Janataa24 NEWS DESK
Gubbi: 21ನೇ ವರ್ಷದ ಅದ್ದೂರಿ ದಿಂಡಿ ಉತ್ಸವ.
ಗುಬ್ಬಿ : ಶ್ರೀಪಾಂಡುರಂಗಸ್ವಾಮಿ ಮತ್ತು ರುಕುಮಾಬಾಯಿ ಯವರ 21ನೇ ವರ್ಷದ ದಿಂಡಿ ಉತ್ಸವ ಗುಬ್ಬಿ ಪಟ್ಟಣದಲ್ಲಿ ಅದ್ದೂರಿಯಾಗಿ ನಡೆಯಿತು.
ಪಟ್ಟಣದ ಜವಳಿಪೇಟೆಯಲ್ಲಿ ಪ್ರತಿಷ್ಠಾಪನೆಗೊಂಡಿರುವ ಶ್ರೀ ಪಾಂಡುರಂಗಸ್ವಾಮಿ ಹಾಗೂ ಶ್ರೀ ರುಖುಮಾಯಿ ದೆವರುಗಳ ದಿಂಡಿ ಉತ್ಸವ ಪ್ರತಿ ವರ್ಷಕ್ಕಿಂತ ಈ ವರ್ಷ ಬಹಳ ವಿಶೇಷವಾಗಿ ನಡೆದದ್ದು ಹತ್ತಕ್ಕೂ ಹೆಚ್ಚು ಕಲಾತಂಡಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗುವ ಮೂಲಕ ವಿಶೇಷ ಜಾತ್ರೆಯನ್ನೇ ಮೂಡಿಸಿದವು.
ಹೂವಿನ ಸುಂದರವಾದ ವಾಹನಗಳ ಮೂಲಕ ರುಕ್ಮಿಣಿ ಹಾಗೂ ಪಾಂಡುರಂಗ ಸ್ವಾಮಿ ಅವರ ಮೆರವಣಿಗೆಯು ಡೋಲು ನಾಗಸ್ವರಗಳ ಮೂಲಕ ಪಟ್ಟಣದಲ್ಲಿ ಸಾಗಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಸೂರ್ಯನಾರಾಯಣ ನನ್ನ ತಾಯಿ ನಾಗರತ್ನಬಾಯಿ ಹಾಗೂ ತಂದೆ ಲೇ ಜ್ಞಾನೇಶ್ವರ ರಾವ್ ಅವರ ಹೆಸರಿನಲ್ಲಿ ಈ ಒಂದು ಉತ್ಸವ ಮಾಡುತ್ತಿದ್ದು 21 ವರ್ಷಗಳ ಕಾಲದಿಂದ ನಡೆಯುತ್ತಾ ಬಂದಿದೆ ನನ್ನ ತಾಯಿಯ ಆಸೆಯಂತೆ ಚಿಕ್ಕ ಸಮುದಾಯವಾಗಿದ್ದರು ನಮ್ಮ ಸಮುದಾಯದ ಹಾಗೂ ನಮ್ಮ ಜನರ ಒಗ್ಗಟ್ಟನ್ನು ಪ್ರದರ್ಶನ ಮಾಡಲು ಇಂತಹ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ ಎಲ್ಲರ ಸಹಕಾರದಿಂದ ಬಹಳಷ್ಟು ಚೆನ್ನಾಗಿ ನಡೆದಿದೆ ಎಂದು ತಿಳಿಸಿದರು.
ನಾಗರತ್ನಬಾಯಿ ಮಾತನಾಡಿ ನನ್ನ ಮಗ ಸಮುದಾಯದ ಏಳಿಗೆಗೆ ಹಾಗೂ ಪಾಂಡುರಂಗನ ಪರಮ ಭಕ್ತರಾಗಿದ್ದು ಅವರ ಹೆಸರಿನಲ್ಲಿ ಪ್ರತಿ ವರ್ಷ ದಿಂಡಿ ಉತ್ಸವ ಮಾಡುತ್ತಿದ್ದು ನಿಜವಾಗಿಯೂ ನನಗೆ ಅತ್ಯಂತ ಹೆಚ್ಚು ಖುಷಿ ಕೊಟ್ಟಿದೆ ತಾಯಿಯ ಆಸೆಯನ್ನು ತಿಳಿಸುವ ಮಕ್ಕಳು ಇದ್ದಾಗ ಕುಟುಂಬಗಳು ಸಮಾಜ ಚೆನ್ನಾಗಿರುತ್ತದೆ ನಾವು ಎಷ್ಟೇ ದೊಡ್ಡವರಾದರೂ ಹೆತ್ತ ತಂದೆ ತಾಯಿಯನ್ನು ಖುಷಿಯಾಗಿ ಇಟ್ಟುಕೊಳ್ಳುವುದೇ ನಿಜವಾದ ಸಾಧನೆ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಮುಖಂಡ ರಾದ
ಸೂರ್ಯ ನಾರಾಯಣ,ಸುಬ್ರಮಣ್ಯ ವಾಸುದೇವ ರಾವ್,ಸುಮಿತ್ರ ಬಾಯಿ ಶೋಭಾವತಿ, ಸೇರಿದಂತೆ ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳು, ಕುಟುಂಬದವರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಿದ್ದರು.
ವರದಿ: ಶ್ರೀಕಾಂತ್ ಗುಬ್ಬಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.