JANATAA24 NEWS DESK
CN Halli: ಕುರಿ ಕರೆತರುತ್ತಿದ್ದ ಬಾಲಕನ ಮೇಲೆ ಚಿರತೆ ದಾಳಿ–ಅರಣ್ಯನಾಶ, ಗಣಿಗಾರಿಕೆಯೇ ಮೂಲ ಕಾರಣ.

ಚಿಕ್ಕನಾಯಕನಹಳ್ಳಿ: ಹನುಮಂತನಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ(19/10/2025) ಭೀತಿಯ ಘಟನೆ ನಡೆದಿದೆ. ಕುರಿಗಳನ್ನು ಮೇಯಿಸಿಕೊಂಡು ಮನೆಗೆ ಕರೆತರುತ್ತಿದ್ದ 13 ವರ್ಷದ ಬಾಲಕನ ಮೇಲೆ ಚಿರತೆಯೊಂದು ಹಠಾತ್ ದಾಳಿ ನಡೆಸಿದೆ. ಅದೃಷ್ಟವಶಾತ್ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಬಾಲಕನ ತಾಯಿ ಸ್ವರೂಪ ಅವರು ಸಂಜೆ 4.30ರ ವೇಳೆಗೆ ಕುರಿಗಳನ್ನು ಮೇಯಿಸಿಕೊಂಡು ಗ್ರಾಮದ ಹೊರವಲಯದಲ್ಲಿರುವ ತೋಟದ ಮನೆಗೆ ಕರೆತರುತ್ತಿದ್ದರು. ಆ ಸಮಯದಲ್ಲಿ ಸೂರ್ಯ ಎಂಬ ಬಾಲಕ ಕುರಿಗಳ ಜೊತೆಯಲ್ಲಿದ್ದಾಗ, ಪೊದೆಗಳ ಹಿಂದೆ ಅಡಗಿ ಕುಳಿತಿದ್ದ ಚಿರತೆಯೊಂದು ಅಕಸ್ಮಾತ್ ಹೊರಬಂದು ಬಾಲಕನ ಮೇಲೆ ಜಿಗಿದು, ಮೊಣಕೈ, ಮುಖ ಹಾಗೂ ಕಾಲಿನ ಭಾಗಗಳಲ್ಲಿ ಉಗುರುಗಳಿಂದ ಗಾಯಪಡಿಸಿತು.
ಬಾಲಕನ ಕೂಗು ಕೇಳಿ ಸ್ಥಳೀಯರು ಹಾಗೂ ಕುಟುಂಬದವರು ಕೋಲುಗಳನ್ನು ಹಿಡಿದು ಸ್ಥಳಕ್ಕೆ ಧಾವಿಸಿದ ಕಾರಣ ಚಿರತೆ ಓಡಿ ಪೊದೆಗಳೊಳಗೆ ಅಡಗಿ ಹೋಗಿದೆ. ಗಾಯಗೊಂಡ ಬಾಲಕನನ್ನು ತಕ್ಷಣವೇ ಚಿಕ್ಕನಾಯಕನಹಳ್ಳಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತು. ಘಟನೆಯ ಮಾಹಿತಿ ತಿಳಿದ ಕೂಡಲೇ ಬುಕ್ಕಪಟ್ಟಣ ವಲಯದ ಅರಣ್ಯಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.
CN Halli: ಅರಣ್ಯ ನಾಶ ಮತ್ತು ಗಣಿಗಾರಿಕೆಯ ಪರಿಣಾಮ
ಈ ಘಟನೆಯ ನೇರ ಕಾರಣವಾಗಿ ಅರಣ್ಯ ಪ್ರದೇಶಗಳಲ್ಲಿ ನಡೆಯುತ್ತಿರುವ ಅತಿಯಾದ ಮರ ಕಟಾವು, ಗಣಿಗಾರಿಕೆ ಮತ್ತು ರೈತರು ಕೃಷಿಭೂಮಿ ವಿಸ್ತರಣೆ ಎಂಬುದನ್ನೂ ಗುರುತಿಸಲಾಗಿದೆ. ರೈತರು ಅರಣ್ಯ ಪ್ರದೇಶಗಳನ್ನು ತೆರವುಗೊಳಿಸಿ ಜಮೀನುಗಳಾಗಿ ಪರಿವರ್ತಿಸುತ್ತಿರುವುದರಿಂದ,ಗಣಿಗಾರಿಕೆಯಿಂದ ಕಾಡು ಪ್ರಾಣಿಗಳಿಗೆ ಆಶ್ರಯ ಮತ್ತು ಆಹಾರ ಕಡಿಮೆಯಾಗಿದೆ. ಪರಿಣಾಮವಾಗಿ ಚಿರತೆ, ಕರಡಿ, ಕಾಡುಹಂದಿ, ಜಿಂಕೆ ಮುಂತಾದ ಪ್ರಾಣಿಗಳು ಆಹಾರಕ್ಕಾಗಿ ಜನವಸತಿ ಪ್ರದೇಶಗಳತ್ತ ಬಂದು ಮಾನವ–ಪ್ರಾಣಿ ಸಂಘರ್ಷ ಹೆಚ್ಚಿಸುತ್ತಿವೆ.
ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದು, ತಕ್ಷಣವೇ ಚಿರತೆಯನ್ನು ಸೆರೆಹಿಡಿಯಬೇಕು ಮತ್ತು ಈ ಪ್ರದೇಶದಲ್ಲಿ ಅರಣ್ಯ ಸಂರಕ್ಷಣೆಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ವರದಿ: ದೇವರಾಜ್ ಚಿಕ್ಕನಾಯಕನಹಳ್ಳಿ
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.