Janataa24 NEWS DESK
Bengaluru: ಬೆಂಗಳೂರಿನಲ್ಲಿ ಕುಡಿಯುವ ನೀರು ದುರುಪಯೋಗ ಮಾಡಿದವರಿಂದ ದಂಡ ವಸೂಲಿ.

ಬೆಂಗಳೂರು: ಬೆಂಗಳೂರಿನಲ್ಲಿ ಹಿಂದೆಂದೂ ಕಾಣದಂತಹ ಬರ ಆವರಿಸಿದ್ದು ಈ ಬರಗಾಲದ ಸಂದರ್ಭದಲ್ಲಿ ಕಾವೇರಿ ನೀರನ್ನು ದುರುಪಯೋಗ ಮಾಡಿದ ಸಿಲಿಕಾನ್ ಸಿಟಿ ಮಂದಿಗೆ ಬೆಂಗಳೂರು ನೀರು ಸರಬರಾಜು ಮಂಡಳಿ(BWSSB) ಇದೀಗ ಬಿಗ್ ಶಾಕ್ ನೀಡಿದೆ. ಕುಡಿಯೋ ನೀರನ್ನು ಅನ್ಯ ಕೆಲಸಕ್ಕೆ ಬಳಸಿದ 407 ಮಂದಿಗೆ ಜಲಮಂಡಳಿ ದಂಡ ವಿಧಿಸಿದೆ.
ಬೆಂಗಳೂರು ನಗರದಲ್ಲಿ ಕುಡಿಯುವ ನೀರನ್ನು ಮಿತವಾಗಿ ಬಳಸುವಂತೆ ಜಲಮಂಡಳಿ ಕಟ್ಟು ನಿಟ್ಟಿನ ಸೂಚನೆ ಕೊಟ್ಟಿದೆ.
ಆದರೂ ವಾಹನಗಳ ಸ್ವಚ್ಛತೆಗೆ, ಕೈದೋಟಕ್ಕೆ, ಕಟ್ಟಡ ನಿರ್ಮಾಣಕ್ಕೆ ಬಳಸಬಾರದು. ಆದರೆ ಕಾವೇರಿ ನೀರಲ್ಲಿ ಕಾರು, ಬೈಕ್ ವಾಶ್ ಮಾಡಿದವರಿಗೆ ಬೆಂಗಳೂರು ಜಲ ಮಂಡಳಿ ದಂಡ ಹಾಕಿದೆ. ದಂಡ ಹಾಕಿದ ಹಣದಿಂದಲೇ ಜಲಮಂಡಳಿಗೆ ಬರೋಬ್ಬರಿ 20 ಲಕ್ಷದ 25 ಸಾವಿರ ರೂಪಾಯಿ ಹಣ ಹರಿದು ಬಂದಿದೆ.
ಸಿನಿಮಾ ಮಂದಿರ & ಮಾಲ್‌ಗಳಲ್ಲಿ ಕುಡಿಯುವ ನೀರಿನ ಹೊರೆತು ಇತರೆ ಬಳಕೆಗೂ ಕುಡಿಯುವ ನೀರಿನ ಬಳಕೆಯನ್ನು ಬೆಂಗಳೂರು ಜಲ ಮಂಡಳಿ(BWSSB) ನಿಷೇಧಿಸಿದೆ. ರಸ್ತೆ ನಿರ್ಮಾಣ & ಸ್ವಚ್ಚತೆಗೆ ಕೂಡ ಕುಡಿಯುವ ನೀರನ್ನು ಬಳಸದಂತೆ ಸೂಚನೆ ಕೊಟ್ಟಿತ್ತು. ಇಷ್ಟಾದರೂ ಕಾರು, ಬೈಕ್ ವಾಶ್‌ಗೆ ಬಳಸಿದವರಿಂದ ತಲಾ 5,000 ದಂಡ ವಿಧಿಸಲಾಗುತ್ತಿದೆ. ಬೆಂಗಳೂರು ಜಲಮಂಡಳಿ ಸೂಚನೆಯ ಹೊರತಾಗಿಯೂ ನೀರನ್ನ ದುರುಪಯೋಗ ಮಾಡಿದವರಿಗೆ ದಂಡ ಹಾಕಲಾಗುತ್ತಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾದ್ ಅವರು ತಿಳಿಸಿದ್ದಾರೆ.
Fire Accident: ಅಗ್ನಿ ಅವಘಡ ಒಂದು ಕೋಟಿಗೂ ಅಧಿಕ ಮೌಲ್ಯದ ನಾರಿನ ಫ್ಯಾಕ್ಟರಿ ಭಸ್ಮ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://www.janataa24.com/turuvekere-a-man-who-died-on-the-spot-when-his-c/