
Janataa24 NEWS DESK
ಗುಬ್ಬಿ: ತಾಲೂಕಿನ ಕಡಬ ಹೋಬಳಿಯ ಬೆಣ್ಣೂರು ಗ್ರಾಮದ ದಿವ್ಯಂಗ ಚೇತನ ಗೋವಿಂದರಾಜು ಎಂಬುವರಿಗೆ ಸ್ವಾವಲಂಬಿ ಬದುಕು ನಡೆಸಲು ತುಮಕೂರು ಜಿಲ್ಲಾ ಸವಿತಾ ಸಮಾಜವು ಕ್ಷೌರ ಕುಟೀರವನ್ನು ನಿರ್ಮಿಸಿ ಕೊಟ್ಟಿದೆ.
ಸವಿತಾ ಸಮಾಜದ ಯುವ ಘಟಕದ ಜಿಲ್ಲಾಅಧ್ಯಕ್ಷ ಕಟ್ ವೆಲ್ ರಂಗನಾಥ್ ಮಾತನಾಡಿ
ಸವಿತಾ ಸಮಾಜದ ದಿವ್ಯಂಗ ಚೇತನನೊಬ್ಬ ಸ್ವಾವಲಂಬಿಯಾಗಿ ನಿಲ್ಲಬೇಕೆಂಬ ಛಲ ಆದರೆ ಆರ್ಥಿಕವಾಗಿ ಬಲವಿಲ್ಲ, ಇಂತಹ ಸಮಯದಲ್ಲಿ ಗೋವಿಂದರಾಜು ಎಂಬ ದಿವ್ಯಂಗ ಚೇತನನಿಗೆ ತುಮಕೂರು ಜಿಲ್ಲಾ ಸವಿತಾ ಸಮಾಜ ಯುವ ಪಡೆಯು ಕ್ಷೌರಕುಟೀರ ನಿರ್ಮಿಸಿಕೊಟ್ಟು ಸ್ವಾಭಿಮಾನಿ ಜೀವನಕ್ಕೆ ದಾರಿ ಮಾಡಿಕೊಟ್ಟಿದೆ.
ರಾಜ್ಯಸಭಾ ಸದಸ್ಯರಾಗಿದ್ದ ದಿವಂಗತ ಅಶೋಕ ಗಸ್ತಿ ರವರ ಸ್ಮರಣಾರ್ಥ ಅಶೋಕ್ ಗಸ್ತಿ ಹೇರ್ ಸಲೂನ್ ಹೆಸರಿನಲ್ಲಿ ಪ್ರಾರಂಭಿಸಲಾಗಿದೆ .
ತುಮಕೂರು ಜಿಲ್ಲಾ ಸವಿತಾ ಯುವಪಡೆಯು 126ಸದಸ್ಯರನ್ನು ಒಳಗೊಂಡಿದ್ದು ಘಟಕ ಪ್ರಾರಂಭವಾಗಿ ಎರಡು ವರ್ಷ ಪೂರೈಸಿದ ಸುಸಂದರ್ಭದಲ್ಲಿ ಯುವ ಘಟಕದ ವತಿಯಿಂದ, ಮಾನವ ಸಂಘ ಜೀವಿ ಪರಸ್ಪರ ಸಹಕಾರ ದಿಂದ ಜೀವನ ನಡೆಸಬೇಕಾಗಿರುವುದು ಸಮಾಜದ ನಿಯಮ, ಅಸಹಾಯಕರಿಗೆ ನೆರವು ನೀಡುವುದು, ತುಳಿತಕ್ಕೆ ಒಳಗಾದವರನ್ನು ಮೇಲೆತ್ತುವುದು ಸಂಘದ ಧ್ಯೇಯವಾಗಿದ್ದು.
ಅಸಹಾಯಕರಿಗೆ ಸರ್ಕಾರವೇ ನೆರವು ನೀಡಲಿ ಎಂದು ಕಾಯುವವರ ಮಧ್ಯೆ ಕಷ್ಟದಲ್ಲಿ ಇದ್ದ ವ್ಯಕ್ತಿಗೆ ತುಮಕೂರಿನ ಜಿಲ್ಲಾ ಸವಿತಾ ಸಮಾಜ ಯುವ ಪಡೆ ವತಿಯಿಂದ ಕ್ಷೌರ ಕುಟೀರ ನಿರ್ಮಿಸಿ ಕೊಟ್ಟು, ಇಡೀ ರಾಜ್ಯಕ್ಕೆ ಮಾದರಿಯಾದ ಸಂಘಟನೆ ಎಂಬ ಹೆಗ್ಗಳಿಕೆಗೆ ಪಾತ್ರ ವಾಗಿದೆ. ಸಮಾಜಕ್ಕೆ ಸವಿತಾ ಸಮಾಜದ ಕ್ಷೌರಿಕರ ಸೇವೆ ಅಗತ್ಯವಾಗಿ ಬೇಕಾಗಿದ್ದು, ಸ್ವಾವಲಂಭಿ ಜೀವನ ನಡೆಸಲು ಸ್ವಯಂ ಉದ್ಯೋಗ ಕೈಗೊಳ್ಳಲು ಬಂಡವಾಳದ ಕೊರತೆ ಇರುವ ಅಸಹಾಯಕ ಸ್ಥಿತಿಯಲ್ಲಿರುವವರಿಗೆ ಸರ್ಕಾರಗಳು ನೆರವು ನೀಡಬೇಕು, ಆದರೆ ಸರ್ಕಾರ ನೆರವು ನೀಡದಿದ್ದರೂ ಮಾನವೀಯತೆ ಆಧಾರದ ಮೇಲೆ ನೆರವು ನೀಡಬಹುದು ಎಂದು ಯುವಜನತೆ ರುಜುವಾತುಪಡಿಸಿದೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಸಮುದಾಯದ ಮುಖಂಡರಾದ ಸ್ವದೇಶಿ ವಿಶ್ವಣ್ಣ, ನಾಮದೇವ್ ನಾಗರಾಜು , ಯಲಹಂಕ ಲಕ್ಷೀನಾರಾಯಣ್ , ನಿಟ್ಟೂರು ಅಧ್ಯಕ್ಷಕರಿಯಣ್ಣ, ರಾಮಸ್ವಾಮಿ, ಗುಬ್ಬಿ ಯುವ ಪಡೆ ಅಧ್ಯಕ್ಷರಮೇಶ್ ಎನ್, ಗುಬ್ಬಿ ಲಕ್ಷೀನಾರಾಯಣ್(ಪಾಪಣ್ಣ) ಮಾಜಿ ಅಧ್ಯಕ್ಷರು ಮುಕುಂದರಾಜು, ನಟರಾಜು , ಮಂಡ್ಯ ಜಯರಾಮಣ್ಣ, ಜಡೇಕುಂಟೇ ರಾಜು, ಚಂದ್ರು ದಾಸರಹಳ್ಳಿ, ಹಾಗೂ ಜಿಲ್ಲಾ ಮಟ್ಟದ ಯುವ ಪಡೆ ಸದಸ್ಯರು ಮತ್ತು ಸವಿತಾ ಸಮಾಜದ ಮುಖಂಡರು ಹಾಜರಿದ್ದರು.
ವರದಿ
ಗುಬ್ಬಿ: ಶ್ರೀಕಾಂತ್