Janataa24 NEWS DESK
CN Halli: ಗಣಿ ಭಾದಿತ ಪ್ರದೇಶಗಳಲ್ಲಿ ಮರೀಚಿಕೆಯಾದ ಮೂಲಭೂತ ಸೌಕರ್ಯಗಳು.
ತುಮಕೂರು: ಜಿಲ್ಲೆಯ ಗುಬ್ಬಿ,ಚಿಕ್ಕನಾಯಕನಹಳ್ಳಿ, ತಿಪಟೂರು ತಾಲ್ಲೂಕು ಗಣಿಭಾದೀತ ಪ್ರದೇಶವೆಂದು ಗುರುತಿಸಲ್ಪಟ್ಟಿದ್ದು ಗಣಿ ದಂಡದ ಹಣವನ್ನು ಗಣಿಬಾಗದ ಜನರ ಮೂಲಭೂತ ಸೌಕರ್ಯಾಗಳನ್ನು ಒದಗಿಸುವುದಕ್ಕೆ ಸಾವಿರಾರು ಕೋಟಿ ಹಣವನ್ನು(CEPMIZ) ಸುಪ್ರೀಮ್ ಕೋರ್ಟ್ ನಿಗಾವಣೆಯಲ್ಲಿ ಕರ್ನಾಟಕ ರಾಜ್ಯ ಗಣಿ ಮತ್ತು ಪರಿಸರ ಪುನಶ್ಚೇತನ ನಿಗಮಕ್ಕೆ ನೀಡಿದೆ. ಆದರೆ ಈ ಹಣವು ಬ್ರಷ್ಟ ರಾಜಕೀಯ ವ್ಯಕ್ತಿಗಳು ಹಾಗೂ ಬ್ರಷ್ಟ ದುರಾಡಳಿತ ಅಧಿಕಾರಿಗಳಿಂದ ಜನರ ಕಲ್ಯಾಣಕ್ಕೆ ವಿನಿಯೋಗವಾಗದೆ ದುರುಪಯೋಗ ಆಗುತ್ತಿದೆ ಎಂದು ಜನರು ಆರೋಪ ಮಾಡುತ್ತಿದ್ದಾರೆ.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗಣಿಭಾಗದ ಅನೇಕ ಗ್ರಾಮಗಳಲ್ಲಿ ಇಂದಿಗೂ ಮೂಲಭೂತ ಸೌಕರ್ಯಗಳಾದ ನಿವೇಶನ, ಶೌಚಾಲಯ, ವಸತಿ, ಶಿಕ್ಷಣ, ಆರೋಗ್ಯ, ಶುದ್ಧ ಕುಡಿಯುವ ನೀರು ,ವಿದ್ಯುತ್ ,ರಸ್ತೆ ಸಾರಿಗೆ ವ್ಯವಸ್ಥೆ, ಚರಂಡಿ ವ್ಯವಸ್ಥೆ, ಉದ್ಯೋಗ ಅತ್ಯಾಧುನಿಕ ಯುಗದಲ್ಲಿಯು ನೆಟ್ವರ್ಕ್ ಕೂಡ ಇಲ್ಲದೆ ಪರದಾಡುತ್ತಿದ್ದಾರೆ. ಆದರೆ ಅದಿಕಾರಿಗಳು, ಜನಪ್ರತಿನಿಧಿಗಳು ಇವುಗಳನ್ನು ಒದಗಿಸದೇ ಅವರ ಹಕ್ಕುಗಳನ್ನು ಕಸಿದು ಕೊಂಡಿದ್ದಾರೆ ಜೊತೆಗೆ ಅವರ ಅಭಿವೃದ್ಧಿಗೆ ಮೀಸಲಾದ ಹಣದಲ್ಲಿ ಬೇಕಿಲ್ಲದ ಕಡೆಯೆಲ್ಲ ರಸ್ತೆಗಳನ್ನು ಅವೈಜ್ಞಾನಿಕ ಮಾಡಿ ಹಣವನ್ನು ದೋಚುತ್ತಿದ್ದಾರೆ ಎಂದು ಮಾತಂಗ ಮುನಿ ಪರಿವಾರ ಸೇವಾ ಟ್ರಸ್ಟ್ ಗಂಭೀರ ಆರೋಪ ಮಾಡುತ್ತಿದೇ.
