Janataa24 NEWS DESK
Pavagada: ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಖಂಡಿಸಿ ತಹಶೀಲ್ದಾರ್ ಗೆ ಮನವಿ.
ಪಾವಗಡ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯವನ್ನು ಖಂಡಿಸಿ ಮಾನವ ಹಕ್ಕುಗಳ ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಮಹಿಳಾ ಘಟಕದಿಂದ ತಹಶೀಲ್ದಾರ್ ರವರಿಗೆ ಮನವಿ.
ಪಾವಗಡ: ಶನಿವಾರ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ತಾಲೂಕು ಅಧ್ಯಕ್ಷ ಎನ್. ನಾಗಮಣಿ ಮಾತನಾಡಿ ಕರ್ನಾಟಕ ಸರ್ಕಾರ ಮಾನ್ಯ ಗೃಹ ಸಚಿವರ “ಕ್ಷೇತ್ರದಲ್ಲಿ ನಡೆದಂತಹ ಮಧುಗಿರಿ ಡಿ.ವೈ.ಎಸ್.ಪಿ. ರಾಮಚಂದ್ರಪ್ಪ ನಡೆಸಿದಂತಹ ಅಮಾನವೀಯ ಕೃತ್ಯವಾದಲೈಂಗಿಕ ದೌರ್ಜನ್ಯವು ನವ ಸಮಾಜ ತಲೆ ತಗ್ಗಿಸುವಂತಾಗಿದೆ. ದೂರು ನೀಡಲು ಬಂದ ಮಹಿಳೆಯೊಂದಿಗೆ ಡಿ.ವೈ.ಎಸ್.ಪಿ. ಅಸಭ್ಯವಾಗಿ ವರ್ತಿಸಿದ್ದು ಸಮಾಜವನ್ನು ರಕ್ಷಿಸುವವರೇ ಸಮಾಜದ ಭಕ್ಷಕರಾದರೆ ರಕ್ಷಣೆಯ ಹೊಣೆ ಯಾರದು ಎನ್ನುವಂತಿದೆ.
ಈ ಹಿಂದೆಯೂ ಸಹ ಸೋಲಾರ್ ವಿಚಾರವಾಗಿ ತಾಲೂಕಿನ ಕಡಪಲ ಕೆರೆ ಗ್ರಾಮದ ಮಹಿಳೆ ಮೇಲೆ ಇದೇ ಡಿವೈಎಸ್ಪಿ ರಾಮಚಂದ್ರಪ್ಪ ಅವರು ಅಲ್ಲೇ ಮಾಡಿ ಆಕೆಯ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ ಘಟನೆಯು ಸಹ ಈ ಭಾಗದಲ್ಲಿ ಸಂಭವಿಸಿತ್ತು.
ಇಂತಹ ಕೃತ್ಯಗಳು ಮತ್ತೆ ಮತ್ತೆ ಮರಕುಳಿಸಿದಂತೆ ತಾಲ್ಲೂಕಿನ ಸರ್ಕಾರಿ ಕಛೇರಿಗಳಲ್ಲಿ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಮಹಿಳೆಯರಿಗೆ ರಕ್ಷಣೆ ನೀಡುವಂತಹ ವ್ಯವಸ್ಥೆ ಕಲ್ಪಿಸಬೇಕೆಂದು, ಹಾಗೂ ಮುಂದಿನ ದಿನಗಳಲ್ಲಿ ಇಂತಹ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕೆಂದು ಈ ಮೂಲಕ ತಮ್ಮಲ್ಲಿ ಕೋರಲಾಗಿದೆ.
ಈ ವೇಳೆ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಮಹಿಳಾ ಸದಸ್ಯರಾದಂತಹ ಪಿ.ಶೋಭರಾಣಿ.ಲತಾ. ನೇತ್ರ. ಶೃತಿಕೀರ್ತಿ. ಇತರರಿದ್ದರು.
ವರದಿ: ಇಮ್ರಾನ್ ಉಲ್ಲಾ. ಪಾವಗಡ
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.