Document

Badami: ದಕ್ಷಿಣಾಪಥೇಶ್ವರ ಚಾಲುಕ್ಯರ ಅರಸ ಇಮ್ಮಡಿ ಪುಲಿಕೇಶಿ ಮಹಾರಾಜರ ಪ್ರತಿಮೆ ಪ್ರತಿಷ್ಟಾಪನೆಗೆ ಕಾಲ ಕೂಡಿಬಂತು.

JANATAA24 NEWS DESK 

 

 

Badami: ದಕ್ಷಿಣಾಪಥೇಶ್ವರ ಚಾಲುಕ್ಯರ ಅರಸ ಇಮ್ಮಡಿ ಪುಲಿಕೇಶಿ ಮಹಾರಾಜರ ಪ್ರತಿಮೆ ಪ್ರತಿಷ್ಟಾಪನೆಗೆ ಕಾಲ ಕೂಡಿಬಂತು.

Badami: The time has come to install the statue of Pulikeshi Maharaja, the second king of the Dakshinapatheshwara Chalukyas.

ಬಾದಾಮಿಯಲ್ಲಿ ದಕ್ಷಿಣಾಪಥೇಶ್ವರ ಚಾಲುಕ್ಯರ ಅರಸ ಇಮ್ಮಡಿ ಪುಲಿಕೇಶಿ ಮಹಾರಾಜರ ಮೂರ್ತಿ ಪ್ರತಿಷ್ಟಾಪನೆ ಶ್ರೀ ವೀರ ಪುಲಿಕೇಶಿ ವೃತ್ತ ನಿರ್ಮಾಣಕ್ಕೆ ಕಾಲ ಕೂಡಿ ಬಂತು.

 

ಬಾದಾಮಿ: ಉತ್ತರದದ ಹರ್ಷವರ್ಧನ ರಾಜನನ್ನು ನರ್ಮದಾ ನದಿ ದಂಡೆಯ ಮೇಲೆ ಸೋಲಿಸಿ ದಕ್ಷಿಣಾಪಥೇಶ್ವರ ಎಂಬ ಬಿರುದಾoಕಿತ ಚಾಲುಕ್ಯರ ಅರಸ ಇಮ್ಮಡಿ ಪುಲಿಕೇಶಿ ಮಹಾರಾಜರು ಆಳಿದ ಚಾಲುಕ್ಯರಾಳಿದ ನಾಡು ಬಾದಾಮಿಯಲ್ಲಿ ವೀರ ಪರಾಕ್ರಾಮಿ ಪೃಥ್ವಿವಲ್ಲಭ ನೌಕಾ ನೆಲೆ ಸ್ಥಾಪಿಸಿದ ಪರಾಕ್ರಮಿ.
ವರಾಹ ಲಾಂಛನವಿಟ್ಟುಕೊಂಡು ಗತವೈಭವವನ್ನು ಸಾರಿದ ವಾತಾಪಿಪುರ (ಈಗಿನ ಬಾದಾಮಿ) ರಾಜಧಾನಿಯಲ್ಲಿ ಪರಾಕ್ರಾಮಿ ಇಮ್ಮಡಿ ಪುಲಿಕೇಶಿ ಮಹಾರಾಜರ ಒಂದು ಮೂರ್ತಿಯಾಗಲಿ ಇದುವರೆಗೂ ಇಲ್ಲದೇ ಇದ್ದದ್ದು ವಿಪರ್ಯಾಸದ ಸಂಗತಿಯಾಗಿತ್ತು.

 

ಶ್ರೀ ವೀರಪುಲಿಕೇಶಿ ಪ್ರತಿಮೆ ಪ್ರತಿಷ್ಟಾಪಿಸಲು ಸಾಕಷ್ಟು ಕನ್ನಡಪರ ಸಂಘಟನೆಗಳು ಬಹಳಷ್ಟು ಬಾರಿ ಹೋರಾಟ ನಡೆಸಿದ್ದಾರೆ. ಬಾದಾಮಿಯ ಕಾಲೇಜ್ ರಸ್ತೆಗೆ ಸಾಗುವ ರಾಜಕಾಲುವೆಗೆ ಹತ್ತಿಕೊಂಡೆ ಇರುವ ಹುಬ್ಬಳ್ಳಿ ರಸ್ತೆಗೆ ಸಾಗುವ ವೃತ್ತವನ್ನು ಶ್ರೀ ವೀರಪುಲಿಕೇಶಿ ವೃತ್ತ ಎಂದು ಘೋಷಣೆ ಮಾಡಿ ಆ ವೃತ್ತದಲ್ಲಿ ವೀರಪುಲಿಕೇಶಿ ಭಾವಚಿತ್ರವಿರುವ ಚೌಕಾಕಾರದ ಬಾಕ್ಸ್ ಮಾಡಿ ಶ್ರೀ ವೀರಪುಲಿಕೇಶಿ ವೃತ್ತ ಎಂದು ನಾಮಕರಣ ಮಾಡಿದ್ದು ಆಗಿತ್ತು.

 

ಆದರೆ ಎಷ್ಟೋ ವರ್ಷಗಳಿಂದ ಬಾದಾಮಿಯಲ್ಲಿ ವೀರಪುಲಿಕೆಶಿ ಮುರ್ತಿ ಇಲ್ಲದ್ದು ನೋಡಿ ಪ್ರವಾಸಿಗರಿಗೆ ಆಶ್ಚರ್ಯ ಎನಿಸುತ್ತಿತ್ತು. ಇದನ್ನೆಲ್ಲಾ ನೋಡಿದ ಪ್ರವಾಸಿಗರೂ ಇಲ್ಲಿನ ಶಾಸಕ ಮತ್ತು ಸಂಸದರು ಹಾಗೂ ಅಧಿಕಾರಿಗಳನ್ನು ಕೂಡ ತರಾಟೆಗೆ ತೆಗೆದುಕೊಂಡದ್ದೂ ಆಗಿದೆ.

 

ಇಷ್ಟೆಲ್ಲ ಆದ ನಂತರವೂ ನೆನೆಗುದಿಗೆ ಬಿದ್ದಿದ್ದ ಚಾಲುಕ್ಯ ಉತ್ಸವಕ್ಕೆ ಮತ್ತೆ ಚಾಲನೆ ದೊರೆತಿದ್ದು ಬಾದಾಮಿ ಮತಕ್ಷೇತ್ರದ ಶಾಸಕರಾದ ಭೀಮಸೇನ ಚಿಮ್ಮನಕಟ್ಟಿಯವರು ಈ ತಿಂಗಳು 19 ನೇ ತಾರೀಖಿನಿಂದ 3 ದಿನಗಳ ಕಾಲ ನಡೆಯುವ ಚಾಲುಕ್ಯ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಆಗಮಿಸಿ ಶ್ರೀ ವೀರ ಪುಲಿಕೇಶಿ ವೃತ್ತದಲ್ಲಿ ಪ್ರತಿಮೆಗೆ ಶಂಕು ಸ್ಥಾಪನೆ ನೆರವೇರಿಸಿ ಚಾಲುಕ್ಯ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.

 

ಈ ಕಾರಣಕ್ಕಾಗಿಯೇ ಶ್ರೀ ವೀರಪುಲಿಕೇಶಿ ವೃತ್ತದಲ್ಲಿ ಅನಧಿಕೃತ ಕಟ್ಟಡಗಳನ್ನು ನಿನ್ನೆ ರಾತ್ರಿ ಜೆ. ಸಿ. ಬಿ. ಯಂತ್ರದಿಂದ ಕೆಡವಿ ತೆರವುಗೊಳಿಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಗಮನಕ್ಕೆ ನಗರ ಸಿದ್ದಗೊಳ್ಳುತ್ತಿದ್ದು ಬಾದಾಮಿಯಲ್ಲಿ ಮುಖ್ಯ ರಸ್ತೆಗಳಲ್ಲಿ ಅನಧಿಕೃತ ಕಟ್ಟಡಗಳನ್ನು ಮಾಡಿಕೊಂಡು ರಸ್ತೆಯಲ್ಲಿ ವಾಹನಗಳು ಓಡಾಡೋದಕ್ಕೂ ದುಷ್ಟರವಾಗೋ ಮಟ್ಟಿಗೆ ಟ್ರಾಫಿಕ್ ಜಾಮ್ ಆಗುತ್ತೆ ಎನ್ನೋದೂ ಸಾರ್ವಜನಿಕರ ಸಂಘಟನೆ ಮುಖಂಡರುಗಳು ಮಾಧ್ಯಮಗಳ ಮೂಲಕ ಆರೋಪಿಸಿದ್ದಾರೆ.

 

ವರದಿ: ರಾಜೇಶ್. ಎಸ್. ದೇಸಾಯಿ ಬಾಗಲಕೋಟೆ.

 

 

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *