Delhi : ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಪತ್ನಿಯ ಕಾರು ಕದ್ದ ಖದೀಮರು.

Janataa24 NEWS DES

Delhi: ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಪತ್ನಿಯ ಕಾರು ಕದ್ದ ಖದೀಮರು.

Delhi GP Nadda Mallika Nadda
GP Nadda with Wife

ನವದೆಹಲಿ: ಭಾರತೀಯ ಜನತಾ ಪಾರ್ಟಿ ಅಧ್ಯಕ್ಷ ಜೆಪಿ ನಡ್ಡಾ (GP Nadda)ಅವರ ಪತ್ನಿಯ ಕಾರು ಕಳ್ಳತನವಾಗಿರುವ ಘಟನೆ ದೆಹಲಿಯಲ್ಲಿ ಹೊರಬಿದ್ದಿದೆ. ಜೆಪಿ ನಡ್ಡಾ ಪತ್ನಿ ಮಲ್ಲಿಕಾ ನಡ್ಡಾ(Mallika Nadda) ಅವರ ಐಷಾರಾಮಿ ಫಾರ್ಚುನರ್ ಕಾರನ್ನು ಅವರ ಚಾಲಕ ಸರ್ವೀಸ್‌ಗೆ ತೆಗೆದುಕೊಂಡು ಹೋಗಿದ್ದರು.

ಮಾರ್ಚ್ 19 ರಂದು, ಅವರ ಕಾರನ್ನು ಸರ್ವೀಸ್ ಸೆಂಟರ್‌ನಿಂದಲೇ ಕಳವು ಮಾಡಲಾಗಿತ್ತು. ಚಾಲಕನ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಇದೀಗ ಕಳವಾದ ಕಾರನ್ನು ಪೊಲೀಸರು ಹುಡುಕಲು ಪ್ರಾರಂಭಿಸಿದ್ದಾರೆ.

ಸಂಬಂಧಪಟ್ಟಂತೆ ದೆಹಲಿ ಪೊಲೀಸರು ಅಲ್ಲಿನ ಅಕ್ಕಪಕ್ಕದ ಸಿಸಿಟಿವಿ ಪರಿಶೀಲಿಸುತ್ತಿದ್ದಾರೆ. ಕಾರು ಕದ್ದ ಕಳ್ಳರನ್ನ ಮಾಹಿತಿಗಾಗಿ ವಿಚಾರಣೆ ನಡೆಸಲಾಗುತ್ತಿದೆ. ಅರೋರಾ ಪ್ರಾಪರ್ಟೀಸ್ ಆರ್‌ಡಿ ಮಾರ್ಗದ ಮುಂದೆಯಿರುವ ಗೋವಿಂದಪುರಿಯಿಂದ ಕಾರು ರಿಜಿಸ್ಟರ್ ಸಂಖ್ಯೆ HP 03 D 0021 ಅನ್ನು ಕಳವು ಮಾಡಲಾಗಿದೆ ಎಂದು ಚಾಲಕ ಮಾಹಿತಿ ನೀಡಿದ್ದಾರೆ.

ಸುಮಾರು ಅಪರಾಹ್ನ 3 ಗಂಟೆಯಿಂದ 4 ಗಂಟೆಯೊಳಗೆ ಕಾರು ಕಳ್ಳತನವಾಗಿರ ಬೇಕು ಎಂದು ಚಾಲಕ ತಿಳಿಸಿದ್ದಾರೆ. ದೆಹಲಿ ಸೇರಿದಂತೆ ಹಲವು ಮಹಾನಗರಗಳಲ್ಲಿ ವಾಹನ ಕಳ್ಳತನ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿರುವುದು ದುರಂತ . ದೆಹಲಿ-ಎನ್‌ಸಿಆರ್‌ನಲ್ಲಿ ಪ್ರತಿ 14 ನಿಮಿಷಕ್ಕೆ ಒಂದು ವಾಹನ ಕಳ್ಳತನವಾಗುತ್ತಿರುವುದು ಆತಂಕ ವರದಿ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ

https://chat.whatsapp.com/Jf6jZ0gyQAEA5GBRpHnkrv

Subscribe YouTube

https://youtube.com/@janataa24?si=XsFcych2GMH0O6Gv

Badami : ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2.90 ಲಕ್ಷ ಹಣ ವಶಪಡಿಸಿಕೊಂಡ ಬಾದಾಮಿ ಪಿಎಸ್ಐ

Leave a Reply

Your email address will not be published. Required fields are marked *