ಜನರ ಆರ್ಥಿಕ ಸಾಮಾಜಿಕ ಸಮೀಕ್ಷೆ ಮಾಡುತ್ತಿರುವ ಮಾತಂಗ ಮುನಿ ಪರಿವಾರ ಸೇವಾ ಟ್ರಸ್ಟ್ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಅನೇಕ ಗ್ರಾಮಗಳಿಗೆ ಬೇಟಿ ಕೊಟ್ಟು ಅವರ ಸಮಸ್ಯೆಗಳನ್ನು ಆಲಿಸಿ ಅಧಿಕಾರಿಗಳ ಗಮನಕ್ಕೆ ತರುತ್ತಿದೆ. ಇದೆ ರೀತಿ ತಮ್ಮಡಿಹಳ್ಳಿ ಮತ್ತು ಬಳ್ಳೆಕಟ್ಟೆ ಪ್ರದೇಶಗಳಲ್ಲಿ ಗಣಿಗಾರಿಕೆ ಪ್ರದೇಶಗಳಿಗೆ ಬೇಟಿಕೊಟ್ಟಾಗ ಹಲವು ದಶಕಗಳಿಂದ ಮೂಲಭೂತ ಸೌಕರ್ಯಗಳು ಸಿಗದೆ ಪರದಾಡುತ್ತಿರುವುದು ಕಂಡು ಬಂದಿದೆ.ಚಿಕ್ಕನಾಯಕನಹಳ್ಳಿ ತಾಲೂಕಿನ ಗಣಿಗಾರಿಕೆಗಳಿಂದ ರಾಜ್ಯ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಆದಾಯ ಆಗುತ್ತಿದ್ದರೂ, ಸ್ಥಳೀಯ ಜನರು ಮೂಲಭೂತ ಸೌಕರ್ಯಗಳ ಕೊರತೆಯಿಂದ ಜೀವನ ಹೋರಾಟ ನಡೆಸುತ್ತಿದ್ದಾರೆ.
ಜನಸಂಖ್ಯೆ ಮತ್ತು ಸಮುದಾಯಗಳು
ತಮ್ಮಡಿಹಳ್ಳಿ, ಅಮಾನಿಕರೇ, ಬಳ್ಳೆಕಟ್ಟೆ , ಮರಾಠಿ ಪಾಳ್ಯ (ಯಳನಡು), ಕೋರಗೆರೆ ಸೇರಿ 5–6 ಗ್ರಾಮಗಳಲ್ಲಿ ಒಟ್ಟು ಸುಮಾರು 8,000–10,000 ಜನರು ವಾಸಿಸುತ್ತಿದ್ದಾರೆ.
ಇವರಲ್ಲಿ ಮಾದಿಗ, ಹೊಲೆಯ, ಹಾಗೂ ಇತರ ದಲಿತ ಸಮುದಾಯಗಳು ಪ್ರಮುಖವಾಗಿ ಇದ್ದು, 60% ಜನರು ದಿನಗೂಲಿ ಕೂಲಿಗೆ ಅವಲಂಬಿತರಾಗಿದ್ದಾರೆ.
ಭೂಮಿಯ ಒಡೆತನ ಹೊಂದಿರುವವರು 15–20% ಮಾತ್ರ; ಉಳಿದವರು ಬಾಡಿಗೆ ಮನೆ ,ಗುಡಿಸಲು, ಬೀಳುವ ಹಂತದಲ್ಲಿರುವ ಮನೆಯಲ್ಲಿ, ಟೆಂಟುಗಳಲ್ಲಿ, ಅಕ್ರಮ ವಸತಿಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಮೂಲಭೂತ ಸೌಕರ್ಯಗಳ ಕೊರತೆ
1. ವಸತಿ
ಗ್ರಾಮಗಳಲ್ಲಿ ಕನಿಷ್ಠ 40% ಕುಟುಂಬಗಳಿಗೆ ಶಾಶ್ವತ ಮನೆ ಇಲ್ಲ. ಬೀಳುವ ಹಂತದಲ್ಲಿರುವ ಬಿರುಕು ಬಿಟ್ಟ ರೀತಿಯ ಸೋರುವ ಮನೆಯಲ್ಲೇ 5- 10 ಜನರು ವಾಸಿಸುತ್ತಾ ಪರದಾಡುತ್ತಿದ್ದಾರೆ. ಇನ್ನು ಕೆಲವರು ಗುಡಿಸಲಲ್ಲೇ ಟೆಂಟ್ ಗಳಲ್ಲೇ ಬೀಳುವ ಹಂತದಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದೀರೆ.ಕೆಲವರಿಗೆ
ಬಸವ”ಇಂದಿರಾ, ರಾಜೀವ್ ಗಾಂಧಿ “ಅಂಬೇಡ್ಕರ್ ವಸತಿ” ಯೋಜನೆಗಳಿಂದ ಲಾಭ ದೊರೆತಿವೆ ಅವು ಕೂಡ ಗಣಿಗಾರಿಯಿಂದ ಬಿರುಕು ಬಿಟ್ಟಿವೆ. ಇನ್ನು ಅಲೆಮಾರಿ ಸಮುದಾಯಗಳಿಗೆ, ಮಾದಿಗ ಹಾಗೂ ಹೊಲೆಯ ಸಂಭದಿಂತ ಜಾತಿಗಳಿಗೆ ಮತ್ತು ಮುಸ್ಲಿಂ ಸಮುದಾಯದ ಜನರು ಕನಿಷ್ಠ ದಾಖಲೆಗಳು ಇಲ್ಲದೆ ಮೂಲಭೂತ ಸೌಕರ್ಯಗಳು ಸಿಕ್ಕಿಲ್ಲ. ನಿವೇಶನ ಹಾಗೂ
ಭೂಮಿಯ ದಾಖಲೆಗಳ ಕೊರತೆಯಿಂದ ಗೃಹ/ವಸತಿ ಯೋಜನೆಗಳಿಂದ ಜನರು ವಂಚಿತರಾಗುತ್ತಿದ್ದಾರೆ.
2. ಶೌಚಾಲಯ
“ಸ್ವಚ್ಛ ಭಾರತ” ಯೋಜನೆಯ ಅಡಿಯಲ್ಲಿ ಶೌಚಾಲಯಗಳಿದ್ದರೂ, 80% ಮನೆಗಳಲ್ಲಿ ಇನ್ನೂ ಶೌಚಾಲಯ ಇಲ್ಲ.
ಮಹಿಳೆಯರು ಮತ್ತು ಮಕ್ಕಳು ಬಹಿರಂಗದಲ್ಲಿ ಶೌಚಕ್ರಿಯೆಗೆ ಹೋಗುತ್ತಿರುವುದು ಆರೋಗ್ಯಕ್ಕೆ ಗಂಭೀರ ಸಮಸ್ಯೆ.
3. ಆರೋಗ್ಯ
ಗಣಿಗಾರಿಕೆಯ ಧೂಳಿನಿಂದ 30–35% ಜನರಿಗೆ ಶ್ವಾಸಕೋಶ ಸಂಬಂಧಿ ಕಾಯಿಲೆಗಳು. ಗಣಿ ನಡೆದ ಜಾಗದಲ್ಲಿ ಅಂತರ್ಜಲ ಮಟ್ಟ ಕುಗ್ಗಿ 600 ಅಡಿ ಮೇಲ್ಪಟ್ಟು ಫ್ಲೋರೈಡ್ ಮಿಶ್ರಿತ ನೀರಿನ ಸೇವನೆಯಿಂದ ಕಿಡ್ನಿ ಸಂಬಂಧಿಸಿದತ ರೋಗಗಳು, ಥೈರಾಯ್ಡ್, ಕ್ಯಾನ್ಸರ್ ಇತ್ಯಾದಿ ಕಾಯಿಲೆಗಳಿಂದ ತಮಗೆ ಗೊತ್ತಿಲ್ಲದೆ ಕಡಿಮೆ ವಯಸ್ಸಿಗೆ ಜನರು ಸಾವನ್ನಪ್ಪುತ್ತಿದ್ದಾರೆ ಎನ್ನುವ ಗಂಭೀರ ಅಂಶ ಮಾತಂಗ ಮುನಿ ಪರಿವಾರ ಸೇವಾ ಟ್ರಸ್ಟ್ ಸಮೀಕ್ಷೆ ಹೊರತಂದಿದೆ.
