JANATAA24 NEWS DESK
Gubbi: ಟೋಲ್ ರದ್ದತಿಗಾಗಿ ರೈತರ ಪಟ್ಟು-ಅವೈಜ್ಞಾನಿಕ ಟೋಲ್ ಬಂದ್ ಮಾಡುವಂತೆ ಒತ್ತಾಯ.
ಗುಬ್ಬಿ : ಕಳೆದ ಮೂರು ತಿಂಗಳಿಂದ ನಿರಂತರವಾಗಿ ಪ್ರತಿಭಟನೆ ಮಾಡಿಕೊಂಡು ಬಂದಿದ್ದೇವೆ ಆದರೂ ಕೂಡ ಕೆಟ್ಟ ಚಾಳಿಗೆ ಮುಂದಾಗಿರುವ ಸರ್ಕಾರ ರೈತರನ್ನು ಶೋಷಣೆ ಮಾಡಲು ಮುಂದಾಗಿದೆ ಬಂಡವಾಳ ಶಾಹಿಗಳ ಜೊತೆ ಕೈ ಸೇರಿಸಿ ರೈತರ ಸುಲಿಗೆಗೆ ಮುಂದಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ. ಗೋವಿಂದರಾಜು ತಿಳಿಸಿದರು.
ತಾಲೂಕಿನ ಜಿ. ಹೊಸಹಳ್ಳಿ ಬಳಿಯ ಅವೈಜ್ಞಾನಿಕ ಟೋಲ್ ಗೇಟ್ ಬಂದ್ ಮಾಡುವಂತೆ ಒತ್ತಾಯಿಸಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಬಿಟ್ಟಿ ಭಾಗ್ಯಗಳನ್ನು ಕೊಟ್ಟು ಅಲ್ಲಿ ಆಗುವ ಅನಾಹುತಗಳಿಂದ ತಪ್ಪಿಸಿಕೊಳ್ಳಲು ರೈತರ ಮೇಲೆ ದಬ್ಬಾಳಿಕೆ ಮಾಡಿ ರಸ್ತೆಗಳಲ್ಲಿ ಸುಂಕ ವಸೂಲಿ ಮಾಡುವ ಮೂಲಕ ಸರ್ಕಾರ ತಪ್ಪು ಮಾಡುತ್ತಿದ್ದು ಯಾವುದೇ ಕಾರಣಕ್ಕೂ ಇಲ್ಲಿನ ಟೋಲ್ ಪ್ಲಾಜಾ ನಡೆಸಲು ಬಿಡುವುದಿಲ್ಲ ಎಂದು ತಿಳಿಸಿದರು.
ಜೆಡಿಎಸ್ ಮುಖಂಡ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ ಕಳೆದ ತಿಂಗಳುಗಳಿಂದಲೂ ಹೋರಾಟ ನಡೆಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಗುಬ್ಬಿ ತಾಲೂಕಿನ ಶಾಸಕರೇ ರೈತರ ಮುಂದೆ ಸಿಪಿಐಗೆ ಕರೆ ಮಾಡಿ ಯಾಕಪ್ಪ ಇನ್ನು ಟೋಲ್ ಕಿತ್ತು ಹಾಕಿಲ್ವಾ ಎಂದು ಫೋನ್ ಮಾಡುತ್ತಾರೆ ಕೇವಲ ರೈತರಿಗೆ ಟೋಪಿ ಹಾಕಿ ಸಬೂಬು ಹೇಳಿ ಕಳುಹಿಸುವ ಕೆಲಸ ಶಾಸಕರು ಮಾಡುತ್ತಿದ್ದು ಜನರಿಗೆ ಟೋಪಿ ಹಾಕುವ ಕೆಲಸ ಯಾಕೆ ಮಾಡುತ್ತಾರೆ, ಇವೆಲ್ಲವನ್ನು ಬಿಟ್ಟು ನೀವೇ ಬಂದು ನಿಂತು ಕಿತ್ತುಹಾಕಿ ಎಂದು ಹೇಳಿ ನಾವೇ ಕಿತ್ತು ಹಾಕುತ್ತೇವೆ ತಾಲೂಕಿನ ರೈತರ ಹಿತ ಕಾಯಬೇಕಾದ ಧರ್ಮ ನಿಮ್ಮದು ಅದನ್ನು ಮೊದಲು ಮಾಡಿ ಎಂದು ತಿಳಿಸಿದರು.
