ದಲಿತ ಸಂಘರ್ಷ ಸಮಿತಿಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಫೆ. 11 ಬೃಹತ್ ಸಮಾವೇಶ.

Janataa24 NEWS DESK

IMG 20240117 WA0010



ಗುಬ್ಬಿ: ದಲಿತರ ಮೇಲೆ ದೌರ್ಜನ್ಯವನ್ನು ಖಂಡಿಸಿ ನೊಂದವರಿಗೆ, ಶೋಷಣೆಗೆ, ದಬ್ಬಾಳಿಕೆಗೆ, ಅನ್ಯಾಯಕ್ಕೆ,ಒಳಗಾದವರಿಗೆ ಒಳಗಾದವರಿಗೆ ನ್ಯಾಯ ಕೊಡಿಸುತ್ತಾ ಸಾಗಿರುವ ದಲಿತ ಸಂಘರ್ಷ ಸಮಿತಿಗೆ 50 ವರ್ಷ ಫೆಬ್ರವರಿ 11ರಂದು ತುಮಕೂರಿನಲ್ಲಿ ಬೃಹತ್ ಸಮಾವೇಶ ಏರ್ಪಡಿಸಲಾಗಿದೆ ಎಂದು ದ ಸಂ ಸಮಿತಿ ಕುಂದುರ್ ತಿಮ್ಮಯ್ಯ ತಿಳಿಸಿದರು.


ಪಟ್ಟಣದ ಪ್ರವಾಸಿ ಮಂದಿರದಲ್ಲಿ ದ ಸಂ ಸ ಗುಬ್ಬಿ ಶಾಖೆಯಲ್ಲಿ ಮಾಸಿಕ ಸಭೆ ನಡೆಸಿ ಮಾತನಾಡಿದವರು ದಲಿತರ ಮೇಲಿನ ದೌರ್ಜನ್ಯವನ್ನು ಖಂಡಿಸಿ ನಿರಂತರವಾಗಿ ಸಮಾಜದಲ್ಲಿ ನೊಂದವರ, ಶೋಷಣೆಗೆ ಒಳಗಾದವರ, ದಬ್ಬಾಳಿಕೆಗೆ ಒಳಗಾದವರ, ಅನ್ಯಾಯಕ್ಕೆ ಒಳಗಾದವರ, ಪರವಾಗಿ ದೀನ ದಲಿತರ ಪರವಾಗಿ ಕರ್ಯೋಣ್ಮುಖವಾಗಿ ಕೆಲಸ ಮಾಡುತ್ತಾ ಬಂದಿದೆ.



ದಲಿತ ಸಂಘರ್ಷ ಸಮಿತಿ ಯನ್ನು ಪ್ರೊ.ಬಿ. ಕೃಷ್ಣಪ್ಪನವರು 1974-1975ರಲ್ಲಿ ಪ್ರಾರಂಭಿಸಿದರು ಅಂದಿನಿಂದ ಇಂದಿನವರೆಗೂ ಶೋಷಿತರ ಅಮಾಯಕರ ನೊಂದವರ ದೀನ ದಲಿತರ ಬೆನ್ನೆಲುಬಾಗಿ ನಿಂತಿದೆ.



ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಒಂದು ಜಾತಿಗೆ ಸೀಮಿತವಲ್ಲ.
ದಲಿತ ಸಂಘರ್ಷ ಸಮಿತಿಯು ಕೇವಲ ಒಂದು ಜಾತಿ ಜನಾಂಗಕ್ಕೆ ಸೀಮಿತವಾಗಿಲ್ಲ ಹಿಂದುಳಿದ ವರ್ಗಗಳ ಶೋಷಿತ ಮುಖಂಡರು ಇರುವ ಏಕೈಕ ಸಂಘ ದಲಿತ ಸಂಘರ್ಷ ಸಮಿತಿ ಯಾಗಿದೆ.
ಯಾವುದೇ ಒಂದು ಜಾತಿ ಜನಗಕ್ಕೆ ಅವಮಾನ ಅಪಮಾನ ಅನ್ಯಾಯವಾದರೂ ಅತಿ ವೇಗವಾಗಿ ಸ್ಥಳಕ್ಕೆ ಧಾವಿಸುವ ಸಂಘ ಕರ್ನಾಟಕ ದಲಿತ ಸಂಘರ್ಷ ಸಮಿತಿ.

ತುಮಕೂರು ಜಿಲ್ಲೆಯಲ್ಲಿ 1976-1977ರಲ್ಲಿ ವಿದ್ಯಾರ್ಥಿಗಳಿಂದ ದಲಿತ ಸಂಘರ್ಷ ಸಮಿತಿಯು ಸ್ಥಾಪನೆ ಆಯಿತು ಅಂದಿನಿಂದ ಇಂದಿನವರೆಗೂ ತಾಲೂಕು ಮತ್ತು ಹೋಬಳಿಗಳಾದ್ಯಂತ ಶಾಖೆಗಳನ್ನು ಹೊಂದಿದೆ.