ಹತ್ತಿರದ ಸರ್ಕಾರಿ ಆಸ್ಪತ್ರೆ 8–10 ಕಿಮೀ ದೂರದಲ್ಲಿದ್ದು, ತುರ್ತು ಸೇವೆಗಳ ಕೊರತೆ, ವೈದ್ಯರ ಕೊರತೆ, ಚಿಕಿತ್ಸೆ ಹಾಗೂ ಉಪಕರಣಗಳು ಹಾಗೂ ಔಷಧಿಗಳ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಮಾತಂಗ ಮುನಿ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷರಾದ ಶ್ರೀಮತಿ ತೇಜಾ ಅವರು ಹೇಳಿದರು.
ಅಲೆಮಾರಿ ಹಾಗೂ ಮಾದಿಗ ಸಮುದಾಯಗಳು ಅನೈರ್ಮಲ್ಯ ಹಾಗೂ ಬಡತನದ ಕಾರಣದಿಂದ ತಾಯಿ-ಮಗು ಸಾವು ಪ್ರಮಾಣ ಅಪೌಷ್ಟಿಕತೆ ಹಾಗೂ ಆರೋಗ್ಯ ಸಮಸ್ಯೆಯಿಂದ ಹೆಚ್ಚಿದೆ ಎಂದು ತಿಳಿಸಿದರು.
4. ಶಿಕ್ಷಣ
ಪ್ರಾಥಮಿಕ ಶಾಲೆಗಳಿದ್ದು ನುರಿತ ಶಿಕ್ಷಕರ ಕೊರತೆ, ಶಾಲಾ ಉಪಕರಣಗಳು, ಗ್ರಂಥಾಲಯ, ಮಕ್ಕಳಿಗೆ ಕಲಿಕೆಯ ವಾತಾವರಣ ಇಲ್ಲದೆ 14 ವರ್ಷದ ಒಳಗೆ ದಲಿತ ಮಕ್ಕಳು ಶಾಲೆ ತೊರೆದಿದ್ದಾರೆ. ಇನ್ನು ಬಡತನದ ಕಾರಣದಿಂದ ಕುಟುಂಬದ ಆರ್ಥಿಕ ಸಮಸ್ಯೆಯಿಂದ ಡಿಗ್ರಿ ಮುಗಿಸುವುದಕ್ಕೂ ಹರಸಾಹಸ ಪಡುತ್ತಿದ್ದಾರೆ. ಡಿಗ್ರಿ ಮುಗಿಸಿದ ಮಕ್ಕಳು ಕೂಲಿ ಕಾರ್ಮಿಕರಾಗಿ ಕನಿಷ್ಠ ಸಂಬಳಕ್ಕೆ ಕೆಲಸ ಮಾಡುತಿದ್ದಾರೆ
ಉನ್ನತ ವಿದ್ಯಾಭ್ಯಾಸಕ್ಕೆ ಜಿಲ್ಲೆ ತೊರೆದು ದೂರದ ಶಾಲೆ/ಕಾಲೇಜಿಗೆ ಹೋಗಬೇಕಾಗುತ್ತದೆ.
ಇದರಿಂದ ಹೈಸ್ಕೂಲ್ ಬಿಟ್ಟ ಮಕ್ಕಳ ಪ್ರಮಾಣ 25% ಕ್ಕಿಂತ ಹೆಚ್ಚು. ಪದವಿ ಶಿಕ್ಷಣ ಪಡೆದವರ ಪಟ್ಟಿಯಲ್ಲಿ ಬೆರಳೆಣಿಕೆಯಷ್ಟು ಮಾತ್ರ.
5. ಉದ್ಯೋಗ
70% ಜನರು ದಿನಗೂಲಿ ಗಣಿಗಾರಿಕೆ ಕೆಲಸ ಮಾಡಿದವರಲ್ಲಿ ದಲಿತರೇ ಆಗಿದ್ದಾರೆ.ಇಂದಿಗೂ ಕೂಲಿ ಕೆಲಸಕ್ಕೆ ಅವಲಂಬಿತರು ಅವರೇ. ಅವರಿಗೆ ಇಂದಿಗೂ ಲೇಬರ್ ಕಾರ್ಡ್ ಕೂಡ ಸಿಕ್ಕಿಲ್ಲ. ಸರ್ಕಾರದ ಯೋಜನೆಗಳು ಕುರುಡಾಗಿ ಉಳ್ಳವರ ಪಾಲಾಗುತ್ತಿರುವುದರಲ್ಲಿ ಯಾವುದೇ ಸಂಶಯ ಇಲ್ಲ.
ದಲಿತರಿಗೆ ಶಾಶ್ವತ ಉದ್ಯೋಗ ಸೃಷ್ಟಿಸಲು ಸಾರಂಗ ಪಾಣಿ ಗಣಿಗಾರಿಕೆ ಶುರುವಾದರೆ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಸ್ಥಾಪಿಸಿ ಕಾಯಂ ಉದ್ಯೋಗ ಸೃಷ್ಟಿಸಿ ಆರ್ಥಿಕ ಮಟ್ಟ ಹೆಚ್ಚಿಸಬೇಕು. ಕಾರ್ಮಿಕರ ಭದ್ರತೆ, ಪಿಂಚಣಿ ಒದಗಿಸಬೇಕು.
ಜಮೀನು ಒಡೆತನ ಇಲ್ಲದೆ ಇರುವವರಿಗೆ ಜಮೀನು ಖರೀದಿ ಮಾಡಲು ಅವಕಾಶ ನೀಡಬೇಕು.
ದಲಿತ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಹಣವನ್ನು ಮೀಸಲಿರಿಸಬೇಕು.
1ರಿಂದ 3 ಎಕರೆ ಒಳಗಿರುವ ಸಣ್ಣ ಹಿಡುವಳಿ ರೈತರಿಗೆ ಕೊಳವೆ ಬಾವಿ ಕೊರೆಸಲು ಅನುದಾನ ಬಿಡುಗಡೆ ಮಾಡಬೇಕು.
ಯುವಕರಲ್ಲಿ ನಿರುದ್ಯೋಗದ ಪ್ರಮಾಣ 60% ಕ್ಕಿಂತ ಹೆಚ್ಚು.
ಆದ್ದರಿಂದ ಸ್ವಂತ ಉದ್ಯೋಗ ಮಾಡಲು ನೇರವಾಗಿ ಹಣವನ್ನು ಸ್ವಂತ ಉದ್ಯೋಗ ಮಾಡಲು ನೀಡಬೇಕು.
ಮಹಿಳೆಯರಿಗೆ ಆದ್ಯತೆ ನೀಡಿ ಸ್ಥಳೀಯ ಹಂತದಲ್ಲೇ ಅವರಿಗೆ ತರಬೇತಿ ಶಿಬಿರ ಸ್ಥಾಪಿಸಿ ಸ್ವಾವಲಂಬಿಗಳಾಗಿ ಜೀವನ ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕೆಂದು ಚಿದಾನಂದ ಮೂರ್ತಿ ಕೇಳಿಕೊಂಳ್ಳುತಿದ್ದಾರೆ.
ಸ್ಥಳೀಯರ ಧ್ವನಿ
(70 ವರ್ಷದ) ಜಯಣ್ಣ :
“ಮೂಲಭೂತ ಸೌಕರ್ಯ ಒದಗಿಸದ ಜನಪ್ರತಿನಿಧಿಗಳು ಬದುಕಿದ್ದೂ ಸತ್ತವರಂತೆಯೇ. ಬಡವರ ಧ್ವನಿಯನ್ನು,ಹಕ್ಕುಗಳನ್ನು ಅದಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪ್ರಜಾಪ್ರಭುತ್ವದಲ್ಲಿ ಕಿತ್ತುಕೊಂಡಿದ್ದಾರೆ.”ಎಂದರು.
ಕಮಲಮ್ಮ
“ಗಣಿಗಾರಿಕೆಯಿಂದ ನಮಗೆ ಆರೋಗ್ಯ ಹಾಳಾಗಿದೆ. ನಿವೇಶನ ಹಾಗೂ ದಾಖಲೆಗಳಿಲ್ಲದೆ ವಸತಿ ಸೌಲಭ್ಯ ಸಿಗುತ್ತಿಲ್ಲ.”ಎಂದರು.
