CN Halli: SCSP/TSP ಅನುದಾನ ಬಳಕೆಯಿಲ್ಲದೆ ಶಿಡ್ಲಕಟ್ಟೆ ದಲಿತ ಕೇರಿಗಳಲ್ಲಿ ಅಭಿವೃದ್ಧಿ ಮರೀಚಿಕೆ

JANATAA24 NEWS DESK 

 

CN Halli: SCSP/TSP ಅನುದಾನ ಬಳಕೆಯಿಲ್ಲದೆ ಶಿಡ್ಲಕಟ್ಟೆ ದಲಿತ ಕೇರಿಗಳಲ್ಲಿ ಅಭಿವೃದ್ಧಿ ಮರೀಚಿಕೆ– ಸಮಸ್ಯೆಗಳ ನಡುವೆಯೆ ಜನರ ಬದುಕು.

CN Halli: SCSP/TSP ಅನುದಾನ ಬಳಕೆಯಿಲ್ಲದೆ ಶಿಡ್ಲಕಟ್ಟೆ ದಲಿತ ಕೇರಿಗಳಲ್ಲಿ ಅಭಿವೃದ್ಧಿ ಮರೀಚಿಕೆ

 

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಹುಳಿಯಾರು ಹೋಬಳಿ ಬರಕನಹಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಶಿಡ್ಲಕಟ್ಟೆ ಗ್ರಾಮದ ದಲಿತ ಕೇರಿಗಳು ಮಾದಿಗ ಹಾಗೂ ಹೊಲೆಯ ಸಮುದಾಯದ ಜನರು ಇಂದಿಗೂ ಮೂಲಭೂತ ಸೌಕರ್ಯಗಳ ಕೊರತೆಯಿಂದ ನರಳುತ್ತಿದ್ದಾರೆ.

 

ದಶಕಗಳಿಂದ ಈ ಪ್ರದೇಶದ ಅಭಿವೃದ್ಧಿಗೆ ಮೀಸಲಾಗಿರುವ SCSP/TSP ಅನುದಾನ ಸರಿಯಾಗಿ ಬಳಕೆಯಾಗದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

 

ಮಣ್ಣಿನ ರಸ್ತೆಗಳು, ಚರಂಡಿ ಇಲ್ಲದ ಬೀದಿಗಳು, ವಿದ್ಯುತ್ ಸಂಪರ್ಕದ ಕೊರತೆ, ಮತ್ತು ಕುಸಿದುಹೋಗಿರುವ ಸರ್ಕಾರಿ ಶಾಲೆಯ ಸ್ಥಿತಿ , ನೀರೆ ಬಾರದ JJM ನಲ್ಲಿಗಳು ರಸ್ತೆಯನ್ನು ಬಗೆದು ಅಗೆದು ಮುಚ್ಚದೇಯೇ ಬಿಟ್ಟು ಮಳೆಯ ನೀರು ನಿಂತು ಸೊಳ್ಳೆ ನೊಣಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಇವುಗಳೆಲ್ಲಾ ಊರಿನ ಜನರ ದಿನನಿತ್ಯದ ಕಷ್ಟದ ನಡುವೆ ನಾನ ರೀತಿಯಲ್ಲಿ ರೋಗಗಳಿಗೂ ಕಾರಣವಾಗುತ್ತಿವೆ.

 

ಹದಗೆಟ್ಟ ರಸ್ತೆ ಮತ್ತು ಚರಂಡಿ ಸಮಸ್ಯೆ

 

ಗ್ರಾಮದ ಊರಿನ ರಸ್ತೆಗಳು ಅತ್ಯಂತ ಹದಗೆಟ್ಟ ಸ್ಥಿತಿಯಲ್ಲಿವೆ.

 

ಈ ಎಲ್ಲ ಬೀದಿಗಳಲ್ಲೂ ಚರಂಡಿ ವ್ಯವಸ್ಥೆಯಿಲ್ಲ, ಮಣ್ಣಿನ ರಸ್ತೆಗಳಿಂದ ಸಂಚಾರ ಅಸಾಧ್ಯವಾಗಿದೆ. ಮಳೆ ಬಂದಾಗ ನೀರು ನಿಂತು ಸೊಳ್ಳೆ ನೊಣಗಳ ತೊಂದರೆ, ಹಾಗೂ ಆರೋಗ್ಯ ಸಮಸ್ಯೆ ಉಂಟಾಗಿದೆ ಎಂದು ನಿವಾಸಿಗಳು ದೂರುತಿದ್ದಾರೆ.

 

ವಿದ್ಯುತ್ ಮತ್ತು ಶಿಕ್ಷಣದ ಕೊರತೆ

ಬೀದಿ ಬೆಳಕಿನ ಕೊರತೆಯಿಂದ ರಾತ್ರಿ ಸಮಯದಲ್ಲಿ ಮಕ್ಕಳು ಹಾಗೂ ಹಿರಿಯರು ಸುರಕ್ಷಿತವಾಗಿ ಓಡಾಡಲು ಸಾಧ್ಯವಿಲ್ಲ.

ಊರಿನಲ್ಲಿ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದರೂ ಡಿಜಿಟಲ್ ಗ್ರಂಥಾಲಯ ಇಲ್ಲದಿರುವುದು ಶಿಕ್ಷಣದ ಅಡಚಣೆಯಾಗಿದೆ. ದಲಿತ ಮಕ್ಕಳು ಶಾಲೆ ಬಿದ್ದು ಹಳ್ಳಿಯ ಮರದಡಿಯಲ್ಲಿ ಕುಳಿತು ಪಾಠ ಕೇಳುತ್ತಿದ್ದಾರೆ ಆದರೂ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಸಾಹಸಕ್ಕೆ ಇಳಿದಿಲ್ಲ.

ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಅಂಬೇಡ್ಕರ್ ಭವನ ಅಥವಾ ಜಗಜೀವನರಾಮ್ ಭವನ ನಿರ್ಮಾಣದ ಬೇಡಿಕೆಯೂ ಸ್ಥಳೀಯರಿಂದ ಕೇಳಿ ಬಂದಿದೆ.

 

ಶಾಲೆ ಕುಸಿದರೂ ದೇವಾಲಯಗಳು ಹೊಸದಾಗಿವೆ

 

ಗ್ರಾಮದ ಸರ್ಕಾರಿ ಶಾಲೆ ಬಿದ್ದೋಗಿ ವರ್ಷಗಳು ಕಳೆದರೂ ಹೊಸ ಕಟ್ಟಡದ ನಿರ್ಮಾಣ ಆಗಿಲ್ಲ.

ಆದರೆ ಕೆಲವು ಮಂದಿ ಭಕ್ತಿಯಿಂದ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ದೇವಾಲಯಗಳನ್ನು ಕಟ್ಟಿಕೊಂಡಿದ್ದಾರೆ

“ಅಂಧಭಕ್ತಿಯ ಜೈಕಾರದ ಮಧ್ಯೆ ಶಿಕ್ಷಣ ಮರೆತುಹೋಗಿದೆ” ಎಂದು ಕೆಲ ಹಿರಿಯರು ವಿಷಾದಿಸಿದ್ದಾರೆ.

ಯುವಕರ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯ

 

ಯುವಕರು ಹಬ್ಬ, ಆರ್ಕೆಸ್ಟ್ರಾ, ಕುಡಿತ ಮತ್ತು ಮನರಂಜನೆಯಲ್ಲಿ ತೊಡಗಿಕೊಂಡಿದ್ದಾರೆ;

ಶಿಕ್ಷಿತರಾದವರು ಊರಿನಿಂದ ದೂರವಾಗಿ, “ಇದು ನಮ್ಮ ಊರಲ್ಲ” ಎನ್ನುವಂತಾಗಿದ್ದಾರೆ.

ಐದು ವರ್ಷಗಳಿಂದ ಜನಪ್ರತಿನಿಧಿಗಳು, ಶಾಸಕರು ಊರನ್ನು ಭೇಟಿಯಾಗದೇ,

“ಕಳಪೆ ಕಾಮಗಾರಿಗಳು ಮಾತ್ರ ನಡೆಯುತ್ತಿವೆ” ಎಂಬ ಆರೋಪವೂ ಗ್ರಾಮಸ್ಥರಿಂದ ಕೇಳಿಬಂದಿದೆ.

 

ಸ್ಥಳೀಯರು ಸರ್ಕಾರ ಮತ್ತು ಅಧಿಕಾರಿಗಳಿಗೂ ಮನವಿ ಮಾಡಿದ್ದಾರೆ

“SCSP/TSP ಅನುದಾನವನ್ನು ತಕ್ಷಣ ಬಳಸಿಕೊಂಡು ದಲಿತ ಕೇರಿಯ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಾರಂಭಿಸಬೇಕು.

ರಸ್ತೆ, ಚರಂಡಿ, ವಿದ್ಯುತ್ ಸಂಪರ್ಕ, ಡಿಜಿಟಲ್ ಗ್ರಂಥಾಲಯ ಹಾಗೂ ಅಂಬೇಡ್ಕರ್ ಭವನ ನಿರ್ಮಾಣ ಕಾರ್ಯಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

 

“ನಮ್ಮ ಊರು ನಮ್ಮ ಹೆಮ್ಮೆ. ಆದರೆ ಈ ಹೆಮ್ಮೆಗೆ ತಕ್ಕ ಅಭಿವೃದ್ಧಿ ಇನ್ನೂ ಆಗಿಲ್ಲ.

ಮತದಾನ ಮಾಡುವಾಗ ಯೋಚಿಸಿ, ನಮ್ಮ ಊರಿನ ಕನಸನ್ನು ಸಾಕಾರಗೊಳಿಸುವ ಯುವಕರನ್ನು ಆರಿಸೋಣ” ಎಂದು ಗ್ರಾಮಸ್ಥರು ಹೇಳಿದರು.

 

ವರದಿ:ದೇವರಾಜು R ಚಿಕ್ಕನಾಯಕನಹಳ್ಳಿ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Leave a Reply

Your email address will not be published. Required fields are marked *