Janataa24 NEWS DESK
Gubbi:ಜಿಟಿ ಜಿಟಿ ಮಳೆಯಲ್ಲೂ ಕನ್ನಡ ಜ್ಯೋತಿರಥಕ್ಕೆ ಅದ್ದೂರಿ ಸ್ವಾಗತ.


ಗುಬ್ಬಿ: ತಾಲೂಕಿನ ಸಿ ಎಸ್ ಪುರ ಹೋಬಳಿಯಲ್ಲಿ ಕನ್ನಡಪರ ಸಂಘಟನೆ ಹಾಗೂ ವಿವಿಧ ಸಂಘಟನೆಗಳಿಂದ ಕನ್ನಡ ಜ್ಯೋತಿ ರಥಕ್ಕೆ ಅದ್ದೂರಿ ಸ್ವಾಗತ ಕೋರಲಾಯಿತು.
ಕರ್ನಾಟಕ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷಗಳು ಕಳೆದ ಹಿನ್ನೆಲೆ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಘೋಷವಾಕ್ಯದೊಂದಿಗೆ ಗುಬ್ಬಿ ತಾಲೂಕು ಸಿ ಎಸ್ ಪುರ ಗ್ರಾಮದಲ್ಲಿ ಕುಣಿಗಲ್ ನಿಂದ ಬಂದ ಕನ್ನಡ ಜ್ಯೋತಿ ರಥವನ್ನು ಗುಬ್ಬಿ ತಾಲೂಕು ಆಡಳಿತ ಹಾಗೂ ಸಿ ಎಸ್ ಪುರ ಗ್ರಾಮ ಪಂಚಾಯಿತಿ ವತಿಯಿಂದ ಸಕಲ ಗೌರವದೊಂದಿಗೆ ಅದ್ದೂರಿಯಾಗಿ ಮಹಿಳೆಯರು ಪೂರ್ಣ ಕುಂಭದೊಂದಿಗೆ ಸ್ವಾಗತಿದರು. ಸಿ ಎಸ್ ಪುರ ವೃತ್ತದಲ್ಲಿ ವಾದ್ಯ, ಜನಪದ ಕೋಲಾಟ ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಬಿ ಆರತಿ, ಸಿಪಿಐ ಗೋಪಿನಾಥ್, ಇಓ ಪರಮೇಶ್ ಕುಮಾರ್. ಪಿಎಸ್ಐ ಶಿವಕುಮಾರ್ , ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಯತೀಶ್, ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ ಗಂಗಾಧರ್, ಉಪಾಧ್ಯಕ್ಷ ಚಿದಾನಂದ, ಗ್ರಾಪಂ ಸದಸ್ಯ ಅಶ್ವಥ್, ಮಾಜಿ ಗ್ರಾಪಂ ಅಧ್ಯಕ್ಷರಾದ ಕೆಂಪರಾಜು, ಪಾಂಡುರಂಗಯ್ಯ ಪಿಡಿಓ ಸಿದ್ದರಾಜು ಸೇರಿದಂತೆ ಸಹಸ್ತ್ರಾರು ಕನ್ನಡ ಅಭಿಮಾನಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ವರದಿ: ಶ್ರೀಕಾಂತ್ ಗುಬ್ಬಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/bengaluru-action-to-solve-parking-parameshwar/
Lokayukta: ತುಮಕೂರು ವಾಣಿಜ್ಯ ಇಲಾಖೆಯ ಮುದ್ದುಕುಮಾರ್ ಮನೆ ಮೇಲೆ ಲೋಕಾಯುಕ್ತ ದಾಳಿ