ಬಾಳೆಹಣ್ಣು ಧವನ ಸೂರುಬಿಟ್ಟು ಪೂಜೆ ಸಲ್ಲಿಸಿದರು. ಬಿಸಿಲನ್ನು ಲೆಕ್ಕಿಸದೆ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಶ್ರೀ ಸ್ವಾಮಿಯ ರಥವನ್ನು ಎಳೆಯುವ ಮೂಲಕ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾದರು.

 

ರಥೋತ್ಸವದ ವೇಳೆ ಭಕ್ತರಿಗೆ ಮಜ್ಜಿಗೆ,ಪಾನಕ ಕೋಸಂಬರಿ, ಎಳನೀರು ಹಾಗೂ ಅಲ್ಲಲ್ಲಿ ಅರವಂಟಿಕೆ ಮೂಲಕ ಪ್ರಸಾದ ವಿತರಿಸಿದರು. ಜಾತ್ರಾ ಮಹೋತ್ಸವದ ಪ್ರಯುಕ್ತ ಚನ್ನಬಸವೇಶ್ವರ ಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.

 

ಭಕ್ತಾದಿಗಳಿಂದ ತೇರಿನ ಹೂವಿನ ಅಲಂಕಾರ ಅಲಂಕಾರಕ್ಕೆ ಒಂದು ಟನ್ ಹೂ ಹಾಗೂ ಸಿಹಿ ಬೂಂದಿ, ಹತ್ತು ಸಾವಿರ ಕೊಬ್ಬರಿ ಮಿಠಾಯಿ ಸೇವೆ ಮಾಡಿದ್ದರು.

ರಥೋತ್ಸವದ ನಂತರ ಪಟ್ಟಣ ಪಂಚಾಯಿತಿ ಕಾರ್ಮಿಕರಿಂದ ತ್ವರಿತವಾಗಿ ಸ್ವಚ್ಛತೆಯನ್ನು ಮಾಡಲಾಯಿತು. ಭಕ್ತರಿಗೆ ಅಲ್ಲಲ್ಲಿ ಪ್ಯಾಕೆಟ್ ನೀರು, ಬಾಟಲ್ ನೀರಿನ ವ್ಯವಸ್ಥೆಯನ್ನು ಮಾಡಲಾಯಿತು ಪಟ್ಟಣದ ಪ್ರಮುಖ ಬೀದಿಯಲ್ಲಿ ರಥೋತ್ಸವ ಸಂದರ್ಭದಲ್ಲಿ ಹೆಸರು ಬೆಳೆ ಲಘು ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ರೀತಿ ಅಹಿತಕರ ಘಟನೆಗಳು ನಡೆಯದೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಆರೋಗ್ಯ ಇಲಾಖೆಯಿಂದ ರೀತಿಯ ಜಾಗೃತಿಯ ಬ್ಯಾನರ್ ಹಾಕಲಾಗಿತ್ತು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳದಲ್ಲಿ ಇದ್ದರು.

 

ಶಿವಜ್ಯೋತಿ ಯುವಕರ ಬಳಗ, ತಿಗಳರ ಸಮಾಜ, ಗೂಡ್ಸ್ ಆಟೋ ಮತ್ತು ಟೆಂಪೋ ಮಾಲೀಕರ ಸಂಘ, ಶ್ರೀಬೃಂದಾವನ ಫ್ರೆಂಡ್ಸ್ ಗ್ರೂಪ್, ಚಿಕ್ಕೋನಹಳ್ಖಿ ಗ್ರಾಮಸ್ಥರು, ಶ್ರೀ ಗೋಸಲ ಚನ್ನಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರ ಸಂಘ, ನಂದಿಕೋಲು ವಂಶಸ್ಥರಿಂದ ಹಾಗೂ ಇನ್ನೂ ಮುಂತಾದ ಸಂಘಟನೆಗಳಿಂದ ಪಾನಕ, ಮಜ್ಜಿಗೆ, ಹೆಸರು ಬೆಳೆ ವ್ಯವಸ್ಥೆ ಮಾಡಲಾಗಿತ್ತು.

 

ರಥೋತ್ಸವದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ, ಅಪಾರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ನಾಹಿದಾ ಜಮ್ ಜಮ್, ತಹಶೀಲ್ದಾರ್ ಆರತಿ.ಬಿ., ಪೇಷ್ಕಾರ್ ಜಿ.ವಿನೋದ್, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ, ತೆವಡಿಹಳ್ಳಿ ಮಠದ ಗೋಸಲ ಚನ್ನಬಸವೇಶ್ವರ ಸ್ವಾಮೀಜಿ, ತೋರೆಮಠದ ಅಟವಿ ಚನ್ನಬಸವ ಸ್ವಾಮೀಜಿ,

ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಮಣ್ಣ, ದಾಸೋಹ ಸಮಿತಿ, ಜೀರ್ಣೋದ್ಧಾರ ಸಮಿತಿ, ವ್ಯವಸ್ಥಾಪನ ಸಮಿತಿ ಪದಾಧಿಕಾರಿಗಳು ಹಾಗೂ 18 ಕೋಮಿನ ಮುಖಂಡರು, ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ, ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ಸಾವಿರಾರು ಭಕ್ತರು

ಭಕ್ತರು ಭಾಗವಹಿಸಿದ್ದರು.

 

ವರದಿ :ಶ್ರೀಕಾಂತ್ ಗುಬ್ಬಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *