Janataa24 NEWS DESK
Badami : ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2.90 ಲಕ್ಷ ಹಣ ವಶಪಡಿಸಿಕೊಂಡ ಬಾದಾಮಿ ಪಿಎಸ್ಐ

ಬಾದಾಮಿ: ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆ ಕಟ್ಟು ನಿಟ್ಟಿನ ಕರ್ತವ್ಯದಲ್ಲಿರುವ ಪೋಲಿಸ್ ಸಿಬ್ಬಂದಿ. ಬಾದಾಮಿ ತಾಲೂಕಿನ ಜಾಲಿಹಾಳ ಚೆಕ್ ಪೋಸ್ಟ್ ನಲ್ಲಿ ದಾಖಲೆರಹಿತ ಎರಡು ಲಕ್ಷ ತೊಂಬತ್ತು ಸಾವಿರ ಹಣವನ್ನು ವಶಪಡಿಸಿಕೊಂಡ ಬಾದಾಮಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ವಿಠಲ ನಾಯಕ ಹಾಗೂ ಸಿಬ್ಬಂದಿ.
ಲೋಕಸಭೆ ಚುನಾವಣೆ(Lokasabha Election) ಘೋಷಣೆಯಾದ ಹಿನ್ನೆಲೆ ಪೋಲಿಸರು ಸಿಸಿ ಕ್ಯಾಮರಗಳಂತೆ ಎಲ್ಲಾಕಡೆ ಕಣ್ಣಾಯಿಸುತ್ತಿದ್ದಾರೆ. ದಾಖಲೆಯಿಲ್ಲದೆ ಅಧಿಕ ಮೊತ್ತದ ಹಣ ಸಾಗಿಸುವುದು ಹೆಚ್ಚಿನ ಪ್ರಮಾಣದಲ್ಲಿ ಸೀರೆ ಕುಕ್ಕರ್ ಮತ್ತಿತರೆ ವಸ್ತುಗಳನ್ನು ಕಂಡು ಬಂದ ಮಾಹಿತಿ ಮೇರೆಗೆ ಪೋಲಿಸ್ ಇಲಾಖೆಗೆ ದಾಳಿ ಮಾಡಿ ಬಂಧಿಸುತ್ತಿದ್ದಾರೆ.
ಲೋಕಸಭಾ ಚುನಾವಣೆ ಶುರುವಾಗುತ್ತಿದ್ದಂತೆ ದಾಖಲೆ ರಹಿತ ಹಣ ಸೀರೆ ಹೀಗೆ ಸಾಕಷ್ಟು ಪ್ರಮಾಣದಲ್ಲಿ ಸಾಗಟ ಆಗುತ್ತೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಜಾಲಿಹಾಳ ಚೆಕ್ ಪೋಸ್ಟ್ ನಲ್ಲಿ ಇಂದು ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2,90,000 ಎರಡು ಲಕ್ಷ ತೊಂಬತ್ತು ಸಾವಿರ ರೂಪಾಯಿ ಹಣವನ್ನು ಬಾದಾಮಿ ಪೊಲೀಸ್ ಠಾಣೆಯ ಪಿ. ಎಸ್. ಐ. ವಿಠಲ್ ನಾಯಕ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ
ಪೊಲೀಸ್ ಸಿಬ್ಬಂದಿ ಮಹಂತೇಶ್ ಖಾನಾಪೂರ, ಕೆರೂಟಗಿ ಸೇರಿ ಕಾರ್ಯಚರಣೆ ನಡೆಸಿ ಪರಿಶೀಲಿಸಿ ಅಕ್ರಮ ಹಣ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಪಿ ಎಸ್ ಐ ವಿಠಲ್ ಕಾರ್ಯಕ್ಷಮತೆಗೆ ಪ್ರಶಂಸೆ
ವ್ಯಕ್ತವಾಗಿದೆ.
ಚುನಾವಣೆ ಇರುವ ಕಾರಣ ಪೋಲಿಸ್ ಇಲಾಖೆ ತುಂಬಾ ಚುರುಕಾಗಿ ಅಕ್ರಮಗಳನ್ನು ತಡೆಯುವಲ್ಲಿ ಶ್ರಮಿಸುತ್ತಿದೆ. ಪೋಲಿಸರ ಈ ಪರಿಶ್ರಮ ಕರ್ತವ್ಯ ಪ್ರಜ್ಞೆ ಶಾಜ್ಞನೀಯ.
ವರದಿ: ರಾಜೇಶ್.ಎಸ್. ದೇಸಾಯಿ ಬಾಗಲಕೋಟೆ
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv
2024 IPL : ಮುಂಬೈ ನಾಯಕ ಪಾಂಡ್ಯನಿಂದ ಮಾಜಿ ನಾಯಕ ಹಿಟ್ ಮ್ಯಾನ್ ರೋಹಿತ್ ಗೆ ಪಿಲ್ಡಿಂಗ್ ಕ್ಲಾಸ್.