CN Halli: ಮೂಲಭೂತ ಸೌಕರ್ಯಕ್ಕಾಗಿ ಹೋರಾಟ–22ನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ.

JANATAA24 NEWS DESK 

 

CN Halli: ಮೂಲಭೂತ ಸೌಕರ್ಯಕ್ಕಾಗಿ ಹೋರಾಟ–22ನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ.

CN Halli: ಮೂಲಭೂತ ಸೌಕರ್ಯಕ್ಕಾಗಿ ಹೋರಾಟ–22ನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ.

ಚಿಕ್ಕನಾಯಕನಹಳ್ಳಿ:  ಹುಳಿಯಾರು ಪಟ್ಟಣ ಪಂಚಾಯಿತಿ ಕಾರ್ಯಾಲಯದ ಮುಂದೆ 22 ದಿನಗಳಿಂದ ಆಹೋರಾತ್ರಿ ಧರಣಿ ನಡೆಯುತ್ತಿದ್ದು ಗಾಂಧಿಪೇಟೆ ರಸ್ತೆ ಬದಿಯಲ್ಲಿ ನಡೆಯುತ್ತಿರುವ ಸಂತೆಗೆ ಎಪಿಎಂಸಿ ಆವರಣದಲ್ಲಿ ಸ್ಥಳ ನಿಗದಿ ಮಾಡುವಂತೆ ಜೊತೆಗೆ ಹುಳಿಯಾರು ಹೋಬಳಿಯಲ್ಲಿ ಕಸ ವಿಲೇವಾರಿ ಸರಿಯಾಗಿ ಆಗದೆ ಸಂಬಂಧ ಪಟ್ಟ ಅಧಿಕಾರಿಗಳು ಕೈ ಚೆಲ್ಲಿ ಕುಳಿತಿದ್ದು ಸರಿಯಾದ ಮೂಲಭೂತ ಸೌಕರ್ಯಗಳಿಲ್ಲದೆ ಸಾರ್ವಜನಿಕರು ಮತ್ತು ಸ್ಥಳಿಕರು ಪರದಾಡುವಂತಹ ಪರಿಸ್ಥಿತಿ ಬಂದಿದೆ ಎಂಬ ಮಾತು ಹೋರಾಟಗಾರರಿಂದ ಕೇಳಿ ಬರುತ್ತಿದ್ದು ಈ ಆಹೋರಾತ್ರಿ ಧರಣಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೊಸಳ್ಳಿ ಚಂದ್ರಣ್ಣ ಅವರ ನೇತೃತ್ವದಲ್ಲಿ ನಡೆಯುತ್ತಿದ್ದು ಈ ಧರಣಿಗೆ ರಾಜ್ಯದ ವಿವಿಧ ರೈತ ಪರ ಸಂಘಟನೆಗಳು ಹಾಗೂ ಸ್ಥಳೀಯ ವಿವಿಧಪರ ಸಂಘಟನೆಗಳು ದಲಿತ ಪರ ಸಂಘಟನೆಗಳು ಕೂಡ ಬೆಂಬಲವನ್ನ ನೀಡಲಾಗಿದೆ.

 

