Janataa24 NEWS DESK
ತುರುವೇಕೆರೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮೂರು ದಿನಗಳ ಹಿಂದೆ ಅಷ್ಟೇ ಪತ್ರಿಕಾಗೋಷ್ಠಿ ನಡೆಸಿದ ಶಾಸಕ ಎಂ ಟಿ ಕೃಷ್ಣಪ್ಪ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿ, ಕಟ್ಟ ಕಡೆ ದಟ್ಟ ದರಿದ್ರ ಸರ್ಕಾರ ಕಾಂಗ್ರೆಸ್ ಸರ್ಕಾರ ಎಂದು ಆರೋಪ ಮಾಡಿದ್ದರು.

ಇಂದು ಕೂಡ ಪತ್ರಿಕಾ ಮಾಧ್ಯಮಗೋಷ್ಠಿ ನಡೆಸಿದ ಅವರು, ಕಾಡುಗೊಲ್ಲ ಸಮುದಾಯವನ್ನು ಎಸ್ ಟಿ ಸಮುದಾಯಕ್ಕೆ ಸೇರಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು, ಮುಂದುವರೆದು ಮಾತನಾಡಿದ ಅವರು ಈಗಾಗಲೇ ಈ ಹಿಂದೆ ಇದ್ದಂತಹ ಬಿಜೆಪಿ ಸರ್ಕಾರ ಇರುವಾಗಲೇ ಈ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕೂಡ ನೀಡಲಾಗಿದ್ದು, ಇದರ ವಿಚಾರವಾಗಿ ಪಾರ್ಲಿಮೆಂಟ್ ನಲ್ಲಿ ಕೂಡ ಚರ್ಚೆ ಮಾಡಿದ್ದು,
ಮಾನ್ಯ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಇದಕ್ಕೆ ಸಂಬಂಧಪಟ್ಟ ಸಚಿವರಾದ ಅರ್ಜುನ್ ಮುಂಡ ಅವರ ಜೊತೆಗೆ ಚರ್ಚಿಸಿ, ಕಾಡುಗೊಲ್ಲ ಸಮುದಾಯವನ್ನು ಎಸ್ ಟಿ ಸಮುದಾಯಕ್ಕೆ ಸೇರಿಸಬೇಕೆಂದು ಚರ್ಚೆ ಮಾಡಿದ್ದು,
ಇನ್ನೇನು ಕೆಲವೇ ದಿನಗಳಲ್ಲಿ ಅದು ಕೂಡ ಸಾಧ್ಯವಾಗುವ ಸಂಭವ ಕೂಡ ಇದೆ, ಇದರ ನಡುವೆ ಕಾಂಗ್ರೆಸ್ ನ ಕೆಲವು ಎಸ್ ಟಿ ನಾಯಕರು ಇದಕ್ಕೆ ವಿರೋಧ ಮಾಡುತ್ತಿರುವುದು ಇದು ಸರಿಯಲ್ಲ,ಈ ಕಾಂಗ್ರೆಸ್ ಸರ್ಕಾರದ ಸಂಸ್ಕೃತಿ ಹಿಂದುಳಿದವರನ್ನು ತುಳಿಯುವುದೇ ಇವರ ಕೆಲಸವಾಗಿದೆ ಎಂದು ನೇರವಾಗಿ ಆರೋಪಿಸಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಮತ್ತು ಮುಖಂಡ ದೊಡ್ಡೇಗೌಡ, ತಿಮ್ಮೇಗೌಡ, ಮಧು, ಲಕ್ಷ್ಮಣ್ ಗೌಡ, ಮಂಗಿಕುಪ್ಪೆ ಬಸವರಾಜ್, ಇನ್ನು ಅನೇಕ ಮುಖಂಡರುಗಳು ಉಪಸ್ಥಿತರಿದ್ದರು.
ವರದಿ
ತುರುವೇಕೆರೆ: ಮಂಜುನಾಥ್