Children’s: ಮಕ್ಕಳಿಗೆ ವಿದ್ಯೆಯ ಜೊತೆ ಕಲೆ, ಸಾಂಸ್ಕೃತಿಕ ವಿಷಯ ಆಗತ್ಯ

Janataa24 NEWS DESK

ಗುಬ್ಬಿ:  ಮಕ್ಕಳು(Childrens) ವಿದ್ಯೆಯನ್ನು ಒಂದೇ ಗುರಿಯಾಗಿಟ್ಟುಕೊಳ್ಳದೆ ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ಮಾತ್ರ ಯಶಸ್ಸು ಸಾಧ್ಯ ಎಂದು ಗೊಲ್ಲಹಳ್ಳಿ ಮಠದ ಶ್ರೀ ಶ್ರೀ ವಿಭವ ವಿದ್ಯಾಶಂಕರ ಸ್ವಾಮೀಜಿ(Vidyashankara Swamiji) ವಿದ್ಯಾರ್ಥಿಗಳಿಗೆ ತಿಳಿಸಿದರು.

image editor output image 1602158200 17087549196084106429807283081629
ಜ್ಯೋತಿ ಬೆಳಗುವ ಮೂಲಕ ಉದ್ಘಾಟನೆ ಮಾಡುತ್ತಿರುವ ಶ್ರೀಶ್ರಿ ವಿಭವ ವಿದ್ಯಾಶಂಕರ ಸ್ವಾಮಿಜಿ(Vidyashankara Swamiji) ಗೊಲ್ಲಹಳ್ಳಿ ಮಠ.

ಗುಬ್ಬಿ ತಾಲ್ಲೂಕಿನ ಕಡಬ ಹೋಬಳಿ ಮಾರಶೆಟ್ಟಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಶಾಲಾ ವಾರ್ಷಿಕೋತ್ಸವದ ದಿವ್ಯ ಸಾನಿಧ್ಯ ವಹಿಸಿ ಇತ್ತೀಚಿನ ದಿನಗಳಲ್ಲಿ ಪೋಷಕರು ಆಂಗ್ಲ ಮಾಧ್ಯಮದ ಶಾಲೆಗಳಿಗೆ ಮಾರುಹೋಗುತ್ತಿದ್ದಾರೆ ಸರ್ಕಾರಿ ಶಾಲೆಯಲ್ಲಿ ಸಕಲ ಸೌಲಭ್ಯಗಳು ಸಿಗುತ್ತಿರುವಾಗ ಆಂಗ್ಲ ಮಾಧ್ಯಮ ಖಾಸಗಿ ಶಾಲೆಗಳ ಕದ ತಟ್ಟುವ ಅವಶ್ಯಕತೆ ಪೋಷಕರಿಕೆ ಏಕೆ ಎಂದು ಮಾತನಾಡಿದರು.

ನೃತ್ಯ ಪ್ರದರ್ಶನ

ವಿದ್ಯಾರ್ಥಿಗಳು ಮತ್ತು ಪೋಷಕರು ವಿದ್ಯೆ ಒಂದನ್ನೇ ಗುರಿಯಾಗಿ ಇಟ್ಟುಕೊಳ್ಳಬಾರದು ಕಲೆ, ಸಾಂಸ್ಕೃತಿಕ,ಕ್ರೀಡೆ, ಮತ್ತು ಇನ್ನೂ ಹಲವಾರು ಅವಕಾಶಗಳು ಅವುಗಳ ಕುರಿತು ನೈತಿಕತೆಯನ್ನು ಪೋಷಕರು ಮಕ್ಕಳಿಗೆ ಬೋಧಿಸಬೇಕು .


ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರ ಆಸಕ್ತಿದಾಯಕ ವಿಷಯಗಳ ಬಗ್ಗೆ ಪ್ರೋತ್ಸಾಹ ನೀಡಿದರೆ ಉನ್ನತ ದೈತ್ಯ ಪ್ರತಿಭೆಗಳಾಗಿ ಹೊರಹೊಮ್ಮುತ್ತಾರೆ.

