Gubbi: ಸುಪ್ರೀಂ ಕೋರ್ಟ್ ನೀಡಿರುವ ಒಳ ಮೀಸಲಾತಿ ತೀರ್ಪನ್ನು ಅನುಷ್ಠಾನಗೊಳಿಸುವಂತೆ ಪ್ರತಿಭಟನೆ.

Janataa24 NEWS DESK 

 

 

Gubbi: ಸುಪ್ರೀಂ ಕೋರ್ಟ್ ನೀಡಿರುವ ಒಳ ಮೀಸಲಾತಿ ತೀರ್ಪನ್ನು ಅನುಷ್ಠಾನಗೊಳಿಸುವಂತೆ ಪ್ರತಿಭಟನೆ.

Gubbi: ಸುಪ್ರೀಂ ಕೋರ್ಟ್ ನೀಡಿರುವ ಒಳ ಮೀಸಲಾತಿ ತೀರ್ಪನ್ನು ಅನುಷ್ಠಾನಗೊಳಿಸುವಂತೆ ಪ್ರತಿಭಟನೆ.

 

ಗುಬ್ಬಿ: ಮಾನ್ಯ ಸುಪ್ರೀಂ ಕೋರ್ಟ್ ನೀಡಿರುವ ಮಹತ್ವದ ಆದೇಶವನ್ನು ರಾಜ್ಯ ಸರ್ಕಾರವು ಅನುಷ್ಠಾನಗೊಳಿಸಬೇಕೆಂದು ದ ಸಂ ಸ ಮುಖಂಡರು ಪ್ರತಿಭಟನೆ ನಡೆಸಿದರು.

ಪಟ್ಟಣದ ಶ್ರೀ ಚನ್ನಬಸವೇಶ್ವರ ಸ್ವಾಮಿ ದೇವಾಲಯದಿಂದ ಮೆರವಣಿಗೆಯ ಮೂಲಕ ದ ಸಂ ಸ ಮುಖಂಡರು ತಾಲೂಕು ಕಚೇರಿಗೆ ಆಗಮಿಸಿದರು.

 

ದ ಸಂ ಸ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ಮಾತನಾಡಿ ನಿತ್ಯ ನಿರಂತರ 30 ವರ್ಷಗಳ ಸುದೀರ್ಘ ಹೋರಾಟಕ್ಕೆ ತೆರೆ ಬಿದ್ದಿದ್ದು ಜನಸಂಖ್ಯಾ ವಾರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯಾ ಜನಾಂಗಕ್ಕೆ ಅನು ಗುಣವಾಗುವಂತೆ ನ್ಯಾಯಯುತವಾಗಿ ಹಂಚಿಕೆಯಾಗಬೇಕಾದೆ ಒಳಮಿಸಲಾತಿಯು ಆಯಾ ರಾಜ್ಯ ಸರ್ಕಾರಗಳಿಗೆ ಸೀಮಿತವಾದದ್ದು ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶವನ್ನು ನೀಡಿರುವುದು ಬಹಳ ಸಂತೋಷಕರ ವಿಷಯವಾಗಿದೆ. ಅದರಂತೆ ಕರ್ನಾಟಕ ರಾಜ್ಯ ಸರ್ಕಾರವು ಈ ಕೂಡಲೇ ತ್ವರಿತವಾಗಿ ಎ ಜೆ, ಸದಾಶಿವ ಆಯೋಗದ ವರದಿಯಂತೆ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕು. ಇಲ್ಲವಾದರೆ ಇಂದಿನ ಸರ್ಕಾರದಂತೆ ಈ ಸರ್ಕಾರವನ್ನು ಮನೆಗೆ ಕಳುಹಿಸಲಾಗುತ್ತದೆ ಎಂದು ತಿಳಿಸಿದರು.

 

ದ ಸಂಸ ತಾಲೂಕು ಅಧ್ಯಕ್ಷ ಕಡಬ ಶಂಕರ್ ಮಾತನಾಡಿ ಮಾನ್ಯ ರಾಜ್ಯ ಸರ್ಕಾರಕ್ಕೆ ಇದೊಂದು ಸುವರ್ಣ ಅವಕಾಶವಾಗಿದ್ದು ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ತಿಳಿಸಿದರು.

 

ಇದೇ ಸಂದರ್ಭದಲ್ಲಿ ತಹಸಿಲ್ದಾರ್ ಬಿ ಆರತಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

 

ಈ ಸಂದರ್ಭದಲ್ಲಿ ದಸಂಸ ಮುಖಂಡರಾದ ಜಗನ್ನಾಥ್, ಕುಂದರನಹಳ್ಳಿ ನಟರಾಜು, ರಮೇಶ್,ಮಹೇಶ್,ಸೋಮಶೇಖರ್, ಯೋಗೇಶ್, ರಂಗಸ್ವಾಮಿ, ಅದಲಗೆರೆ ಈಶ್ವರಯ್ಯ,ಕಲ್ಲೂರ್ ರವಿಕುಮಾರ್,ಮಾದ್ಲಾಪುರ ಲೋಕೇಶ್, ಕೋಟೆ ಕಲ್ಲೇಶ್, ರವೀಶ್ ಸೇರಿದಂತೆ ತಾಲೂಕಿನ ದಲಿತ ಮುಖಂಡರು ಹಾಜರಿದ್ದರು.

ವರದಿ: ಶ್ರೀಕಾಂತ್ ಗುಬ್ಬಿ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Pavagada: ಬೆಸ್ಕಾಂ ಇಲಾಖೆಯಲ್ಲಿಯೇ TC ಕಳ್ಳರಿದ್ದಾರೆ..!

 

Leave a Reply

Your email address will not be published. Required fields are marked *