ಇದೇ ವೇಳೆ ರಾಜ್ಯಾಧ್ಯಕ್ಷ ಚಂದ್ರಣ್ಣ ಮಾತನಾಡಿ ಈಗಾಗಲೇ ಪಟ್ಟಣ ಪಂಚಾಯಿತಿಯ ಮುಂಭಾಗ ಧರಣಿ ನಡೆಯುತ್ತಿರುವ ಸ್ಥಳಕ್ಕೆ ಚಿಕ್ಕನಾಯಕನಹಳ್ಳಿ ಶಾಸಕ ಸಿಬಿ ಸುರೇಶ್ ಬಾಬು ಭೇಟಿ ನೀಡಿ ಸ್ವತಹ ಖುದ್ದು ಎಪಿಎಂಸಿ ಆವರಣದಲ್ಲಿ ಸಂತೆಗಾಗಿ ಸ್ಥಳ ಗುರುತಿಸಿ ಸ್ವಚ್ಛತೆ ಕಾರ್ಯವನ್ನು ಸಹ ಮಾಡಿಸಿ ಅಧಿಕಾರಿಗಳಿಗೆ ಸೂಚನೆ ಕೂಡ ಕೊಟ್ಟಿದ್ದಾರೆ, ಆದರೂ ಮೂಲಭೂತ ಸೌಕರ್ಯಗಳು ದೊರಕಿಸಿಕೊಡದೆ ಕಸ ವಿಲೇವಾರಿ ಸರಿಯಾಗಿ ಆಗುವವರೆಗೂ ನಾವುಗಳು ಮಾತ್ರ ಯಾವುದೇ ಕಾರಣಕ್ಕೂ ಧರಣಿಯನ್ನು ಹಿಂತೆಗೆದುಕೊಳ್ಳುವುದಿಲ್ಲ ಉಪವಾಸ ಸತ್ಯಾಗ್ರಹ ನಡೆಸಲು ಈಗಾಗಲೇ ಸಂಘಟನೆಗಳೊಂದಿಗೆ ಚರ್ಚಿಸಲಾಗಿ ಉಪವಾಸ ಸತ್ಯಾಗ್ರಹದ ದಿನಾಂಕವನ್ನು ನಾಳೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ಸ್ಥಳೀಯ ಲಿಂಗಪ್ಪನಹಳ್ಳಿ ಗ್ರಾಮದಲ್ಲಿರುವ ನಾಡ ದೇವತೆ ಶ್ರೀ ಚಾಮುಂಡೇಶ್ವರಿ ರೈತ ಉತ್ಪಾದಕರ ಸಂಸ್ಥೆ ಕೂಡ ಇದಕ್ಕೆ ಬೆಂಬಲ ನೀಡಿದ್ದು ಇದರ ಮುಖ್ಯಸ್ಥ ಮಾತನಾಡಿ ಕಿರು ಉಳಿತಾಯ ಯೋಜನೆ ಮುಖಾಂತರ ಕೃಷಿ ಚಟುವಟಿಕೆಗಳಿಗೆ ಸಾಲ ಸೌಲಭ್ಯ ಒದಗಿಸಬೇಕು, ಪೂರಕ ಮಾರುಕಟ್ಟೆ ಸೌಲಭ್ಯವನ್ನು ಕಲ್ಪಿಸಬೇಕು, ಹಣಬೆ ಕೃಷಿ ಬೇಸಾಯ ಪದ್ಧತಿಗೆ ಹೆಚ್ಚು ಒತ್ತು ನೀಡಬೇಕು.

 

ಸಂಪೂರ್ಣ ರಾಸಾಯನಿಕ ಮುಕ್ತ ಆಹಾರ ಉತ್ಪಾದನೆಗೆ ಮತ್ತು ಹಣ್ಣು ತರಕಾರಿ ಉತ್ಪಾದನೆಗೆ ವಿಶೇಷ ಒತ್ತು ನೀಡಬೇಕು, ಮೂಲಭೂತ ಸೌಕರ್ಯವನ್ನು ಒದಗಿಸುವವರೆಗೂ ನಾವುಗಳು ಕರ್ನಾಟಕ ರಾಜ್ಯ ರೈತ ಸಂಘಗಳಿಂದ ಹಾಗೂ ಕರ್ನಾಟಕ ರಾಜ್ಯ ಹಸಿರು ಸೇನೆಗಳಿಂದ ನಡೆಯುವ ಹೋರಾಟಕ್ಕೆ ಮತ್ತು ಉಪವಾಸ ಸತ್ಯಾಗ್ರಹ ಚಳುವಳಿಗಳಿಗೆ ನಿಸ್ವಾರ್ಥವಾಗಿ ಭಾಗವಹಿಸಿ ಭಾಗಿಯಾಗುತ್ತೇವೆ ಎಂದರು.

 

ಸೃಜನ ಮಹಿಳಾ ವೇದಿಕೆ ಮತ್ತು ಟ್ರಸ್ಟ ನ ಮುಖ್ಯಸ್ಥೆ ಜಯಲಕ್ಷ್ಮಿಮಾತನಾಡಿ ಈ ಹೋರಾಟಕ್ಕೆ ನಮ್ಮ ವೇದಿಕೆಯು ಕೂಡ ಬೆಂಬಲ ಸೂಚಿಸಿ ನಾವುಗಳು ರೈತರ ಹಕ್ಕುಗಳನ್ನು ಪಡೆಯಲು ಸಂಸ್ಥೆಯ ಮೂಲಕ ಪ್ರೋತ್ಸಾಹಿಸಿ ಈ ಹೋರಾಟಕ್ಕೆ ನ್ಯಾಯ ಸಿಗುವವರೆಗೂ ನಾವು ಕೂಡ ಭಾಗವಹಿಸುತ್ತೇವೆ ಎಂದರು.

 

ಇದೇ ಸಂದರ್ಭದಲ್ಲಿ ಹುಳಿಯಾರು ಹೋಬಳಿಯ ರೈತ ಸಂಘದ ಅನೇಕ ಪದಾಧಿಕಾರಿಗಳು ವಿವಿಧಪರ ಸಂಘಟನೆಗಳ ಮುಖಂಡರು ಸಾರ್ವಜನಿಕರು ಹೋರಾಟದಲ್ಲಿ ಉಪಸ್ಥಿತರಿದ್ದರು.

 

 

ವರದಿ: ಮಂಜುನಾಥ್ ಕೆ ಎ

 

 

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.


Leave a Reply

Your email address will not be published. Required fields are marked *