Janataa24 NEWS DESK

ಪಾವಗಡ: ವಿದ್ಯುತ್ ಸರಿಯಾದ ವ್ಯವಸ್ಥೆ ಕಲ್ಪಿಸುತ್ತಿಲ್ಲ ಬೆಳದಂತ ಬೆಳೆ ನಾಶವಾಗುತ್ತಿದೆ ಎಂಬುದಾಗಿ ಹೇಳಿ ಬೆಸ್ಕಾಂ ಇಲಾಖೆ ಮುಂದೆ ಪ್ರತಿಭಟನೆ(Protest) ಮಾಡಿ ಕೆಲವು ಸಮಯ ಕಚೇರಿ ಮುಂದೆ ಧರಣಿ ಮಾಡಿದ ಘಟನೆ ಸೋಮವಾರದಂದು ನಡೆಯಿತು.
ತಾಲೂಕಿನ ಬಿಕೆಹಳ್ಳಿ ಪಂಚಾಯತಿ ವ್ಯಾಪ್ತಿಯ ವ್ಯಾಪ್ತಿಯ ರೈತರು ತಿಂಗಳಿಂದ ವಿದ್ಯುತ್ ವ್ಯವಸ್ಥೆ ಸರಿಯಾದ ಇಲ್ಲದ ಕಾರಣ ಸಾಲ ಮಾಡಿ ಹಾಕಿದ ಬೆಳೆ ಕೈಗೆ ಸಿಗುತ್ತಿಲ್ಲ ಇದರಿಂದ ಲಕ್ಷಾಂತರ ರು ನಷ್ಟ ಆಗುತ್ತಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಬೆಸ್ಕಾಂ(BESOM) ಇಲಾಖೆ ಅಧಿಕಾರಿಗಳು ಹಲವು ಬಾರಿ ಮನವಿ ಪತ್ರ ಸಲ್ಲಿಸಿದರು ವಿದ್ಯುತ್ ನೀರಾವರಿ ವಿಫಲಗೊಂಡಿದ್ದಾರೆ.
ಹಾಗಾಗಿ ಇಂದು ಸ್ಥಳೀಯ ರೈತರು ಕಚೇರಿಗೆ ನುಗ್ಗಿ ಸಂಬಂಧಪಟ್ಟರು ಸುಮಾರು ತಾಸು ಪ್ರತಿಭಟನೆ ಕಾರರು ತಮ್ಮ ಬೇಡಿಕೆ ಈಡೇರುವವರಿಗೂ ಇಲ್ಲಿಂದ ಕದಲುವುದಿಲ್ಲ ತಕ್ಷಣವೇ ನಮ್ಮ ವ್ಯಾಪ್ತಿಗೆ ವಿದ್ಯುತ್ ವ್ಯವಸ್ಥೆ ಕಲ್ಪಿಸುವವರಿಗೆ ಹೋಗೋದಿಲ್ಲ ಎಂಬುದಾಗಿ ಪ್ರತಿಭಟಕಾರರು ಅಧಿಕಾರಿಗಳ ಮುಂದೆ ತಿಳಿಸುತ್ತಾ ಪ್ರತಿಭಟನಾಕಾರರು ಮುಂದಾಗಿದ್ದಾರೆ.
ಬೆಸ್ಕಾಂ ಅಧಿಕಾರಿಗಳು ವಾರದಲ್ಲಿ ತಮ್ಮ ಸಮಸ್ಯೆ ಬಗೆಹರಿಸುವುದಾಗಿ ಹೇಳಿ ರೈತರಿಗೆ ಮನವೊಲಿಸಿ ಹಿಂತಿರುಗಿಸೋ ಕೆಲಸ ಮಾಡಿದ್ದಾರೆ.
ಬಿಕೆ ಹಳ್ಳಿ ವ್ಯಾಪ್ತಿಯ ರೈತರು ಹಾಗೂ ರೈತ ಸಂಘದ ಅಧ್ಯಕ್ಷರು ವಿವಿಧ ಮುಖಂಡರು ಭಾಗಿಯಾಗಿದ್ದರು.
ವರದಿ: ಇಮ್ರಾನ್ ಉಲ್ಲಾ. ಪಾವಗಡ