ಗಣಿಗಾರಿಕೆಯಿಂದ ಲಾಭ ಯಾರಿಗೆ?
ಗಣಿಗಾರಿಕೆಯಿಂದ ಸರ್ಕಾರಕ್ಕೆ ಪ್ರತಿವರ್ಷ ಕೋಟ್ಯಂತರ ರೂಪಾಯಿ ರಾಯಲ್ಟಿ ಬರುತ್ತದೆ. ಜನರ ಉದ್ದಾರಕ್ಕೆ ಮೀಸಲಿಟ್ಟ ಹಣದಲ್ಲಿ ಗುತ್ತಿಗೆದಾರರಿಗೆ,ಜನಪ್ರತಿನಿಧಿಗಳಿಗೆ,ಅಧಿಕಾರಿಗಳಿಗೆ ನೇರವಾಗಿ ಪರ್ಸಂಟೇಜ್ ಲೆಕ್ಕದಲ್ಲಿ ಹಣ ಹೋಗುತ್ತಿದೆ . ಜನರ ಬದುಕು ಕಾಂಕ್ರಿಟ್ ಅಂತೆ ಬಲಿಷ್ಠವಾಗಿದೆ ಅಭಿವೃದ್ಧಿಯೆಂದರೆ ಕಾಂಕ್ರಿಟ್ (ಜಲ್ಲಿ, ಕಬ್ಬಿಣ, ಮರಳು, ಸಿಮೆಂಟ್ ) ಆಗಿದೆ. ಇದರಿಂದ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ %ಪರ್ಸಂಟೇಜ್ ಲೆಕ್ಕದಲ್ಲಿ ಹಣ ಹೋಗುತ್ತದೆ .ಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮಟ್ಟ ಸುಧಾರಣೆಯಾದರೆ ಯಾವ ಕಮಿಷನ್ ಸಿಗುವುದಿಲ್ಲ ಆದ್ದರಿಂದ ಅವರ್ಯಾರು ಈ ಕೆಲಸಗಳಿಗೆ ಒತ್ತು ನೀಡುವುದಿಲ್ಲ,
ಸ್ಥಳೀಯ ಜನರಿಗೆ ಗಣಿಗಾರಿಕೆಯಿಂದ ಯಾವುದೇ ಸೌಲಭ್ಯ ಸಿಕ್ಕಿಲ್ಲ ಇದಕ್ಕೆಲ್ಲ ಕಾರಣ ಬ್ರಸ್ಟ ಅದಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಂದು ಗುಡುಗಿದರು ಸಾಮಾಜಿಕ ಹೋರಾಟಗಾರ ಮಲ್ಲಿಕಾರ್ಜುನ ಭಟ್ಟರಹಳ್ಳಿ.
ಗಣಿಗಾರಿಕೆಯಿಂದ ಆದಾಯ ,ಸರ್ಕಾರ ಮತ್ತು ಕಂಪನಿಗಳಿಗೆ, ನಷ್ಟ ಮಾತ್ರ ಸ್ಥಳೀಯ ಜನರಿಗೆ ಎಂಬ ವಾಸ್ತವ ಚಿತ್ರಣ ಎದ್ದು ಕಾಣುತ್ತಿದೆ
ಮಾತಂಗ ಮುನಿ ಪರಿವಾರ ಸೇವಾ ಟ್ರಸ್ಟ್ ಹಾಗೂ ಸಾಮಾಜಿಕ ಕಾರ್ಯಕರ್ತರ ಪ್ರಕಾರ, ಗಣಿಗಾರಿಕಾ ಪ್ರದೇಶದ ಲಾಭದ ಕನಿಷ್ಠ 30% ಭಾಗವನ್ನು ಸ್ಥಳೀಯ ಅಭಿವೃದ್ಧಿಗೆ ಮೀಸಲಿಡಬೇಕು.
ಆರೋಗ್ಯ ಕೇಂದ್ರ, ಶಿಕ್ಷಣ ಸೌಲಭ್ಯ, ಕುಡಿಯುವ ನೀರು, ವಸತಿ ಹಕ್ಕುಗಳನ್ನು ಖಚಿತಪಡಿಸುವ ಕಾನೂನು ಬಲಪಡಿಸಬೇಕು.
