Janataa24 NEWS DESK
DATAMER AI ಎಂಬ ಆನ್ಲೈನ್ ಆಪ್ ನಿಂದ ಕೋಟಿ ಕೋಟಿ ಹಣ ವಂಚನೆ.
ಗುಬ್ಬಿ: ತಾಲೂಕಿನ ಸಿ ಎಸ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಲೂರು ಗ್ರಾಮದಲ್ಲಿ ಡಾಟಾ ಮೀರ್ ಎ,ಐ, ಎಂಬ ಆಪ್ ನಿಂದ ಸಾರ್ವಜನಿಕರಿಗೆ ಕೋಟಿ ಕೋಟಿ ಹಣ ವಂಚನೆ ಆಗಿರುವ ಘಟನೆ ಬೆಳಕಿಗೆ ಬಂದಿದೆ.
ಕಲ್ಲೂರು ಗ್ರಾಮದಲ್ಲಿ ವಂಚಕರ ತಂಡ ವಾಟ್ಸಪ್ ಗ್ರೂಪ್ ರಚಿಸಿ ಡಾಟಾ ಮೀರ್ ಎ ಐ ಎಂಬ ಆಪ್ ಡೌನ್ಲೋಡ್ ಮಾಡಲು ಸೂಚಿಸಿ ಹಣದ ಹೂಡಿಕೆ ಮಾಡಿಸಿ ನಿತ್ಯ ಹಣ ಬರುವುದಾಗಿ ತಿಳಿಸಿದ್ದಾರೆ.
ಜನತೆಯು ಸುಮಾರು 500 ರಿಂದ 600 ರೂ ಹೂಡಿಕೆ ಆರಂಭಿಸಿ ಲಕ್ಷಗಟ್ಟಲೆ ಹಣವನ್ನು ಹೂಡಿಕೆ ಮಾಡಿದ್ದಾರೆ.
ಡಾಟಾ ಮೀರ್ ಎ ಐ ಈ ಹುಡುಗಿಯ ಹಣಕ್ಕೆ 80 ದಿನಗಳಲ್ಲಿ ಮೂರು ಪಟ್ಟು ಹಣ ನೀಡುವ ಆಸೆ ಮೂಡಿಸಿದೆ.
ವಾಟ್ಸಪ್ ಗ್ರೂಪ್ ರಚಿಸಿ ಸುಮಾರು 600 ರಿಂದ 700ಕ್ಕೂ ಹೆಚ್ಚು ಜನರನ್ನು ಡಾಟಾ ಮೀರ್ ಎ ಐ ಆಪ್ ಗೆ ಸೇರಿಸಿದರೆ 10% ಪರ್ಸೆಂಟ್ ಕಮಿಷನ್ ಕೊಡುವುದಾಗಿ ನಂಬಿಸಿ ಈ ಕಮಿಷನ್ ಆಸೆಗಾಗಿ ಮುಗ್ಧ ಜನರು ಬಲಿಯಾಗಿದ್ದಾರೆ.
ಬೆಂಗಳೂರಿನಲ್ಲಿ ವಾಸವಾಗಿರುವ ಕಲ್ಲೂರು ಗ್ರಾಮದ ಮೂರು ಜನರನ್ನು ಚೈನ್ ಲಿಂಕ್ ಪ್ರಚಾರ ಮಾಡಿ ನಂತರ ಕೆಲವರನ್ನು ಬೆಂಗಳೂರಿನಲ್ಲಿ ಮೀಟಿಂಗ್ ನಡೆಸಿ ದೊಡ್ಡ ಮೊತ್ತದ ಹಣ ಬರುವುದಾಗಿ ನಂಬಿಸಿದ್ದಾರೆ.
ಇದನ್ನು ನಂಬಿದ ಜನರು ಹಣ ಹೂಡಿಕೆ ಮಾಡಿದ್ದಾರೆ ಹಣವು ಸಂಗ್ರಹವಾದ ಬಳಿಕ ಡಾಟಾಮೀರ್ ಎಐ ಆಪ್ ಅನ್ನು ರದ್ದು ಮಾಡಿ ಪೂರ್ವ ವ್ಯವಸ್ಥಿತವಾಗಿ ನಾಪತ್ತೆಯಾಗಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಸಿಎಸ್ ಪುರ ಪೊಲೀಸ್ ಠಾಣೆಯಲ್ಲಿ ವಂಚನೆಗೆ ಒಳಗಾದ 40 ರಿಂದ 50 ಮಂದಿ ದೂರು ನೀಡಿದ್ದಾರೆ.
ಡಿವೈಎಸ್ಪಿ ಶೇಖರ್ ಮಾತನಾಡಿ ಈ ಜಾಲವು ರಾಜ್ಯದಲ್ಲಿಡೆ ದೋಖಾ ಎಸುಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಈ ಪ್ರಕರಣದ ಬಗ್ಗೆ ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡು ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.
ವರದಿ: ಶ್ರೀಕಾಂತ್ ಗುಬ್ಬಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.instagram.com/janataa24?igsh=aXM0Ym9zb2Y2YTRn
https://www.janataa24.com/pavagada-nss-students-can-learn-rural-values/