Janataa24 NEWS DESK
Gubbi: ಶಾಲಾ ವಾಹನಕ್ಕೆ ಸಿಲುಕಿ ಅಪ್ರಾಪ್ತ ಬಾಲಕ ಸ್ಥಳದಲ್ಲೇ ಸಾವು.
ಗುಬ್ಬಿ: ಪಟ್ಟಣದ ಶ್ರೀವಿನಾಯಕ ನಗರ ಎರಡನೇ ಕ್ರಾಸ್ ಬಳಿ ಖಾಸಗಿ ಶಾಲಾ ವಾಹನಕ್ಕೆ ದ್ವಿಚಕ್ರ ವಾಹನದಲ್ಲಿ ಬಂದ ಅಪ್ರಾಪ್ತ ತೇಜಸ್(14) ಎಂಬ ಬಾಲಕ ಆಯತಪ್ಪಿ ಬಸ್ ನ ಹಿಂಬದಿಯ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ.
ಅಪ್ರಾಪ್ತ ಮಕ್ಕಳ ಕೈಗೆ ಪೋಷಕರು ವಾಹನಗಳನ್ನು ನೀಡುತ್ತಿರುವುದು ಕಾನೂನು ಬಾಹಿರವಾಗಿದೆ. ಹಾಗಾಗಿ ವಾಹನ ಚಾಲನೆ ಅವಕಾಶ ಮಾಡಿಕೊಟ್ಟ ವಾಹನ ಮಾಲೀಕರ ಮೇಲೆಯೂ ಕ್ರಮ ಜರುಗಿಸಲಾಗುವುದು ಎಂದು ಸಿಪಿಐ ಗೋಪಿನಾಥ್ ತಿಳಿಸಿದರು.
ಸ್ಥಳಕ್ಕೆ ಗುಬ್ಬಿ ಪೊಲೀಸರು ಆಗಮಿಸಿ ಸಾವಿಗೀಡಾದ ಬಾಲಕನನ್ನು ಗುಬ್ಬಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ವರದಿ: ಶ್ರೀಕಾಂತ್ ಗುಬ್ಬಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/