JANATAA24 NEWS DESK
Gubbi: ಮಕ್ಕಳಿಗೆ ಹಳ್ಳಿ ಹಬ್ಬಗಳ ಕುರಿತು ವಿಶೇಷ ಅರಿವು.

ಗುಬ್ಬಿ : ಇಂದಿನ ಮಕ್ಕಳಿಗೆ ಹಳ್ಳಿಯ ನೆನೆಪು ಅಲ್ಲಿನ ಹಬ್ಬ ಹರಿದಿನ, ನಮ್ಮ ಸಂಸ್ಕೃತಿ ಸಂಸ್ಕಾರ ಸಂಪ್ರದಾಯಗಳು ಎಲ್ಲವೂ ಮೊಬೈಲ್ ಇಂಟರ್ನೆಟ್ ಹಾಗೂ ಐ,ಟಿ-ಬಿ,ಟಿ ಜಗತ್ತಿಗೆ ಮಾರುಹೋಗುತ್ತಿರುವ ಮಕ್ಕಳಿಗೆ ಹಳ್ಳಿಯ ಸೊಗಡನ್ನು ತಿಳಿಸುವ ಕೆಲಸ ಮಾಡಲಾಯಿತು
ತಾಲೂಕಿನ ಸಿ ಎಸ್ ಪುರ ಹೋಬಳಿ ಹುಲ್ಲೆಕೆರೆ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಜಾಗೃತಿ ಮಾಹಿತಿ ಹಬ್ಬದ ಸೊಬಗನ್ನ ಕಟ್ಟಿ ಕೊಟ್ಟಿದ್ದಾರೆ ಈ ಅಂಗನವಾಡಿಯಲ್ಲಿ ಸುಗ್ಗಿ ಹಬ್ಬವನ್ನು ಮಾಡುವ ಮೂಲಕ ವಿಶೇಷ ಏನಿಸಿದ್ದಾರೆ.
ಸಂಕ್ರಾಂತಿ ಹಬ್ಬದ ಹಿನ್ನಲೆಯಲ್ಲಿ ಅಂಗನವಾಡಿ ಯಲ್ಲಿ ಹಳ್ಳಿಗಳಲ್ಲಿ ಬಳಸುತ್ತಿದ್ದಂತಹ ವಸ್ತುಗಳನ್ನು ಇಟ್ಟು ಆ ಮಕ್ಕಳಿಗೆ ಅದರ ಮಾಹಿತಿ ಸಂಕ್ರಾಂತಿ ಹಬ್ಬದ ವಿಶೇಷತೆಯ ಬಗ್ಗೆ ಇಲ್ಲಿನ ಶಿಕ್ಷಕಿ ಜಾನಕಮ್ಮ ಬಹಳ ವಿಶೇಷವಾಗಿ ತಿಳಿಸಿಕೊಟ್ಟಿದ್ದಾರೆ.
ಒಂಬತ್ತು ತರಹದ ನವಧಾನ್ಯಗಳು, ಮಡಿಕೆ, ಕುಡಿಕೆ, ನೇಗಿಲು, ಎತ್ತಿನ ಗಾಡಿ ರಾಗಿಯ ರಾಶಿ, ಅಡಿಕೆಯ ಹೊಂಬಾಳೆ, ರಾಗಿ ಬೀಸುವ ಕಲ್ಲು ಒನಕೆ, ಹಳ್ಳಿಯ ಮನೆ ರಾಗಿ ಪೈರು, ಬಿದಿರಿನ ಮರ ಹೀಗೆ ಹಲವು ವಸ್ತುಗಳನ್ನು ಇಟ್ಟು ಸಂಕ್ರಾಂತಿಯ ಹಬ್ಬದಲ್ಲಿ ರೈತರು ತಾವು ಬೆಳೆದಂತಹ ಬೆಳೆಗಳಿಗೆ ಯಾವ ರೀತಿ ಪೂಜೆಯನ್ನು ಸಲ್ಲಿಸುತ್ತಾರೆ ಎಂಬುದರ ಬಗ್ಗೆ ಸಾಕಷ್ಟು ಮಾಹಿತಿಯನ್ನು ಪುಟ್ಟ ಪುಟ್ಟ ಮಕ್ಕಳಿಗೆ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಸಿಡಿಪಿಓ ಕೃಷ್ಣಮೂರ್ತಿ ಇಂದಿನ ಮಕ್ಕಳಿಗೆ ಹಿಂದಿನ ಕಾಲದಲ್ಲಿ ಇದ್ದಂತಹ ಆಚಾರ ವಿಚಾರಗಳು ಹಬ್ಬ ಸಂಪ್ರದಾಯಗಳು ಗೊತ್ತೇ ಇಲ್ಲ ಪುಟ್ಟ ವಯಸ್ಸಿನಲ್ಲಿರುವಂತಹ ಮಕ್ಕಳಿಗೆ ಇಂತಹ ವಿಶೇಷ ಕಾರ್ಯಕ್ರಮವನ್ನು ಮಾಡುವುದರಿಂದ ಆ ಮಕ್ಕಳಲ್ಲಿ ಹೊಸತನ ಹಾಗೂ ಯಾವ ಹಬ್ಬಕ್ಕೆ ಯಾವ ಶ್ರೇಷ್ಠತೆ ಇದೆ ಎಂಬುದರ ಬಗ್ಗೆ ತಿಳಿಯುವುದಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ ಹಾಗಾಗಿ ಇಂತಹ ಕಾರ್ಯಕ್ರಮವನ್ನು ಅಂಗನವಾಡಿಯಲ್ಲಿ ಮಾಡಿದ್ದಾರೆ ಎಂದು ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆ ಜಾನಕಮ್ಮ ಮಾತನಾಡಿ ನಮ್ಮ ಹಳ್ಳಿಯ ಜೀವನ ಇಂದಿನ ಮಕ್ಕಳಿಗೆ ಗೊತ್ತೇ ಇಲ್ಲ ಹಾಗಾಗಿ ಪ್ರತಿಯೊಂದು ಹಬ್ಬವನ್ನು ಸಹ ನಾವು ಅಂಗನವಾಡಿಯಲ್ಲಿ ಬಹಳ ವಿಶೇಷವಾಗಿ ಮಾಡುತ್ತೇವೆ ಮಕ್ಕಳಿಗೆ ಅದರ ಬಗ್ಗೆ ಮಾಹಿತಿಯನ್ನು ನೀಡುತ್ತೇನೆ ಇದರಿಂದ ಆ ಮಕ್ಕಳಿಗೆ ಪ್ರಾಯೋಗಿಕವಾಗಿಯೂ ಕೂಡ ಎಚ್ಚರಿಕೆಯಲ್ಲಿ ಜ್ಞಾನಾರ್ಜನೆಯಾಗುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎಸಿಡಿಪಿ ಓ ಸುಜಾತ, ಅಂಗನವಾಡಿ ಸಹಾಯಕಿ ಶ್ರೀದೇವಿ ಮತ್ತು ಮಕ್ಕಳುಸೇರಿದಂತೆ ಇನ್ನಿತರರು ಹಾಜರಿದ್ದರು.
ವರದಿ :ಶ್ರೀಕಾಂತ್ ಗುಬ್ಬಿ
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.