ಜೆಡಿಎಸ್ ಮುಖಂಡ ಬಿ ಎಸ್ ನಾಗರಾಜು ಮಾತನಾಡಿ ಸುಂಕ ವಸೂಲಾತಿ ಕೇಂದ್ರ ನಿರ್ಮಿಸಿ ರೈತರ ಜೇಬಿಗೆ ಕತ್ತರಿಯಾಗುವ ಸಂದರ್ಭದಲ್ಲಿ ನಮ್ಮ ಶಾಸಕರು ಎಲ್ಲಿ ಹೋಗಿದ್ದಾರೆ ಸಣ್ಣಪುಟ್ಟ ಮಣ್ಣಿನ ರೋಡ್ ಗೆ ಗುದ್ದಲಿ ಪೂಜೆಗಳು ನಡೆದರು ನಿಮ್ಮ ಗಮನಕ್ಕೆ ಬಾರದೆ ನಡೆಯುವುದಿಲ್ಲ ಹೀಗಿರುವಾಗ ರಸ್ತೆಯಲ್ಲಿ ನಿರ್ಮಿಸಿರುವ ಈ ಟೋಲ್ ಗೇಟ್ ನಿಮ್ಮ ಗಮನದಲ್ಲಿ ಇಲ್ಲವಾ ಅಥವಾ ನಿದ್ದೆಯಲ್ಲಿ ಜಾರಿದ್ದೀರಾ ಹೇಮಾವತಿ ಹೋರಾಟಕ್ಕೂ ಬರಲಿಲ್ಲ ಆದರೆ ಇಂಥ ಚಿಕ್ಕ ಟೋಲ್ ಗೇಟ್ ಬಂದ್ ಮಾಡಿಸಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದರೆ ಈ ತಾಲೂಕಿನ ರೈತರಿಗೆ ನೀವು ದ್ರೋಹ ಮಾಡಿದಂತೆ ಯಾವುದೇ ಕಾರಣಕ್ಕೂ ಟೊಲ್ ಮಾಡಲು ನಾವು ಬಿಡುವುದಿಲ್ಲ ಇದೇನು ದೊಡ್ಡ ಬೆಟ್ಟವಲ್ಲ ಎಲ್ಲವನ್ನು ಕಿತ್ತು ಬಿಸಾಕುವ ಕೆಲಸ ಮಾಡಲಾಗುತ್ತದೆ ಇದಕ್ಕೆ ಅವಕಾಶ ನೀಡದಂತೆ ಅಧಿಕಾರಿಗಳಿಗೆ ತಿಳಿಸಬೇಕು ರೈತರಿಗೆ ಕೆಲಸವಿಲ್ಲದೆ ಸುಮ್ಮನೆ ಬಂದು ಇಲ್ಲಿ ಕುಳಿತಿಲ್ಲ ಅಧಿಕಾರಿಗಳು ನಿರ್ಲಕ್ಷ ಮಾಡಿದರೆ ನಾವೇ ರಸ್ತೆಗೆದು ಟೌಲ್ ಗೇಟ್ ಕಿತ್ತು ಬಿಸಾಕುತ್ತೇವೆ ಎಂದು ಗುಡುಗಿದರು.
ಬಿಜೆಪಿ ಮುಖಂಡ ಎಸ್ ಡಿ ದಿಲೀಪ್ ಕುಮಾರ್ ಮಾತನಾಡಿ ರಾಷ್ಟ್ರೀಯ ಹೆದ್ದಾರಿ ಹೊರತುಪಡಿಸಿ ಸರ್ಕಾರ ಚಿಕ್ಕ ಚಿಕ್ಕ ರಸ್ತೆಗಳಲ್ಲಿಯೂ ಸುಂಕ ವಸೂಲಿಗೆ ಮುಂದಾಗಿರುವುದು ಸರಿಯಲ್ಲ ರೈತರ ವಿರುದ್ಧ ಸರ್ಕಾರಗಳು ನಿಂತರೆ ಯಾವುದೇ ಕಾರಣಕ್ಕೂ ಉಳಿಯುವುದಿಲ್ಲ ಗುತ್ತಿಗೆದಾರರಿಂದ ಹಣ ತಿಂದು ಅನುಮತಿ ನೀಡುವುದು ಸರಿಯಲ್ಲ ಇಂತಹ ಹೋರಾಟಕ್ಕೆ ಜಾತ್ಯತೀತವಾಗಿ ನಮ್ಮೆಲ್ಲರ ಸಂಪೂರ್ಣ ಬೆಂಬಲ ಇರುತ್ತದೆ ಯಾವುದೇ ಕಾರಣಕ್ಕೂ ಟೋಲ್ ಗೇಟ್ ಮುಂದುವರಿಯಲು ಬಿಡುವುದಿಲ್ಲ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಪ್ರತಿಭಟನ ಸ್ಥಳಕ್ಕೆ ಆಗಮಿಸಿ ಮಾತನಾಡಿದ ಅವರು ಎಂಟು ಬಾರಿ ಟೆಂಡರ್ ಪ್ರಕ್ರಿಯೆ ನಡೆದು ಈಗ ಟೋಲ್ ಕೆಲಸ ಮಾಡಲು ಮುಂದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಆದರೆ ಏಕಾಏಕಿ ನಾನು ಯಾವುದೇ ಭರವಸೆ ನೀಡುವುದಿಲ್ಲ. ಇಲ್ಲಿ ಏನಲ್ಲ ಬೆಳವಣಿಗೆಗಳು ನಡೆದಿವೆ ಎಂಬುದರ ಬಗ್ಗೆ ತಿಳಿದು ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಮುಂದೆ ಏನು ಮಾಡಬಹುದು ಎಂಬ ಬಗ್ಗೆ ತೀರ್ಮಾನ ಮಾಡುತ್ತೇನೆ ಜೊತೆಗೆ ಮುಂದಿನ 15 ದಿನಗಳ ಕಾಲ ಯಾವುದೇ ಸುಂಕ ವಸೂಲಿಗೆ ಮುಂದಾಗದಂತೆ ಸೂಚಿಸುತ್ತೇನೆ ಅಲ್ಲಿಯವರೆಗೂ ರೈತರು ಸಮಾಧಾನದಿಂದ ವರ್ತಿಸಿ.ನಿಮ್ಮ ಜೊತೆ ನಾನು ಇರುತ್ತೇನೆ ಎಂದು ಭರವಸೆ ನೀಡಿದ ಬಳಿಕ ರೈತ ಸಂಘದ ಮುಖಂಡರು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಂದುಡಿದರು.
ಇದೇ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ತಾಲೂಕು ದಂಡಾಧಿಕಾರಿ ಆರತಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು ಹಾಗೂ ಪ್ರತಿಭಟನೆಯಲ್ಲಿ ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಜನಪ್ರತಿನಿಧಿಗಳು ಮುಖಂಡರು ಮತ್ತು ಸ್ಥಳೀಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವರದಿ :ಶ್ರೀಕಾಂತ್ ಗುಬ್ಬಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.