“ಗಣಿ ಭಾದಿತ ಪ್ರದೇಶಗಳ ಅಭಿವೃದ್ಧಿ ಪ್ರಾಧಿಕಾರ”ವನ್ನು ಸ್ಥಾಪಿಸುವ ಅಗತ್ಯವಿದೆ. ಇದು ಸಂಪೂರ್ಣ ಪಾರದರ್ಶಕವಾಗಿ ಕೆಲಸ ಮಾಡುವ ವ್ಯವಸ್ಥೆ ಕಲ್ಪಿಸಬೇಕು
ಪರಿಹಾರದ ಮಾರ್ಗ
1. ಸರ್ಕಾರಿ ಹಸ್ತಕ್ಷೇಪ ತಕ್ಷಣ ಮೂಲಭೂತ ಸೌಕರ್ಯ ಒದಗಿಸಲು ವಿಶೇಷ ಯೋಜನೆ.
2. ಸಾಮಾಜಿಕ ನ್ಯಾಯ – ದಲಿತರ ಭೂಮಿ ಹಕ್ಕುಗಳನ್ನು ಖಾತ್ರಿಪಡಿಸುವುದು.
3. ಆರೋಗ್ಯ ಮತ್ತು ಶಿಕ್ಷಣ – ತಜ್ಞ ವೈದ್ಯರು ಹಾಗೂ ಶಿಕ್ಷಕರ ನೇಮಕಾತಿ.
4. ಉದ್ಯೋಗ ಭದ್ರತೆ – ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಮತ್ತು ಶಾಶ್ವತ ಉದ್ಯೋಗ.
5. ಗಣಿಗಾರಿಕೆ ಲಾಭ ಹಂಚಿಕೆ – ಸ್ಥಳೀಯ ಅಭಿವೃದ್ಧಿಗೆ ನಿಧಿ ಮೀಸಲು.
6. ದಲಿತ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಹಣವನ್ನು ಮೀಸಲಿರಿಸಬೇಕು.
7. ದಲಿತರ ಉದ್ದಾರಕ್ಕೆ ಪ್ರತ್ಯೇಕ ನಿಗಮ ಅಥವಾ ಪ್ರಾಧಿಕಾರ ಸ್ಥಾಪಿಸಿ ಅವರ ಪುನರ್ವಸತಿ ಕಲ್ಪಿಸಬೇಕು.
ಎಂದು ಮಾತಂಗ ಮುನಿ ಪರಿವಾರ ಸೇವಾ ಟ್ರಸ್ಟ್ ಕೇಳಿಕೊಳ್ಳುತ್ತಿದೆ.
ತುಮಕೂರು ಜಿಲ್ಲೆಯ ಗಣಿ ಭಾದಿತ ಪ್ರದೇಶಗಳು ಇಂದು ಅಭಿವೃದ್ಧಿಯ ನಕ್ಷೆಯಲ್ಲಿ ಮರೆತ ಹಳ್ಳಿಗಳಂತಿವೆ. ಗಣಿಗಾರಿಕೆಯಿಂದ ಸರ್ಕಾರ ಶ್ರೀಮಂತವಾಗುತ್ತಿರುವಾಗ, ಜನ ಮಾತ್ರ ಬಡತನದಲ್ಲಿ ನರಳುತ್ತಿದ್ದಾರೆ. ಇದು ಕೇವಲ ಸಾಮಾಜಿಕ ನ್ಯಾಯದ ಕೊರತೆ ಮಾತ್ರವಲ್ಲ, ಪ್ರಜಾಪ್ರಭುತ್ವದ ಅವಮಾನವೂ ಹೌದು.
ಬಡವರ ಹಕ್ಕುಗಳನ್ನು ಮರೀಚಿಕೆಯಲ್ಲಿಟ್ಟುಬಿಡದೆ, ಬೆಳಕಿಗೆ ತಂದು ನಿಜವಾದ ಅಭಿವೃದ್ಧಿ ತರುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ ಎಂದು ಮಾತಂಗ ಮುನಿ ಪರಿವಾರ ಸೇವಾ ಟ್ರಸ್ಟ್ ಒತ್ತಾಯ.
: ದೇವರಾಜ್ ಚಿಕ್ಕನಾಯಕನಹಳ್ಳಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.