Gubbi: ಶ್ರೀಮಂತ ಮನೆತನದ ಹುಡುಗರನ್ನು ಮದುವೆಯಾಗಿ ವಂಚಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ.

Janataa24 NEWS DESK 

 

Gubbi: ಶ್ರೀಮಂತ ಮನೆತನದ ಹುಡುಗರನ್ನು ಮದುವೆಯಾಗಿ ವಂಚಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ.

 

Gubbi: ಶ್ರೀಮಂತ ಮನೆತನದ ಹುಡುಗರನ್ನು ಮದುವೆಯಾಗಿ ವಂಚಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ.

 

ಗುಬ್ಬಿ : ಇತ್ತೀಚಿನ ದಿನಗಳಲ್ಲಿ ಹೆಣ್ಣು ಸಿಗದೇ ಇರುವ ಗ್ರಾಮೀಣ ಭಾಗದ ಶ್ರೀಮಂತ ಯುವಕರನ್ನು ಆಯ್ಕೆ ಮಾಡಿಕೊಂಡು ಮದುವೆ ಆಗಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.

 

ತಾಲೂಕಿನ ಕಡಬ ಹೋಬಳಿ ಅತ್ತಿಕಟ್ಟೆ ಗ್ರಾಮದ ಪಾಲಾಕ್ಷ ಎಂಬುವರ ಮಗನಾದ ದಯಾನಂದ ಮೂರ್ತಿ(34) ಯವರಿಗೆ ಮದುವೆ ಮಾಡಲು ಹೆಣ್ಣು ಸಿಗದ ಕಾರಣ ಕುಷ್ಟಗಿ ಮೂಲದ ಬಸವರಾಜು ಎನ್ನುವರ ಮೂಲಕ ಮದುವೆ ಬ್ರೋಕರ್ ಲಕ್ಷ್ಮಿ ಎಂಬಾಕಿಯನ್ನು ಪರಿಚಯ ಮಾಡಿಕೊಂಡು ದೂರವಾಣಿ ಕರೆಯಲ್ಲಿ ಮನೆಯ ಪರಿಸ್ಥಿತಿಯನ್ನು ತಿಳಿಸಿದರು.

ಪಾಲಕ್ಶಪ್ಪನವರ ಮನೆಯ ಪರಿಸ್ಥಿತಿ ಅರಿತ ಆಕೆಯು ನಿಮ್ಮ ಮಗನಿಗೆ ಹೆಣ್ಣು ತೋರಿಸಿ ಮದುವೆ ಮಾಡಿಸಿ ಕೊಡುವ ಬಗ್ಗೆ ಭರವಸೆ ನೀಡಿದ್ದಳು.

ಇದಾದ ಎರಡು ದಿನಗಳ ನಂತರ ಹುಬ್ಬಳ್ಳಿಯಲ್ಲಿ ಒಬ್ಬ ಹುಡುಗಿ ಇದ್ದಾರೆ ಆಕೆಗೆ ತಂದೆ ತಾಯಿ ಇಲ್ಲ ಅವರ ಚಿಕ್ಕಪ್ಪ ಮತ್ತು ಚಿಕ್ಕಮ್ಮ ಇದ್ದಾರೆ ಅವರು ತುಂಬಾ ಕೊಡು ಬಡವರಾಗಿದ್ದ ಕಾರಣ ನೀವೇ ಮದುವೆ ಮಾಡಿಕೊಳ್ಳಬೇಕು ಎಂದು ಬೇಡಿಕೆ ಇಟ್ಟಿದ್ದಳು.

ಇದನ್ನು ಅರಿತ ಪಾಲಾಕ್ಷಪ್ಪ ಮಗನಿಗೆ ಒಳ್ಳೆಯ ಸಂಬಂಧ ಸಿಕ್ಕಿತು ಎಂದು ಮನಸ್ಸಿನಲ್ಲಿಯೇ ಸಂತೋಷ ಪಟ್ಟರು.

ನಂತರ ವರನ ಸ್ವಗೃಹ ಅತ್ತಿಕಟ್ಟೆ ಗ್ರಾಮದ ದೇವಾಲಯದಲ್ಲಿ ಮದುವೆ ಮಾಡಿಸಿದ್ದರು.

 

ಮಧುಮಗಳಿಗೆ ಚಿನ್ನ ಸರ ತಾಳಿ ಕಿವಿಯೋಲೆ ಸೇರಿ ಸುಮಾರು 25 ಗ್ರಾಂ ತೂಕದ ಚಿನ್ನಾಭರಣ ಮಾಡಿಸಿಕೊಟ್ಟಿದ್ದರು.

ಮದುವೆ ಬ್ರೋಕರ್ ಲಕ್ಷ್ಮೀಗೆ 1.5 ಲಕ್ಷ ರು ನಗದು ಹಣ ನೀಡಿದ್ದರು

 

ಮದುವೆಯಾದ ಎರಡು ದಿನಗಳ ನಂತರ ತವರು ಮನೆಗೆ ಹುಡುಗಿಯನ್ನು ಕರೆದುಕೊಂಡು ಹೋಗುತ್ತೇವೆ ಎಂದು ಹುಡುಗಿಯನ್ನು ಒಬ್ಬಳನ್ನೇ ಕರೆದುಕೊಂಡು ಹೋಗಿ ಒಂದು ವಾರ ಕಳೆದರೂ ಬಾರದೇ ಇದ್ದಾಗ ಮತ್ತು ಫೋನ್ ಕರೆಗಳನ್ನು ಸ್ವೀಕರಿಸದೆ ಇದ್ದಾಗ ಪಾಲಾಕ್ಷಪ್ಪ ಗಾಬರಿಯಿಂದ ಹುಬ್ಬಳ್ಳಿಗೆ ಹೋಗಿ ಪರಿಶೀಲಿಸಿದಾಗ ಸತ್ಯಾಂಶ ಹೊರಬಂದಿದೆ.

ತಕ್ಷಣಕ್ಕೆ ತೆರಳಿ ಗುಬ್ಬಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಗುಬ್ಬಿ ಪೊಲೀಸರು ಮದುವೆಯ ವಿಡಿಯೋ ಆಧಾರ್ ಕಾರ್ಡ್ ದಾಖಲೆ ಆಧರಿಸಿ ಅಪರಾಧಿಗಳ ನ್ನು ಬಂದಿಸಿ ಪ್ರಕರಣ ದಾಖಲಿಸಿಕೊಂಡ್ಡು. ತನಿಖೆ ನಡೆಸಿ ಈ ನಾಲ್ವರು ಖತರ್ನಾಕ್ ಗ್ಯಾಂಗನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವರದಿ: ಶ್ರೀಕಾಂತ್ ಗುಬ್ಬಿ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

Leave a Reply

Your email address will not be published. Required fields are marked *