ಸಾಂಸ್ಕೃತಿಕ ಕಾರ್ಯಕ್ರಮಗಳು

ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಗ್ರಾಮೀಣ ಕಲೆ ಮತ್ತು ಕ್ರೀಡೆಗೆ ಪ್ರೋತ್ಸಾಹ ನೀಡದೆ ವಿದ್ಯೆ ಒಂದನ್ನೇ ಗುರಿಯಾಗಿಸಿಕೊಂಡಿದ್ದಾರೆ. ಗ್ರಾಮೀಣ ಭಾಗದ ದೇಸಿ ಕ್ರೀಡೆಗಳನ್ನು ಸರ್ಕಾರಿ ಶಾಲೆಗಳಲ್ಲಿ ಮಾತ್ರ ಕಾಣಬಹುದಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಸರ್ಕಾರಿ ಶಾಲೆಯಲ್ಲಿ ನುರಿತ ಅಧ್ಯಾಪಕರ ವರ್ಗವಿದ್ದು ಮಕ್ಕಳು ಇದನ್ನು ಸದುಪಯೋಗಪಡಿಸಿಕೊಂಡು ಉನ್ನತ ಸ್ಥಾನಮಾನ ಕಲ್ಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಗ್ರಾ ಪಂ ಸದಸ್ಯ ಚಂದ್ರಶೇಖರ್ ಮಾತನಾಡಿ ಗ್ರಾಮೀಣ ಭಾಗದಲ್ಲಿ ಅತ್ಯಂತ ಪ್ರತಿಭಾವಂತ ಮಕ್ಕಳಿದ್ದು ಅವರ ಕಲೆಯನ್ನು ಮತ್ತು ಪ್ರತಿಭೆಯನ್ನು ಅನಾವರಣಗೊಳಿಸಲು ಇಂತಹ ವೇದಿಕೆಗಳು ಸಾಕ್ಷಿಯಾಗುತ್ತವೆ. ಮಕ್ಕಳು ವಿದ್ಯೆ ಜೊತೆಗೆ ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಗ್ರಾಮೀಣ ಭಾಗದ ಮಕ್ಕಳಲ್ಲಿ ಅತ್ಯಂತ ಪ್ರತಿಭಾವಂತ ಮಕ್ಕಳಿದ್ದು ಇಂತಹ ಪ್ರತಿಭೆಗಳನ್ನು ಗುರುತಿಸಿ ಪೋಷಕರು ಪ್ರೋತ್ಸಾಹ ನೀಡಿದರೆ ಸಮಾಜದಲ್ಲಿ ಉನ್ನತ ಭವಿಷ್ಯವನ್ನು ಹೊಂದುತ್ತಾರೆ ಎಂದು ತಿಳಿಸಿದರು.

ಶಾಲಾ ಮಕ್ಕಳಿಂದ ವಾರ್ಷಿಕೋತ್ಸವ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಸಿಆರ್ ಪಿ ಲಕ್ಷ್ಮಿಕಾಂತ್, ಗ್ರಾ ಪಂ,ಸದಸ್ಯರಾದ ನಯನ ಉಮೇಶ್, ತಿಮ್ಮರಾಜು,
ಮುಖಂಡರಾದ ದಯಾನಂದ್, ಮಾರಶೆಟ್ಟಿಹಳ್ಳಿ ಬಸವರಾಜು, ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಶಾಲಾ ಮಕ್ಕಳು ಹಾಗೂ ಶಿಕ್ಷಕರು ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರು ಹಾಜರಿದ್ದರು.

ವರದಿ : ಶ್ರೀಕಾಂತ್ ಎಂ ಎನ್ ಗುಬ್ಬಿ

https://youtube.com/@janataa24?si=XsFcych2GMH0O6Gv

Leave a Reply

Your email address will not be published. Required fields are marked *