Janataa24 NEWS DESK
Daily Horoscope : ಇಂದಿನ ರಾಶಿ ಭವಿಷ್ಯ

ಮೇಷ: ಉದ್ಯೋಗಸ್ಥರ ಕೆಲವು ನಿರೀಕ್ಷೆಗಳು ಈಡೇರುತ್ತವೆ. ಉದ್ಯಮಿಗಳಿಂದ ಇನ್ನಷ್ಟು ಅವಕಾಶಗಳ ಅನ್ವೇಷಣೆ. ದೀರ್ಘಕಾಲೀನ ವಿವಾದ ಪರಿಹಾರ(Factors) ಶುಭ ಕಾರ್ಯಕ್ಕೊದಗಿದ ವಿಘ್ನ ನಿವಾರಣೆ.
ವೃಷಭ: ಉದ್ಯಮಿಗಳಿಗೆ ಎದುರಾಳಿಗಳಿಂದ ಸ್ಪರ್ಧೆ. ಉತ್ಪನ್ನಗಳ ಗುಣಮಟ್ಟದ ಕಡೆಗೆ ಗಮನವಿರಲಿ. ಗುರುಸಮಾನರ ಅಕಸ್ಮಾತ್ ಭೇಟಿ. ದಂಪತಿಗಳ ನಡುವೆ ಅನುರಾಗ, ವಿಶ್ವಾಸ ವೃದ್ಧಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಗಣನೀಯ ಪ್ರಗತಿ.
ಮಿಥುನ: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ. ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ. ಶುಭ ಕಾರ್ಯ ನಡೆಸುವ ಬಗ್ಗೆ ಚಿಂತನೆ. ವಾಹನ ದುರಸ್ತಿ ಬಲ್ಲವರಿಗೆ ಉದ್ಯೋಗಾವಕಾಶ. ಹಿರಿಯರ ಆರೋಗ್ಯದತ್ತ ಗಮನವಿರಲಿ.
ಕರ್ಕಾಟಕ: ಖನ್ನತೆಯನ್ನು ದೂರವಿಡಿ. ಉದ್ಯೋಗದಲ್ಲಿ ತೃಪ್ತಿ. ವ್ಯವಹಾರ ಕ್ಷೇತ್ರದ ಸಾಧನೆಗಾಗಿ ಸಮಾಜದಲ್ಲಿ ಗೌರವ. ವೈವಾಹಿಕ ಜೀವನದಲ್ಲಿ ಸಂತೃಪ್ತಿ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ.
ಸಿಂಹ: ಸಕಾಲದ ಕ್ರಿಯೆಗೋಸ್ಕರ ಮೇಲಿ ನವರಿಂದ ಪ್ರಶಂಸೆ. ಉದ್ಯಮದಲ್ಲಿ ಹೊಸ ಅವಕಾಶಗಳು ಗೋಚರ. ಅನಿರೀಕ್ಷಿತ ಧನಾಗಮ. ಕೃಷಿ ಕ್ಷೇತ್ರದಲ್ಲಿ ಯಶಸ್ಸು ದೊರಕಿಸಿದ ಹೊಸ ಪ್ರಯೋಗಗಳು.
ಕನ್ಯಾ: ಉದ್ಯೋಗ(Job) ನಿರ್ವಹಣೆಯಲ್ಲಿ ಉತ್ಸಾಹ. ಸಣ್ಣ ಉದ್ಯಮ ಯೋಜನೆಗೆ ಚಾಲನೆ. ದೂರದಿಂದ ಶುಭವಾರ್ತೆ. ನೂತನ ವಾಹನ ಖರೀದಿ. ದ್ರವ ಪದಾರ್ಥ ವ್ಯಾಪಾರಿಗಳಿಗೆ ಲಾಭ. ಹಿರಿಯರ ಮತ್ತು ಗೃಹಿಣಿಯರ ಆರೋಗ್ಯ ಗಮನಿಸಿ.
ತುಲಾ: ಚಿತ್ತ ಚಾಂಚಲ್ಯವನ್ನು ದೂರವಿಡಿ. ಉದ್ಯೋಗ ಸ್ಥಾನದಲ್ಲಿ ಹೊಸ ಬಗೆಯ ಅವಕಾ ಶಗಳು. ಪಾಲುದಾರಿಕೆ ವ್ಯವಹಾರದಲ್ಲಿ ಆದಾಯ ವೃದ್ಧಿ. ದಾಂಪತ್ಯ ಜೀವನದಲ್ಲಿ ಸೌಖ್ಯ. ಗುರುಹಿರಿಯರ ಸೂಕ್ತ ಮಾರ್ಗದರ್ಶನ ಲಭ್ಯ.
