EVM: ಮತ ಹಾಕಲು ಬಂದ ಅನಂತನಾಗ್ ಗೆ ಕೈ ಕೊಟ್ಟ ಮತಯಂತ್ರ

Janataa24 NEWS DESK

EVM: ಮತ ಹಾಕಲು ಬಂದ ಅನಂತನಾಗ್ ಗೆ ಕೈ ಕೊಟ್ಟ ಮತಯಂತ್ರ|Voting machine lost working to Ananth Nag who came to vote|

ಬೆಂಗಳೂರು: ಕನ್ನಡದ ಹಿರಿಯ ನಟ ಅನಂತ್ ನಾಗ್ (Ananth Nag) ಮತದಾನ ಮಾಡುವುದಕ್ಕಾಗಿ ಬೆಂಗಳೂರು ನಾರ್ತ್ ಮಲ್ಲೇಶ್ವರಂ(Malleshwaram) ವಿಧಾನಸಭಾ ಕ್ಷೇತ್ರದ ಅಶ್ವಥ್ ನಗರ ಮತಗಟ್ಟೆ ಆಗಮಿಸಿದ್ದ ಸಂದರ್ಭದಲ್ಲಿ. ತಾಂತ್ರಿಕ ಸಮಸ್ಯೆ ಕಾರಣದಿಂದಾಗಿ 15 ನಿಮಿಷಕ್ಕೂ ಹೆಚ್ಚು ಕಾಲ ಅನಂತ್ ನಾಗ್ ಕಾಯವಂತಾಯಿತು. ಮತಯಂತ್ರದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅವರು ಕಾಯೋದು ಅನಿವಾರ್ಯವಾಗಿತ್ತು.ಮತಗಟ್ಟೆಯಲ್ಲೇ ಅನಂತ್ ನಾಗ್) ಅವರಿಗೆ ಸಿಬ್ಬಂದಿ ಕುರ್ಚಿ ಹಾಕಿ ಕೂರಿಸಿದ್ದರು. ಹೊಸ ಮತಯಂತ್ರ ತಂದು ಜೋಡಣೆ ಮಾಡಿದ ನಂತರ ಅನಂತ್ ನಾಗ್ ಮತ್ತು ಪತ್ನಿ ಮತದಾನ ಮಾಡಿದರು.

ಮತದಾನದ ಬಳಿಕ ಮಾತನಾಡಿದ ಅನಂತ್ ನಾಗ್, ಮತಹಾಕದವರ ವಿರುದ್ದ ಆಕ್ರೋಶ ಹೊರ ಹಾಕಿದರು.

ಮತದಾನ ಮಾಡದವರನ್ನ ಮತಪಟ್ಟಿಯಿಂದ ತೆಗೆದುಹಾಕಿ ಎಂದು ಸಲಹೆ ನೀಡಿದರು.ಕಳೆದ ಐದು ಚುನಾವಣೆಗಳಿಂದ ಇದರ ಬಗ್ಗೆಯೇ ಚರ್ಚೆ ಆಗುತ್ತಿದೆ ಏಕೆ? ಯಾರು ನಿರಂತರವಾಗಿ ಹಾಕುವುದಿಲ್ಲವೋ ಅವರನ್ನು ಮತಪಟ್ಟಿಯಿಂದಲೇ ತೆಗೆದುಹಾಕಿ. ಅಲ್ಲಿ ಯೋಧ(Soldier)ರು ದೇಶಕ್ಕಾಗಿ ಪ್ರಾಣ ಕೊಡ್ತಾರೆ. ಇವರು ಮನೆಯಿಂದ ಹೊರಬಂದು ಒಂದು ವೋಟ್ ಮಾಡೋಕಾಗಲ್ವ? ಸ್ವಾತಂತ್ರ್ಯ(Independence) ಬಂದು 75 ವರ್ಷ ಆಯ್ತು, ಇನ್ನೂ ಎಂಥಾ ಜಾಗೃತಿ ಬೇಕು. ಇಲ್ಲಿ ಯುವಕರು, ಹಿರಿಯರು ಅನ್ನೋ ಪ್ರಶ್ನೆ ಇಲ್ಲ ಎಲ್ಲರನ್ನೂ ಒಂದೇ ಥರ ನೋಡಿ.

ಯಾರು ಮತಹಾಕೋಕೆ ಬರಲ್ಲ ಅವರನ್ನು ಪಟ್ಟಿಯಿಂದ ತೆಗೆದುಹಾಕಿ ಎಂದರು.ಹೊಸ ಸರ್ಕಾರದಿಂದ ನಿರೀಕ್ಷೆ ಏನು ಎಂಬ ಪ್ರಶ್ನೆಗೆ, ಮುಂದಿನ ಒಂದು ವರ್ಷದಲ್ಲಿ 75 ವರ್ಷಗಳಲ್ಲಿ ಆಗದ ಕೆಲಸಗಳನ್ನ ಮಾಡಬೇಕು. ಇದನ್ನ ಹೊಸ ಸರ್ಕಾರದಿಂದ ನಾನು ನಿರೀಕ್ಷೆ ಮಾಡ್ತೇನೆ ಎಂದು ಅನಂತ್ ನಾಗ್ ತಿಳಿಸಿದರು.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://www.janataa24.com/tumkur-technical-fault-in-evm-machi

Leave a Reply

Your email address will not be published. Required fields are marked *