ಡಾ. ಬಿ ಆರ್ ಅಂಬೇಡ್ಕರ್ ಅವರು ಬರೆದ ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ :-
ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ಬರೆದ ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಶಿಕ್ಷಣ ಸಂಘಟನೆ ಹೋರಾಟ ದಲಿತ ಸಂಘರ್ಷ ಸಮಿತಿಯ ಮೂಲ ಮಂತ್ರವಾಗಿದೆ.

ದಲಿತ ಸಂಘರ್ಷ ಸಮಿತಿಯ ಹೆಸರು ದುರ್ಬಳಕೆ :-
ಕೆಲವು ದಲಿತ ಮುಖಂಡರು ತಮ್ಮ ಹೊಟ್ಟೆಪಾಡಿಗಾಗಿ ಸರ್ಕಾರಿ ಇಲಾಖೆಗಳಲ್ಲಿ ಅಧಿಕಾರಿಗಳ ಬಳಿ ದಲಿತ ಸಂಘರ್ಷ ಸಮಿತಿಯ ಹೆಸರಿನಲ್ಲಿ ಹಣ ವಸೂಲತಿ ಮಾಡುತ್ತಿರುವುದು ಬಹಳ ಖಂಡನೀಯ ಎಂದು ಕಿಡಿ ಕಾರಿದರು.

ತಾಲೂಕಿನಲ್ಲಿ ದಲಿತ ಸಂಘರ್ಷ ಸಮಿತಿಯು ಪ್ರಬಲವಾಗಬೇಕು :
ಗುಬ್ಬಿ ತಾಲೂಕಿನಲ್ಲಿದಲಿತ ಸಂಘರ್ಷ ಸಮಿತಿಯು ಪ್ರಥಮವಾಗಿ ಕೆಟ್ಟದಗುಪ್ಪೆ ಇಂದ ಆರಂಭವಾಯಿತು ಬಿದರೆ ಹಳ್ಳಕಾವಲ್ ದಲಿತ ರೈತರಿಗೆ ಅನ್ಯಾಯವಾದಾಗ ನಿಟ್ಟೂರಿನಿಂದ ಗುಬ್ಬಿಯವರಿಗೆ ಪಾದಯಾತ್ರೆ ಬೆಳೆಸಲಾಯಿತು.
ಇತ್ತೀಚಿನ ದಿನಗಳಲ್ಲಿ ಪೆದ್ದನಹಳ್ಳಿ ದಲಿತ ಯುವಕರ ಜೋಡಿ ಕೊಲೆ ಪ್ರಕರಣಗಳು ನಿಟ್ಟೂರಿನ ಮುಳಕಟ್ಟಮ್ಮ ದೇವಾಲಯದ ಪ್ರಕರಣಗಳು ದಲಿತ ಸಂಘರ್ಷ ಸಮಿತಿಯ ಸಡಿಲಿಕರಣದಿಂದ ಪ್ರಕರಣಗಳು ಕಣ್ಮರೆಯಾಗಿವೆ.
ಹಾಗಾಗಿ ಗುಬ್ಬಿ ತಾಲೂಕಿನಲ್ಲಿ ದಲಿತ ಸಂಘರ್ಷ ಸಮಿತಿಯು ಪ್ರಬಲವಾಗಬೇಕಿದೆ.
ಶಿಕ್ಷಣವಂತರಾಗಬೇಕು ಸಂಘಟಿತರಾಗಬೇಕು ಹೋರಾಟದ ಮನೋಭಾವನೆ ಬೆಳೆಸಿಕೊಳ್ಳಬೇಕು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ಬರೆದ ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.



ಈ ಸಂದರ್ಭದಲ್ಲಿ ಗುಬ್ಬಿ ದ ಸಂ ಸ ತಾಲೂಕು ಸಂಚಾಲಕ ಚೇಳೂರು ಶಿವನಂಜಪ್ಪ, ಜಿಲ್ಲಾ ಸಂ ಸಂಚಾಲಕ ಲಕ್ಕೆನಹಳ್ಳಿ ನರಸಿಯಪ್ಪ, ಮಹಿಳಾ ಜಿಲ್ಲಾ , ಸಂ, ಲಾವಣ್ಯ, ನಗರ ಸಂಚಾಲಕ ನರೇಂದ್ರಬಾಬು, ಮಾರಶೆಟ್ಟಿಹಳ್ಳಿ ಬಸವರಾಜು, ಮಡೇನಹಳ್ಳಿ ದೊಡ್ಡಯ್ಯ, ಅತ್ತಿಕಟ್ಟೆ ಚೇತನ್, ಜಿ ಹೊಸಳ್ಳಿ ರವೀಶ್, ಪುಟ್ಟರಾಜು, ದೊಡ್ಡಮ್ಮ, ಕೋಟೆ ಜಯಣ್ಣ, ಬಸವರಾಜು, ಇತರರು ಹಾಜರಿದ್ದರು.

ವರದಿ

ಗುಬ್ಬಿ: ಶ್ರೀಕಾಂತ್

Leave a Reply

Your email address will not be published. Required fields are marked *