ವೃಶ್ಚಿಕ: ಉದ್ಯೋಗದಲ್ಲಿ ಪದೋನ್ನತಿ. ಉದ್ಯಮ ಕ್ಷೇತ್ರದಲ್ಲಿ ಜಯಭೇರಿ. ಹಿರಿಯರಿಗೆ ಉತ್ತಮ ದೇಹಾರೋಗ್ಯ. ತಾಳ್ಮೆಯಿಂದ ಕಾರ್ಯದಲ್ಲಿ ಜಯ. ವ್ಯವಹಾರದ ಸಂಬಂಧ ಉತ್ತರ ದಿಕ್ಕಿಗೆ ಪಯಣ ಸಂಭವ. ಗೃಹಿಣಿಯರಿಗೆ, ಮಕ್ಕಳಿಗೆ ಶುಭ.
ಧನು: ಅಂತರಾತ್ಮನ ಮಾರ್ಗದರ್ಶನದಂತೆ ನಡೆದುಕೊಂಡರೆ ಕಾರ್ಯಸಿದ್ಧಿ. ವಸ್ತ್ರೋದ್ಯಮಿ ಗಳಿಗೆ ಮತ್ತು ಸ್ವರ್ಣೋದ್ಯಮಿಗಳಿಗೆ ಅಮಿತ ಲಾಭ. ಸರಕಾರಿ ಯೋಜನೆಗಳ ಪ್ರಯೋಜನ ಪಡೆಯುವ ಯತ್ನದಲ್ಲಿ ನಿರಾಶೆ. ಮಕ್ಕಳ ವಿದ್ಯಾಭ್ಯಾಸ ಮುನ್ನಡೆ.
ಮಕರ: ತಾಳ್ಮೆ ಕಳೆದುಕೊಳ್ಳದಿರಿ. ಅಭಿಪ್ರಾಯ ವ್ಯಕ್ತಪಡಿಸಲು ಆತುರ ಬೇಡ. ದೈನಂದಿನ ವ್ಯವಹಾರದಲ್ಲಿ ಪ್ರಗತಿ. ಸಾಗರೋತ್ಪನ್ನ ವ್ಯಾಪಾರಿಗಳಿಗೆ ಹೇರಳ ಲಾಭ. ಧ್ಯಾನ, ದೇವತಾರ್ಚನೆಯಲ್ಲಿ ಆಸಕ್ತಿ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಶುಭ.
ಕುಂಭ: ಉದ್ಯೋಗಸ್ಥರಿಗೆ ಹು
ದ್ದೆಯಲ್ಲಿ ವಿಭಾಗ ಬದಲಾವಣೆ. ಮುದ್ರಣ ಸಾಮಗ್ರಿ, ಸ್ಟೇಶನರಿ,ವ್ಯಾಪಾರಿಗಳಿಗೆ ದೊಡ್ಡ ಮೊತ್ತದ ಲಾಭ, ಗೃಹಿಣಿಯರಿಗೆ ದ್ರವ್ಯಲಾಭ. ಉನ್ನತ ವ್ಯಾಸಂಗಾಸಕ್ತರಿಗೆ ಅನುಕೂಲ. ಹಿರಿಯರಿಗೆ, ಮಕ್ಕಳಿಗೆ ಸಂತಸದ ವಾತಾ ವರಣ. ಸಮಾಜ ಸೇವೆ(Social service)ಯಲ್ಲಿ ಆಸಕ್ತಿ.
ಮೀನ: ಉದ್ಯೋಗದ ಸಂಬಂಧ ದೂರದೂರಿಗೆ ಪ್ರಯಾಣ. ಇಲಾಖೆಗಳಿಂದ ಉತ್ತಮ ಸ್ಪಂದನ. ಹೊಸ ಕಾರ್ಯಾರಂಭಕ್ಕೆ ತಾತ್ಕಾಲಿಕ ವಿಘ್ನ. ಆಸ್ತಿ ವಿವಾದ ಸೌಹಾರ್ದಪೂರ್ಣವಾಗಿ ಪರಿಹಾರ. ಕೃಷ್ಯುತ್ಪನ್ನಗಳಿಂದ ಲಾಭ. ಗ್ರಾಮೋದ್ಯೋಗಗಳಿಗೆ ಪ್ರೋತ್ಸಾಹ. ಹಿರಿಯರ, ಗೃಹಿಣಿಯರ,ಮಕ್ಕಳ ಆರೋಗ್ಯ ಸ್ಥಿರ
WPL 24: 16 ವರ್ಷದ ಕನಸು ನನಸು- ಈ ಬಾರಿ RCB ಚಾಂಪಿಯನ್ಸ್
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
Subscribe YouTube